ದಸರಾ ವಿಶೇಷ: ಹೊರ ರಾಜ್ಯದ ವಾಹನಗಳಿಗೆ ಪ್ರವೇಶ ಶುಲ್ಕದಿಂದ ವಿನಾಯಿತಿ

ಒಂಬತ್ತು ದಿನಗಳ ಕಾಲ ನಡೆಯುವ ನಾಡ ಹಬ್ಬ ದಸರಾ ವಿಶೇಷವಾಗಿ, ಹೊರ ರಾಜ್ಯದಿಂದ ಬರುವ ವಾಹನಗಳಿಗೆ ಪ್ರವೇಶ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಸೋಮವಾರ ಕರ್ನಾಟಕ ಸರ್ಕಾರ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ.

ದಸರಾ ಹಬ್ಬದ ಸಂದರ್ಭದಲ್ಲಿ ಇತರೆ ರಾಜ್ಯಗಳಿಂದ ಮೈಸೂರು ಮತ್ತು ಕೃಷ್ಣರಾಜ ಸಾಗರಕ್ಕೆ (ಕೆಆರ್‌ಎಸ್) ತೆರಳುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ಸಿಗಲಿದೆ. ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಮತ್ತು ಪ್ರವಾಸೋದ್ಯಮಕ್ಕೆ ಬೆಂಬಲ ನೀಡಲು ಈ ಆದೇಶ ನೀಡಲಾಗಿದೆ.

 Karnataka Offers Entry Fee Exemption to Out-of-State Tourist Vehicles Until October 24

ಇತರೆ ರಾಜ್ಯಗಳಲ್ಲಿ ನೋಂದಣಿಯಾಗಿರುವ ಪ್ರವಾಸಿ ವಾಹನಗಳು ಮತ್ತು ಆ ರಾಜ್ಯಗಳಲ್ಲಿ ರಸ್ತೆ ತೆರಿಗೆ ಪಾವತಿಸುವ ವಾಹನಗಳಿಗೆ ಅಕ್ಟೋಬರ್ 16 ಮತ್ತು 24 ರ ನಡುವೆ ಕರ್ನಾಟಕದಲ್ಲಿ ಪ್ರವೇಶ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.

ಈ ಸ್ಥಳಗಳಿಗೆ ಮಾತ್ರ ಅನ್ವಯ

ದಸರಾ ಮಹೋತ್ಸವದ ಒಂಬತ್ತು ದಿನಗಳ ಅವಧಿಯಲ್ಲಿ ಮೈಸೂರು ನಗರ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಅಣೆಕಟ್ಟೆಗೆ ತೆರಳುವ ವಾಹನಗಳು ಮಾತ್ರ ಶುಲ್ಕ ವಿನಾಯಿತಿ ಪಡೆಯಲು ಅರ್ಹವಾಗಿರುತ್ತವೆ. ತೆರಿಗೆ ವಿನಾಯಿತಿಗಳಿಗೆ ಅರ್ಹರಾಗಲು ಅವರು ವಿಶೇಷ ಪರವಾನಗಿಗಳನ್ನು ಪಡೆಯಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಹೇಳಿದೆ.

ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಅವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಆದರೆ ಒಂದು ವಾರ ಮುಂಚಿತವಾಗಿ ಈ ಆದೇಶ ಹೊರಡಿಸಬೇಕಿತ್ತು ಎಂದು ಹೇಳಿದ್ದಾರೆ.

ರಾಧಾಕೃಷ್ಣ ಹೊಳ್ಳ ಅವರ ಪ್ರಕಾರ, ಕೇರಳ ಮತ್ತು ತಮಿಳುನಾಡಿನಿಂದ ಮ್ಯಾಕ್ಸಿ ಕ್ಯಾಬ್‌ಗಳು, ಟ್ಯಾಕ್ಸಿಗಳು ಮತ್ತು ಪ್ರವಾಸಿ ಬಸ್‌ಗಳು ತೆರಿಗೆ ವಿನಾಯಿತಿಯಿಂದ ಹೆಚ್ಚಿನ ಪ್ರಯೋಜನ ಪಡೆಯಲಿವೆ. ದಸರಾ ಸಂದರ್ಭದಲ್ಲಿ ಪ್ರತಿದಿನ 2,000 ಟ್ಯಾಕ್ಸಿಗಳು, 1,000 ಮ್ಯಾಕ್ಸಿ ಕ್ಯಾಬ್‌ಗಳು ಮತ್ತು 300 ಪ್ರವಾಸಿ ಬಸ್‌ಗಳು ಮೈಸೂರು ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಬರುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ಪ್ರವೇಶ ಶುಲ್ಕ ಟ್ಯಾಕ್ಸಿಗಳಿಗೆ ರೂ 300, ಮ್ಯಾಕ್ಸಿ ಕ್ಯಾಬ್‌ಗಳಿಗೆ ರೂ 1,800-2,000 ಮತ್ತು ಬಸ್‌ಗಳಿಗೆ ಅವುಗಳ ಆಸನ ಸಾಮರ್ಥ್ಯದ ಆಧಾರದ ಮೇಲೆ ರೂ 15,000 ವರೆಗೆ ಇರುತ್ತದೆ. ಪ್ರತಿ ಪ್ರವೇಶಕ್ಕೆ ಶುಲ್ಕ ವಿಧಿಸಲಾಗುತ್ತದೆ ಅದು ಏಳು ದಿನಗಳವರೆಗೆ ಮಾನ್ಯವಾಗಿರುತ್ತದೆ ಎಂದರು.

ಸ್ಥಳೀಯ ಆರ್ಥಿಕತೆ ಸುಧಾರಣೆ

ತೆರಿಗೆ ವಿನಾಯಿತಿ ಇರುವುದರಿಂದ ದಸರಾ ಸಮಯದಲ್ಲಿ ಮೈಸೂರು ಮತ್ತು ಕೆಆರ್‌ಎಸ್‌ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಮಾಡಲಾಗಿದೆ. ಹೋಟೆಲ್ ಉದ್ಯಮದ ಜೊತೆ ಸ್ಥಳೀಯ ಆರ್ಥಿಕತೆ ಸುಧಾರಣೆಗೆ ಇದು ಕಾರಣವಾಗಲಿದೆ ಎಂದು ರಾಧಾಕೃಷ್ಣ ಹೇಳಿದ್ದಾರೆ.

ಮೈಸೂರು ದಸರಾದಂತೆ ಮಂಗಳೂರು ದಸರಾ ಕೂಡ ವಿಶೇಷವಾಗಿರುವುದರಿಂದ ಇಲ್ಲಿಗೂ ಕೂಡ ತೆರಿಗೆ ವಿನಾಯಿತಿ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. 32 ಒಕ್ಕೂಟಗಳನ್ನು ಪ್ರತಿನಿಧಿಸುವ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಿಂದ ನಷ್ಟವಾಗಿರುವುದರಿಂದ ಸರ್ಕಾರವು ಈ ವರ್ಷ ತೆರಿಗೆ ವಿನಾಯಿತಿಯನ್ನು ಘೋಷಿಸುವುದಿಲ್ಲ ಎಂದು ಆತಂಕದಲ್ಲಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+