ಕರ್ನಾಟಕದ ತುಣುಕು ಸುದ್ದಿಗಳ ರೌಂಡಪ್

ಬೆಂಗಳೂರು, ಅ. 13 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.

ಸಮಯ 5 ಗಂಟೆ : ಚಲಿಸುತ್ತಿದ್ದ ಬಸ್‌ನಲ್ಲಿಯೇ ಕೆಎಸ್ಆರ್‌ಟಿಸಿ ಚಾಲಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಕುಟುಟಾದ ಕಥಾಕಲ್ ಬಳಿ ನಡೆದಿದೆ. ಹಾವೇರಿಯಿಂದ ಕಾರವಾರಕ್ಕೆ ಹೊರಟಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಅಶೋಕ್ ಮೃತ ಚಾಲಕ.

ಸಮಯ 4 ಗಂಟೆ : ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತಗಚಗುಪ್ಪೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ, ಗ್ರಾಮದ ಸಮೀಪದ ಕಾಡಿನಲ್ಲಿ ಬೀಡುಬಿಟ್ಟ 11 ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ.

ಸಮಯ 3 ಗಂಟೆ : 2004ರಿಂದ 2014ರವರೆಗಿನ ವಿದ್ಯುತ್ ಖರೀದಿಯ ಸಂಪೂರ್ಣ ತನಿಖೆ ನಡೆಸಲು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ರಚಿಸಿದ್ದ ಸಮಿತಿ ತನ್ನ ತನಿಖೆಯನ್ನು ಸೋಮವಾರ ಆರಂಭಿಸಿದೆ. ಇಂಧನ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದ ಸಮಿತಿ ತನಿಖೆ ನಡೆಸಲಿದ್ದು, ಶಾಸಕರಾದ ರಮೇಶ್ ಕುಮಾರ್, ಶಿವಾನಂದ ಪಾಟೀಲ್, ಬಸವರಾಜ್ ಬೊಮ್ಮಾಯಿ ಸೇರಿದಂತೆ ಒಟ್ಟು 11 ಜನ ಸದಸ್ಯರು ಸಮಿತಿಯಲ್ಲಿದ್ದಾರೆ.

ಸಮಯ 2 ಗಂಟೆ : 'ರಾಜ್ಯದಲ್ಲಿ ವಿದ್ಯುತ್ ಅಭಾವ ಸೃಷ್ಟಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಿ ತಾವೇ ಮುಖ್ಯಮಂತ್ರಿಯಾಗಲು ಹೊರಟಿರುವ ಡಿ.ಕೆ.ಶಿವಕುಮಾರ್ ಕರ್ನಾಟಕವನ್ನು ಕತ್ತಲೆಗೆ ದೂಡುತ್ತಿದ್ದಾರೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ಸಮಯ 1 ಗಂಟೆ : 'ವೇಶ್ಯಾವೃತ್ತಿ ಕಾನೂನು ಬದ್ಧಗೊಳಿಸಿ' ಎಂದು ಕೂಡಲಸಂಗಮ ಬಸವಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ. [ಮಾತೆ ಮಹಾದೇವಿ ಹೇಳಿದ್ದೇನು ಇಲ್ಲಿದೆ ವಿವರ]

ಸಮಯ 12 ಗಂಟೆ : ಬಂಜೆತನ ನಿವಾರಿಸು­ವುದಾಗಿ ಸಾರ್ವಜ­­ನಿ­ಕರಿಂದ ಹಣ ಪಡೆದು ವಂಚಿಸಿದ ಮತ್ತು ಬಾಡಿಗೆ ತಾಯಿಯಿಂದ ಪಡೆದ ಮಗುವನ್ನು ಅದಲು ಬದಲು ಮಾಡಿರುವ ಆರೋಪ ಹೊತ್ತಿರುವ ಸ್ತ್ರೀರೋಗ ತಜ್ಞ ಕೆ.ಟಿ ಗುರುಮೂರ್ತಿ ಅವರ ವಿಚಾರಣೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿದೆ. [ಗುರುಮೂರ್ತಿ ಅವರ ಪ್ರಕರಣದ ವಿವರ ಇಲ್ಲಿದೆ]

ಸಮಯ 11 ಗಂಟೆ : ಜಿಟಿಟಿಸಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿ ಮಾಜಿ ಸಚಿವ ಸುರೇಶ್ ಕುಮಾರ್ ವಿಕಾಸಸೌಧದಲ್ಲಿ ವಾಣಿಜ್ಯ, ಕೈಗಾರಿಕಾ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅವರ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದಾರೆ.

Karnataka

ಸಮಯ 10 ಗಂಟೆ : ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಗತಿ ಪರಿಶೀಲಾಸಭೆ ಆರಂಭಿಸಿದ್ದಾರೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಸಮಯ 9 ಗಂಟೆ : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿಗಳು ಬೆಂಗಳೂರಿನ ಗಿರಿನಗರದಲ್ಲಿರುವ ಶಾಖಾ ಮಠಕ್ಕೆ ಸೋಮವಾರ ಬೆಳಗ್ಗೆ ಆಗಮಿಸಿದ್ದಾರೆ. ಸಿಐಡಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿರುವ ಹಿನ್ನಲೆಯಲ್ಲಿ ಅವರು ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಸಮಯ 8 ಗಂಟೆ : ಮೂರು ದಿನಗಳ ನಂತರ ಹುಟ್ಟಿ ಬರುತ್ತೇನೆ ಎಂದು ವಿಷಕುಡಿದು ಮೃತಪಟ್ಟಿದ್ದ ಅಥಣಿಯ ಗಣಪತಿ ಮಠದ ಆನಂದಸ್ವಾಮೀಜಿ ಅವರ ಮೃತದೇಹದ ಅಂತ್ಯ ಸಂಸ್ಕಾರ ಭಾನುವಾರ ತಡರಾತ್ರಿ ನಡೆದಿದೆ. ಭಕ್ತರೆಲ್ಲ ಮನೆಗೆ ಧಾವಿಸಿದ್ದು, ಕೆಲವು ಭಕ್ತರು ಇನ್ನೂ ಮಠದ ಆವರಣದಲ್ಲಿಯೇ ಬೀಡುಬಿಟ್ಟಿದ್ದು, ಸ್ವಾಮೀಜಿ ಬದುಕಿಬರುತ್ತಾರೆ ಎಂದು ಕಾದಿದ್ದಾರೆ. [ಆನಂದ ಸ್ವಾಮೀಜಿ ಆತ್ಮಹತ್ಯೆ]

ಸಮಯ 7.30 : ನಿರ್ಮಾಪಕ ಗೋವರ್ಧನಮೂರ್ತಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಯುವತಿಯ ಪರನಿಂತಿದ್ದ ಮಾನವ ಹಕ್ಕು ಸಂಸ್ಥೆಯ ಮಮತಾ ಅವರ ಕಾರಿನ ಗಾಜುಗಳನ್ನು ದುಷ್ಕರ್ಮಿಗಳು ಭಾನುವಾರ ರಾತ್ರಿ ಪುಡಿ-ಪುಡಿ ಮಾಡಿದ್ದಾರೆ. ಬೆಂಗಳೂರಿನ ಡಾ.ರಾಜ್‌ಕುಮಾರ್ ರಸ್ತೆಯ ವಿವೇಕಾನಂದ ಕಾಲೇಜು ಬಳಿ ಈ ಘಟನೆ ನಡೆದಿದ್ದು, ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+