ನಾನೇ ಟಾರ್ಗೆಟ್, ಅವರಿಗೆ ನನ್ನ ಮೇಲೆ ಭಯ ಇರಬಹುದು: ಸಿದ್ದರಾಮಯ್ಯ

ಬೆಂಗಳೂರು, ನ 20: ಹದಿನೈದು ಕ್ಷೇತ್ರಗಳ ಅಸೆಂಬ್ಲಿ ಉಪಚುನಾವಣೆಯ ಹೊಸ್ತಿಲಲ್ಲಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸರಕಾರ ಮತ್ತು ಬಿಜೆಪಿ ಮುಖಂಡರ ವಿರುದ್ದ, ತಮ್ಮ ಟೀಕೆ/ವ್ಯಂಗ್ಯವನ್ನು ಮುಂದುವರಿಸಿದ್ದಾರೆ.

Recommended Video

      ಜೆಡಿಎಸ್ ಜೊತೆ ಮೈತ್ರಿಯ ಸುಳಿವನ್ನು ಕೊಟ್ರಾ ಸಿದ್ದರಾಮಯ್ಯ? |Oneindia kannada

      ಆರೋಗ್ಯ ಸಚಿವ ಶ್ರೀರಾಮುಲು ವಿರುದ್ದ ಟ್ವೀಟ್ ಸಮರದ ನಂತರ, ಮತ್ತೊಂದು ಸುತ್ತು ಸಿದ್ದರಾಮಯ್ಯ, ರಾಮುಲು ಅವರ ಕಾಲೆಳೆದಿದ್ದಾರೆ. ಸಿದ್ದರಾಮಯ್ಯ ಮಾಡಿರುವ ಸಾಲುಸಾಲು ಟ್ವೀಟ್ ಹೀಗಿದೆ:

      "ಪಕ್ಷಾಂತರ ಮಾಡಿ ಸರ್ಕಾರ ಬೀಳಿಸಿದ ಅನರ್ಹ ಶಾಸಕರು ಸೋಲಬೇಕು. ಈ ಚುನಾವಣೆಯಲ್ಲಿ ಜನತೆ ನೀಡುವ ತೀರ್ಪು ಬರಿ ಅನರ್ಹ ಶಾಸಕರಿಗಷ್ಟೇ ಅಲ್ಲ ಎಲ್ಲ‌ ರಾಜಕಾರಣಿಗಳಿಗೂ ಒಂದು ಪಾಠವಾಗಬೇಕು. ಹೀಗಾದಾಗ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾಧ್ಯ" - ಸಿದ್ದರಾಮಯ್ಯ.

      "ನಮ್ಮಂತೆ ಮಾಜಿ ಮುಖ್ಯಮಂತ್ರಿ @hd_kumaraswamy ಅವರು ಸಹ ಪಕ್ಷಾಂತರಿಗಳನ್ನು ಸೋಲಿಸಬೇಕೆಂಬ ಉದ್ದೇಶ ಹೊಂದಿರುವುದು ಸಂತೋಷದ ವಿಚಾರ. ಸ್ವಾರ್ಥ ಸಾಧನೆಗಾಗಿ ಸಂವಿಧಾನದ ನಿಯಮಗಳನ್ನು ಮೀರಿ, ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವವರಿಗೆ ಪಾಠ ಕಲಿಸಬೇಕು ಎಂಬುದು ನಮ್ಮೆಲ್ಲರ ಸಾಮಾನ್ಯ ಉದ್ದೇಶ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

      ಜನಾಭಿಪ್ರಾಯಕ್ಕೆ ಬೆಲೆ ಇರುತ್ತದೆಯೇ

      ಜನಾಭಿಪ್ರಾಯಕ್ಕೆ ಬೆಲೆ ಇರುತ್ತದೆಯೇ

      "ಸಂವಿಧಾನದಲ್ಲಿ ಪಕ್ಷಾಂತರ ಕಾಯ್ದೆಯನ್ನು ಸೇರಿಸಿರುವ ಉದ್ದೇಶವೇ ಮುಖ್ಯಮಂತ್ರಿ @BSYBJP ಅವರಿಗೆ ಗೊತ್ತಿಲ್ಲ. ಶಾಸಕರು ಮನಸ್ಸಿಗೆ ಬಂದಂತೆ ಪಕ್ಷ ಬದಲಾವಣೆ ಮಾಡುವಂತಿದ್ದರೆ ಜನಾಭಿಪ್ರಾಯಕ್ಕೆ ಬೆಲೆ ಇರುತ್ತದೆಯೇ? ಹಿಂದೆ ಈ ಕಾನೂನು ಜಾರಿಗೆ ತರುವಾಗ ಬಿಜೆಪಿಯವರು ಸಹ ಬೆಂಬಲಿಸಿದ್ದರು ಎಂಬುದನ್ನು ಅವರು ಮರೆತಂತಿದೆ" - ಸಿದ್ದರಾಮಯ್ಯ ಟ್ವೀಟ್.

      ಅವರಿಗೆ ನನ್ನ ಮೇಲೆ ಭಯವೂ ಇರಬಹುದು

      ಅವರಿಗೆ ನನ್ನ ಮೇಲೆ ಭಯವೂ ಇರಬಹುದು

      "ಎಲ್ಲಾ ಪಕ್ಷಗಳ ನಾಯಕರು ನನ್ನನ್ನೇ ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಅವರಿಗೆ ನನ್ನ ಮೇಲೆ ಭಯವೂ ಇರಬಹುದು ಅಥವಾ ನನ್ನನ್ನು ಭಯಪಡಿಸುವ ಉದ್ದೇಶವೂ ಇರಬಹುದು. ಇಂಥದ್ದನ್ನೆಲ್ಲ ನೋಡಿ, ಅನುಭವಿಸಿಯೇ ನಾನು ರಾಜಕಾರಣದಲ್ಲಿ ಇನ್ನೂ ಉಳಿದಿರುವುದು" ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ, ತಮ್ಮ ವಿರೋಧಿಗಳಿಗೆ ಚಾಟಿ ಬೀಸಿದ್ದಾರೆ.

      ಶ್ರೀರಾಮುಲು ಕರ್ನಾಟಕದ ಮೋಸ್ಟ್ ಪಾಪ್ಯುಲರ್ ಲೀಡರ್

      ಶ್ರೀರಾಮುಲು ಕರ್ನಾಟಕದ ಮೋಸ್ಟ್ ಪಾಪ್ಯುಲರ್ ಲೀಡರ್

      "ಶ್ರೀರಾಮುಲು ಕರ್ನಾಟಕದ ಮೋಸ್ಟ್ ಪಾಪ್ಯುಲರ್ ಲೀಡರ್, ಯಾರಿಗೆ ಬೇಕಾದರೂ ಚಾಲೆಂಜ್ ಮಾಡಬಲ್ಲರು, ಯಾರ ಎದುರು ಬೇಕಾದರೂ ತೊಡೆ ತಟ್ಟಬಲ್ಲರು. ನಾನು ಅವರಿಗೆ ಚಾಲೆಂಜ್ ಮಾಡುವಷ್ಟು ಪಾಪ್ಯುಲರ್ ನಾಯಕನಲ್ಲ. ಒಂದು ಬಾರಿ ಸೋಲಿಸಿದ್ದೀನಿ. ಅಷ್ಟು ಸಾಕು" - ಇದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿರುವ ಟ್ವೀಟ್.

      ಸಿಎಂ ರಾಜಕೀಯ ದುರುದ್ದೇಶದಿಂದ ಕೂಡಿದ ಹೇಳಿಕೆ ನೀಡುವುದು ಸರಿಯಲ್ಲ

      ಸಿಎಂ ರಾಜಕೀಯ ದುರುದ್ದೇಶದಿಂದ ಕೂಡಿದ ಹೇಳಿಕೆ ನೀಡುವುದು ಸರಿಯಲ್ಲ

      "ನಾವು ಯಾವ ಕೋಮುವಾದಿ ಸಂಘಟನೆಯನ್ನು ಪೋಷಿಸಿಕೊಂಡು ಬಂದಿಲ್ಲ. ಕೋಮುವಾದಿ ಚಟುವಟಿಕೆಗಳಲ್ಲಿ ಭಾಗವಹಿಸುವ ಯಾವುದೇ ಸಂಘಟನೆಗಳಾದರೂ ಅವುಗಳ ಮೇಲೆ ಕಠಿಣ ಕಾನೂನು ಕ್ರಮ‌ ಜರುಗಿಸಲಿ. ರಾಜ್ಯದ ಮುಖ್ಯಮಂತ್ರಿಯಾಗಿ @BSYBJP ಅವರು ಶಾಸಕರೊಬ್ಬರ ಮೇಲಿನ ಹಲ್ಲೆ ವಿಚಾರದಲ್ಲಿ ರಾಜಕೀಯ ದುರುದ್ದೇಶದಿಂದ ಕೂಡಿದ ಹೇಳಿಕೆ ನೀಡುವುದು ಸರಿಯಲ್ಲ" ಎಂದೂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

      ನನ್ನ ವಿರುದ್ಧ ಚುನಾವಣೆಯಲ್ಲಿ ಸೋತಿದ್ದರು, ಪಾಪ

      ನನ್ನ ವಿರುದ್ಧ ಚುನಾವಣೆಯಲ್ಲಿ ಸೋತಿದ್ದರು, ಪಾಪ

      "ಸಚಿವ ಶ್ರೀರಾಮುಲು ನನ್ನ ವಿರುದ್ಧ ಚುನಾವಣೆಯಲ್ಲಿ ಸೋತಿದ್ದರು, ಪಾಪ ಇನ್ನೂ ಆ ಹತಾಶೆಯಿಂದ ಹೊರಬಂದಂತೆ ಕಾಣುತ್ತಿಲ್ಲ. ಅದಕ್ಕೆ‌ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಹಿಂದೆಯೇ ರಾಜೀನಾಮೆ ಕೊಡಬೇಕಿತ್ತು. ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆಂದು ಪ್ರಚಾರ ಮಾಡಿದ್ದರು, ಕೊನೆಗೆ ಉಪಮುಖ್ಯಮಂತ್ರಿ ಮಾಡಿದರಾ?" ಎಂದು ಸಿದ್ದರಾಮಯ್ಯ, ಸಚಿವ ಶ್ರೀರಾಮುಲು ಕಾಲೆಳೆದಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+