Karnataka Opinion Poll 2023: ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗೆ ಮುನ್ನಡೆ !ಯಾವ್ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಬೆಂಗಳೂರು,ಮೇ 2: ಕರ್ನಾಟಕ ಚುನಾವಣಾ ಅಖಾಡದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಯುತ್ತಿದೆ. ಮಿಷನ್ 150 ಟಾರ್ಗೆಟ್ ಹಾಕಿಕೊಂಡಿರುವ ಬಿಜೆಪಿ ಹಲವು ತಂತ್ರಗಳ ಜೊತೆಗೆ ಹೊಸಪ್ರಯೋಗಗಳನ್ನ ನಡೆಸುತ್ತಿದ್ದು, ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಹಲವು ಹೊಸ ಹೊಸ ತಂತ್ರಗಳ ಮೂಲಕ ಪ್ರಚಾರವನ್ನ ನಡೆಸುತ್ತಿದ್ದಾರೆ.
ಈ ಬಾರಿಯ 2023 ರ ವಿಧಾನಸಭಾ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಹಲವು ಚುನಾವಣಾ ಸಮೀಕ್ಷೆ ಪ್ರಕಟದಿಂದಾಗಿ ಬಿಜೆಪಿಗೆ ಅಘಾತವಾಗಿದ್ದು, ಆಡಳಿತ ವಿರೋಧಿ ಅಲೆಯ ನಡುವೆಯೂ ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಳ್ಳಲಿದೆ ಎಂದು ಝೀ ನ್ಯೂಸ್-ಮ್ಯಾಟ್ರಿಜ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಿಂದ ತಿಳಿದು ಬಂದಿದೆ.

ಹೌದು, ಈಗಾಗಲೇ ಗೆಲ್ಲುವ ತಂತ್ರಗಾರಿಕೆಯ ಜೊತೆಗೆ ಹಲವು ಸಮೀಕ್ಷೆಗಳನ್ನ ನಡೆಸಿರುವ ಪಕ್ಷಗಳು ಯಾವ ಕ್ಷೇತ್ರದಲ್ಲಿ ಸೋಲು ಉಂಟಾಗಿದಿಯೋ ಆ ಕ್ಷೇತ್ರದ ಮೇಲೆ ಹೆಚ್ಚಿನ ಒತ್ತುಕೊಡುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಮುಂದಾಗಿದ್ದು, ಝೀ ನ್ಯೂಸ್-ಮ್ಯಾಟ್ರಿಜ್ ಸಮೀಕ್ಷೆ ಪ್ರಕಟಗೊಂಡಿದೆ.
2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಪಡೆದು ಅಧಿಕಾರದ ಸಮೀಪ ಬರಲಿದೆ ಎಂದು ಝೀ ನ್ಯೂಸ್-ಮ್ಯಾಟ್ರಿಜ್ ಸಮೀಕ್ಷೆ ಹೇಳಿದೆ. ಇನ್ನೂ ಕಾಂಗ್ರೆಸ್ ಪಕ್ಷವೂ ಎರಡನೇ ಸ್ಥಾನವನ್ನ ಪಡೆದರೇ, ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ ಮೂರನೇ ಸ್ಥಾನವನ್ನ ಪಡೆಯಲಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಝೀ ನ್ಯೂಸ್-ಮ್ಯಾಟ್ರಿಜ್ ಪ್ರಕಾರ ಬಿಜೆಪಿ 103 ರಿಂದ 115 ಸ್ಥಾನ ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದ್ದು, ಕಾಂಗ್ರೆಸ್ 79 ರಿಂದ 91, ಜೆಡಿಎಸ್ 26 ರಿಂದ 36 ಸೀಟು ಗೆಲ್ಲಬಹುದು ಎಂದು ಸಮೀಕ್ಷೆ ಅಂದಾಜಿಸಿದೆ. ಇನ್ನೂ ಹಲವು ಸಮೀಕ್ಷೆಯಲ್ಲಿ ಬಿಜೆಪಿ ಎರಡನೇ ಸ್ಥಾನವನ್ನ ಪಡೆದಿದ್ದು ಅದಕ್ಕೆ ಕಾರಣ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಕಾರಣ ಎಂದು ಹೇಳಲಾಗುತ್ತಿದ್ದು, ಝೀ ನ್ಯೂಸ್-ಮ್ಯಾಟ್ರಿಜ್ ಸಮೀಕ್ಷೆಯಲ್ಲಿ ಬಿಜೆಪಿ ಶೇ.42 ರಷ್ಟು ಮತ ಪ್ರಮಾಣ ಪಡೆಯಲಿದ್ದು, ಕಾಂಗ್ರೆಸ್ ಶೇ. 40 ಜೆಡಿಎಸ್ ಶೇ.15ರಷ್ಟು ಮತಗಳಿಸಲಿದೆ ಎನ್ನಲಾಗಿದೆ.
ಇನ್ನೂ ರಾಜ್ಯದಲ್ಲಿ ಪ್ರಬಲ ಸಮುದಾಯಗಳಾದ ಒಕ್ಕಲಿಗ ಹಾಗೂ ಲಿಂಗಾಯತ ಮತಗಳಲ್ಲಿ ಲಿಂಗಾಯತ ಮತದಾರರು ಆಡಳಿತರೂಢ ಬಿಜೆಪಿ ಪರ ಒಲವು ಹೆಚ್ಚಿದ್ದು, ಶೇ.66ರಷ್ಟು ಲಿಂಗಾಯತರು ಬಿಜೆಪಿ ಪರ ಒಲವು ತೋರಿದ್ದರೆ, 16 ರಷ್ಟು ಕಾಂಗ್ರೆಸ್, 8 ರಷ್ಟು ಜೆಡಿಎಸ್‌ಗೆ ಮತ ನೀಡುವ ಉಮೇದಿನಲ್ಲಿಇದ್ದಾರೆ. ಶೇ.52ರಷ್ಟು ಒಕ್ಕಲಿಗರು ಜೆಡಿಎಸ್‌ಗೆ ಮತ ನೀಡಲಿದ್ದಾರೆ, ಶೇ.28ರಷ್ಟು ಕಾಂಗ್ರೆಸ್, ಶೇ.4ರಷ್ಟು ಇತರೆಯವರಿಗೆ ಮತ ಚಲಾಯಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ ಗೆ ಮೋದಿ ಪ್ರಚಾರವೇ ದೊಡ್ಡ ವರದಾನವಾಗಲಿದ್ದು, ಶೇ.44ರಷ್ಟು ಮಂದಿ ಪ್ರಧಾನಿ ಮೋದಿ ಅವರ ಪ್ರಚಾರದಿಂದ ಬಿಜೆಪಿಗೆ ಲಾಭವಾಗಲಿದ್ದು, ಶೇ.34 ರಷ್ಟು ಮಂದಿ ಸ್ವಲ್ಪ ಮಟ್ಟಿಗೆ ಪ್ರಯೋಜನವಾಗಬಹುದು. ಅಲ್ಲದೇ ಶೇ.22ರಷ್ಟು ಜನ ಪ್ರಭಾವ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಝೀ ನ್ಯೂಸ್-ಮ್ಯಾಟ್ರಿಜ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಮತ್ತೆ ಮುಖ್ಯಮಂತ್ರಿ ಯಾರಾಗಬೇಕು ಎಂದು ಸಮೀಕ್ಷೆ ನಡೆಸಿದ್ದು, ಹಾಲಿ ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಅವರೇ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಶೇ.28ರಷ್ಟು ಜನ ಬಯಸಿದ್ದರೆ, ಕಾಂಗ್ರೆಸ್ ನ ನಾಯಕ ಸಿದ್ದರಾಮಯ್ಯ ಅವರ ಪರವಾಗಿ ಶೇ.24ರಷ್ಟು ಜನ ಒಲವು ತೋರಿದ್ದಾರೆ. ಶೇ.11ರಷ್ಟು ಮಂದಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಸಿಎಂ ಆಗಬೇಕು ಎಂದು ಆಸೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications