• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯಕ್ಕೆ ಮುಂಗಾರು ಪ್ರವೇಶ, 3 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

|

ಬೆಂಗಳೂರು, ಜೂನ್ 05: ರಾಜ್ಯಕ್ಕೆ ಮುಂಗಾರು ಪ್ರವೇಶವಾವಾಗಿದ್ದು, ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಶುಕ್ರವಾರ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡನ್ನು ಪ್ರವೇಶಿಸಿರುವ ನೈಋತ್ಯ ಮುಂಗಾರು ಜೂನ್ 05ರಂದು ಉತ್ತರ ಒಳನಾಡಿನ ಪ್ರದೇಶ ತಲುಪಲಿದೆ.
ಆ ಮೂಲಕ ರಾಜ್ಯದಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಮುಂಗಾರು ಆಗಮನಕ್ಕೆ ಕ್ಷಣಗಣನೆ, ಎಲ್ಲೆಲ್ಲಿ ಮಳೆ? ಕರ್ನಾಟಕದಲ್ಲಿ ಮುಂಗಾರು ಆಗಮನಕ್ಕೆ ಕ್ಷಣಗಣನೆ, ಎಲ್ಲೆಲ್ಲಿ ಮಳೆ?

ರಾತ್ರಿ 10ಗಂಟೆಯವರೆಗೆ ನಗರದ ಮಾರಪ್ಪನಪಾಳ್ಯದಲ್ಲಿ ಅಧಿಕ ಮಳೆ ಸುರಿದಿದೆ, 72 ಮಿ.ಮೀನಷ್ಟು ಮಳೆಯಾಗಿದೆ. ಸಾರಕ್ಕಿಯಲ್ಲಿ 63, ಬಸವನಗುಡಿ, ಅಟ್ಟೂರಿನಲ್ಲಿ 49, ವಿದ್ಯಾರಣ್ಯಪುರದಲ್ಲಿ 41, ಎಚ್‌ಎಸ್‌ಆರ್ ಲೇಔಟ್‌ನಲ್ಲಿ 38.5 ಮಿ.ಮೀನಷ್ಟು ಮಳೆಯಾಗಿದೆ.

ನಾಲ್ಕು ದಿನ ತಡವಾಗಿ ಮುಂಗಾರು

ನಾಲ್ಕು ದಿನ ತಡವಾಗಿ ಮುಂಗಾರು

ವಾಡಿಕೆಯಂತೆ ಜೂನ್ 1ರಂದೇ ರಾಜ್ಯ ಪ್ರವೇಶಿಸಬೇಕಿದ್ದ, ಮುಂಗಾರು ಮಾರುತಗಳು ನಾಲ್ಕು ದಿನ ತಡವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗವನ್ನು ಪ್ರವೇಶಿಸಿದೆ. ಶನಿವಾರ ಉತ್ತರ ಒಳನಾಡನ್ನು ಹಾದು ಹೋಗುವ ಮೂಲಕ ಈ ಮಾರುಗಳು ಇಡೀ ರಾಜ್ಯವನ್ನು ಆವರಿಸಲಿವೆ.

ಭಾರಿ ಮಳೆ

ಭಾರಿ ಮಳೆ

ಮುಂಗಾರು ಅರಂಭವಾದ ಮೊದಲ ದಿನವೇ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ದಾಖಲಾಗಿದೆ.ಇದೇ ರೀತಿ ಜೂನ್ 6ರವರೆಗೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಕಡೆಗಳಲ್ಲಿ ಗುಡುಗು ಮತ್ತು ಗಾಳಿ ಸಹಿತ ಮಳೆ ಮುಂದುವರೆಯಲಿದೆ.

ಯಾವ ಜಿಲ್ಲೆಗಳಿಗೆ ರೆಡ್ ಅಲರ್ಟ್

ಯಾವ ಜಿಲ್ಲೆಗಳಿಗೆ ರೆಡ್ ಅಲರ್ಟ್

ಜೂನ್ 5ರಂದು ಅತ್ಯಧಿಕ ಮಳೆ ಬೀಳುವುದರಿಂದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳು, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಹಾವೇರಿ, ಧಾರವಾಡ, ವಿಜಯಪುರ, ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

  ಹವಾಮಾನ ಇಲಾಖೆಯಿಂದ ಎಚ್ಚರಿಕೆಯ ಸೂಚನೆ! | Oneindia Kannada
  ಬೆಂಗಳೂರಲ್ಲಿ ಅಧಿಕ ಮಳೆ

  ಬೆಂಗಳೂರಲ್ಲಿ ಅಧಿಕ ಮಳೆ

  ನಗರದಲ್ಲಿ ಶುಕ್ರವಾರ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ, ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನದ ನಂತರ ಶುರುವಾದ ಮಳೆ ಕೆಲ ಕಾಲ ಜೋರಾಗಿ ಅಬ್ಬರಿಸಿತು. ಇದರಿಂದ ಜೆಪಿನಗರ 6ನೇ ಹಂತ, ಜಯನಗರ 5ನೇ ಬ್ಲಾಕ್‌ನ ರಸ್ತೆಗಳಲ್ಲಿ ನಾಲ್ಕು ಕಡೆ ರದ ರೆಂಬೆಗಳು ಮುರಿದು ಬಿದ್ದಿವೆ. ರಾಜ್ಯದಲ್ಲಿ ಮುಂಗಾರು ಪ್ರವೇಶವಾದ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಜೂನ್ 7ರವರೆಗೂ ಮಳೆ ಮುಂದುವರೆಯಲಿದೆ.

  English summary
  Karnataka Monsoon 2021: Meteorological department issued red alert for 3 districts od Karnataka.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X