ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ಗೊಂದಲದ ನಡುವೆ ಹಿರಿಯ ಐಎಎಸ್ ಅಧಿಕಾರಿಗಳ ವರ್ಗಾವಣೆ

By Mahesh
|
Google Oneindia Kannada News

ಬೆಂಗಳೂರು, ಜೂನ್ 26: ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಬಜೆಟ್ ಮಂಡನೆ ಮಾಡಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಸರ್ಕಾರದ ಕಾರ್ಯವೈಖರಿ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಪಸ್ವರ ಎತ್ತಿದ್ದಾರೆ ಎಂದು ಸುದ್ದಿ ಬಂದಿದೆ.

ಆಡಳಿತ ಯಂತ್ರ ಚುರುಕುಗೊಳಿಸಲು ಪ್ರಮುಖ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರವು ಮಂಗಳವಾರದಂದು ಆದೇಶ ಹೊರಡಿಸಿದೆ.

ಆಡಳಿತ ಹಾಗೂ ಸಿಬ್ಬಂದ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶ ಪ್ರತಿಯಲ್ಲಿ 9 ಐಎಎಸ್ ಅಧಿಕಾರಿಗಳ ಹೆಸರಿದೆ. ಐಎಎಸ್ ಅಧಿಕಾರಿ ರಂದೀಪ್ ಅವರಿಗೆ ಇನ್ನೂ ಯಾವುದೇ ಇಲಾಖೆಗೆ ವರ್ಗಾವಣೆ ಮಾಡಿಲ್ಲ.

Karnataka : Manish, Kapil,BS Shekharappa and other IAs officier transferred

ವರ್ಗಾವಣೆಗೊಂಡ ಅಧಿಕಾರಿಗಳು:

ಎಂ.ಲಕ್ಷ್ಮಿನಾರಾಯಣ್​ - ಹೆಚ್ಚುವರಿ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ

ಡಾ.ಇ.ವಿ.ರಮಣರೆಡ್ಡಿ - ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ
ಕಪಿಲ್​ ಮೋಹನ್​ - ಡಿಜಿ ಆಡಳಿತ ಮತ್ತು ತರಬೇತಿ ಸಂಸ್ಥೆ ಮೈಸೂರು

ಟಿ.ಕೆ.ಅನಿಲ್​ ಕುಮಾರ್ - ವಸತಿ ಇಲಾಖೆ ಕಾರ್ಯದರ್ಶಿ

ಮೌನಿಶ್​ ಮುದ್ಗಿಲ್​ - ಆಯುಕ್ತರು ಸರ್ವೇ ಮತ್ತು ಭೂ ದಾಖಲೆ ಇಲಾಖೆ ಬೆಂಗಳೂರು

ಬಿ.ಎಸ್​.ಶೇಖರಪ್ಪ - ನಿರ್ದೇಶಕರು, ಕಾಡಾ, ಬೆಂಗಳೂರು

ಬಿ.ಎಂ.ವಿಜಯ್​ ಶಂಕರ್​ - ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ

ನಿತೀಶ್​ ಪಾಟೀಲ್​ - ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ

ನಳಿನಿ ಅತುಲ್​ - ಜಂಟಿ ವ್ಯವಸ್ಥಾಪ ನಿರ್ದೇಶಕಿ KUIDFC, ಬೆಂಗಳೂರು

English summary
Karnataka government on Tuesday(June 26) issued an order to transfer 9 IAS officers list includes Manish Moudgil, Kapil Mohan, M Lakshminarayana, B. S Shekharappa and others
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X