Tirupati Laddu Row: ಕರ್ನಾಟಕದ ಎಲ್ಲ ದೇವಾಲಯಗಳ ಅಡುಗೆ ಕೋಣೆಯಲ್ಲಿ ಸಿಸಿಟಿವಿ ಕಡ್ಡಾಯ, ಆದೇಶ
ಬೆಂಗಳೂರು, ಸೆಪ್ಟಂಬರ್ 30: ತಿರುಮಲ ತಿರುಪತಿ ದೇವಸ್ಥಾಣ (TTD) ಲಡ್ಡು ಪ್ರಸಾದದಲ್ಲಿ ಮೀನು ಎಣ್ಣೆ ಮತ್ತು ಪ್ರಾಣಿಗಳ ಕೊಬ್ಬು ಬಳಕೆ ಬೆಳಕಿಗೆ ಬಂದ ಬೆನ್ನಲ್ಲೆ ವಿವಿಧ ರಾಜ್ಯಗಳ ಸರ್ಕಾರ ಮತ್ತು ದೇವಸ್ಥಾನಗಳು, ಆಡಳಿತ ಮಂಡಳಿ ಹೈಅಲರ್ಟ್ ಆಗಿವೆ. ಇದೀಗ ಕರ್ನಾಟಕದಲ್ಲಿ ಎಲ್ಲ ವರ್ಗದ ದೇವಸ್ಥಾನಗಳಲ್ಲಿ ಉಗ್ರಾಣ ಮತ್ತು ಪ್ರಸಾದ ವಿತರಣೆ ಜಾಗದಲ್ಲಿ ಕಡ್ಡಾಯ ಸಿಸಿಟಿವಿ ಅಳವಡಿಕೆಗೆ ಆದೇಶ ಹೊರಡಿಸಲಾಗಿದೆ.
ಹೌದು, ಆಂಧ್ರದ ಲಡ್ಡು ಪ್ರಸಾದ್ ದಲ್ಲಿ ಹಂದಿ ಸೇರಿ ಇತರ ಪ್ರಾಣಿಗಳ ಕೊಬ್ಬು ಬಳಕೆ ವಿಚಾರ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೆ ಕರ್ನಾಟಕ ರಾಜ್ಯವು ಎಚ್ಚೆತ್ತುಕೊಂಡಿದೆ. ಇತ್ತೀಚೆಗೆ ರಾಜ್ಯದಲ್ಲಿ ಮುಜರಾಯಿ ಇಲಾಖೆಯು ತನ್ನ ವ್ಯಾಪ್ತಿಯಲ್ಲಿ ದೇವಸ್ಥಾನದಲ್ಲಿಗಳ ಒಂದಷ್ಟು ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿತ್ತು.

ಇದೀಗ ಮುಜರಾಯಿ ಇಲಾಖೆಯು ರಾಜ್ಯದ ಎಲ್ಲ ದೇವಸ್ಥಾನಗಳ ಉಗ್ರಾಣ ಮತ್ತು ಪ್ರಸಾದ ವಿತರಣೆ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಕೆ ಮಾಡಬೇಕು ಎಂಬ ಸೂಚನೆ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ದೇವಸ್ಥಾನದ ಪ್ರಸಾದ ವಿತರಣೆಗಳಲ್ಲಿ ಹೆಚ್ಚಿನ ಬಿಗಿ ಭದ್ರತೆ ಕೊಡುವ ಜೊತೆಗೆ ಆದ್ಯತೆ ನೀಡುತ್ತಿದೆ.
ಈ ಹಿಂದೆ ರಾಜ್ಯದಲ್ಲಿ ವಿವಿಧ ಬ್ರಾಂಡ್ ತುಪ್ಪಗಳ ಪರೀಕ್ಷೆಗೆ ಸರ್ಕಾರ ಸೂಚಿಸಿತ್ತು. ಅಲ್ಲದೇ ರಾಜ್ಯದ ದೇವಸ್ಥಾನಗಳ ಪ್ರಸಾದ್‌ವನ್ನು ಪರೀಕ್ಷೆಗೆ ಒಳಪಡಿಸಲು ಸೂಚನೆ ನೀಡಲಾಗಿತ್ತು. ಇದರ ಬೆನ್ನಲ್ಲೆ ಮುಜರಾಯಿ ಇಲಾಖೆ ದೇವಸ್ಥಾನದ ಉಗ್ರಾಣ ಮತ್ತು ಪ್ರಸಾದ್ ವಿತರಣೆಯ ಸ್ಥಳದಲ್ಲಿ ಸಿಸಿಟಿವಿ ಕಡ್ಡಾಯ ಮಾಡಿ ಆದೇಶಿಸಿದೆ. ಈ ಮೂಲಕ ಭಕ್ತಾಧಿಗಳಲ್ಲಿ ಯಾವುದೇ ಅನುಮಾನ ಹುಟ್ಟದಂತೆ ಕ್ರಮ ವಹಿಸುತ್ತಿದೆ.
ತಿರುಪತಿ ದೇವಸ್ಥಾನ ಶ್ರೀಮಂತ ದೇವಾಲಯ. ಲಕ್ಷಾಂತರ ಜನರು ಭೇಟಿ ನೀಡುವ ಪ್ರಮುಖ ಸ್ಥಳವಾಗಿದ್ದು, ಇಂತಹ ಪ್ರಮುಖ ಸ್ಥಳದಲ್ಲಿಯೇ ಹೀಗಾಗಿದೆ. ಇನ್ನೂ ಸಾಮಾನ್ಯ ದೇವಸ್ಥಾನಗಳ ಕಥೆ ಏನು ಎಂಬ ಮನಸ್ಥಿತಿಯಲ್ಲಿ ಸಾರ್ವಜನಿಕರಿದ್ದಾರೆ. ಈ ಕಾರಣದಿಂದಲೇ ಭಕ್ತಾಧಿಕಾರಿಗಳ ಅನುಮಾನ ತೊಲಗಿಸಲು ಈ ಕ್ರಮಕ್ಕೆ ಮುಂದಾಗಿದೆ ಎಂದು ಮುಜರಾಯಿ ಇಲಾಖೆ ತಿಳಿಸಿದೆ.
ಎಲ್ಲ ವರ್ಗ ದೇವಸ್ಥಾನಗಳಿಗೆ ಸಿಸಿಟಿವಿ ಕಡ್ಡಾಯ
ಕರ್ನಾಟಕ ರಾಜ್ಯ ಮುಜರಾಯಿ ಇಲಾಖೆಯ ಈ ಹಿಂದಿನ ನಿಯಮದ ಪ್ರಕಾರ, ರಾಜ್ಯದ 'ಎ' ವರ್ಗದ ದೇವಸ್ಥಾನಗಳಲ್ಲಿ ಮಾತ್ರವೇ ಸಿಸಿಟಿವಿ ಅಳವಡಿಕೆ ಮಾಡಲಾಗಿತ್ತು. ಇದೀಗ 'ಬಿ' ಹಾಗೂ 'ಸಿ' ವರ್ಗದ ದೇವಾಲಯಗಳ ಪ್ರಸಾದ, ಅಡುಗೆ ತಯಾರಿಕಾ ಕೊಠಡಿಯಲ್ಲಿ ಸಿಸಿಟಿವಿ ಅಳಡಿಕೆಗೆ ಸೂಚಿಸಲಾಗಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ ಆಡಳಿತ ಮಂಡಳಿ, ಮುಖ್ಯಸ್ಥರ ವಿರುದ್ಧ ಕ್ರಮ ಜರುಗಿಸುವ ಬಗ್ಗೆಯು ಆದೇಶದಲ್ಲಿ ಉಲ್ಲೇಖಿಸಿ ಎಚ್ಚರಿಕೆ ನೀಡಲಾಗಿದೆ.
ಬಿ ಮತ್ತು ಸಿ ವರ್ಗದ ದೇವಸ್ಥಾನಗಳಲ್ಲಿ ಭಾನುವಾರದಿಂದ ಸಿಸಿಟಿವಿ ಅಳವಡಿಕೆ ಕಾರ್ಯ ಆರಂಭವಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಬಹುತೇಕ ಎಲ್ಲ ದೇವಸ್ಥಾನಗಳು ಸಿಸಿಟಿವಿ ಕಣ್ಗಾವಲಿಗೆ ಬರಲಿವೆ.
ತಿಮ್ಮಪ್ಪನ ಸನ್ನಿಧಾನದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆಸ
ತಿರುಪತಿ ತಿಮ್ಮಪ್ಪನ ಸನ್ನಿದಾನದಲ್ಲಿ ನಡೆಯಬಾರದ ಅಚಾತುರ್ಯ ನಡೆದು ಹೋಗಿದೆ. ನಂಬಿಕೆ ಇಟ್ಟು ಕಣ್ಣಿಗೆ ಒತ್ತಿ ಕೈ ಮುಗಿದು ನಮಿಸಿ ಸ್ವೀಕರಿಸುವ ದೇವರ ಪ್ರಸಾದದಲ್ಲಿಯೇ ಪ್ರಾಣಿಕಗಳ ಕೊಬ್ಬು ಬಳಕೆ ಪತ್ತೆ ಯಾಗಿದೆ. ಇದು ರಾಜಕೀಯವಾಗಿಯೂ ಒಂದಷ್ಟು ಚರ್ಚೆ ಆದರೂ ಸಹಿತ, ಹಿಂದೂಗಳ ಭಾವನೆ ಧಕ್ಕೆ ಉಂಟು ಮಾಡಿದೆ.
ಆರೋಪಿಗಳು ಯಾರೇ ಆಗಲಿ ಅವರಿಗೆ ಶಿಕ್ಷೆ ಆಗಬೇಕು ಎಂದು ಹಿರಿಯ ಆಚಾರ್ಯತರು, ಹಿಂದೂ ಮುಖಂಡರು, ಸಾರ್ವಜನಿಕರು, ವಿಪಕ್ಷಗಳು ಆಗ್ರಹಿಸಿವೆ. ಸದ್ಯ ಈ ಕುರಿತು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಂದ ವರದಿ ಕೇಳಿದ್ದಾರೆ.












Click it and Unblock the Notifications