Gandaberunda Badge: 224 ಶಾಸಕರಿಗೆ 'ಗಂಡಬೇರುಂಡ ಬ್ಯಾಡ್ಜ್' ಕಿಟ್ ವಿತರಣೆ: ಏಕೆ? ಕಾರಣ ತಿಳಿಸಿದ ಸ್ಪೀಕರ್
ಬೆಂಗಳೂರು, ಫೆಬ್ರವರಿ 22: ಜನರಿಂದ ವಿಧಾನಸಭೆಗೆ ಚುನಾಯಿತರಾಗುವ ರಾಜ್ಯದ 224 ಶಾಸಕರು ಇನ್ನು ಮುಂದಿನ ದಿನಗಳಲ್ಲಿ ನಡೆಯಲಿರುವ ಸದನಕ್ಕೆ ಹಾಜರಾಗಬೇಕಾದರೆ 'ಚಿನ್ನ ಲೇಪಿತ ಬ್ಯಾಡ್ಜ' ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಈ ಕುರಿತು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಈ ಕುರಿತು ಬುಧವಾರ ವಿಧಾನಸಭೆ ಕಲಾಫದಲ್ಲಿ ಮಾಹಿತಿ ಪ್ರಕಟಿಸಿದ್ದಾರೆ. ವಿಧಾನಸಭೆ ಸಚಿವಾಲಯದಿಂದ ರಾಜ್ಯದ ಆಡಳಿತ ಮತ್ತು ಪ್ರತಿಪಕ್ಷಗಳ ಎಲ್ಲ 224 ಶಾಸಕ, ಸಚಿವರಿಗೆ ಸರ್ಕಾರದ 'ಗಂಡಭೇರುಂಡ ಲಾಂಛನವುಳ್ಳ ಚಿನ್ನ ಲೇಪಿತ ಬ್ಯಾಡ್ಜ್'ಗಳನ್ನು ವಿತರಿಸಲಾಗಿದೆ.

ಬೆಂಗಳೂರಿನ ಐ ಡ್ರಿಮ್ಸ್ ಟ್ರೇಡ್ ಅಂಡ್ ಈವೆಂಟ್ ಲಿಮಿಟೆಡ್ ಕಂಪನಿಯಿಂದ ತಲಾ 2832 ರೂಪಾಯಿಯಂತೆ ಎಲ್ಲಿರಗೂ ಬ್ಯಾಡ್ಜ್‌ಗಳನ್ನು ಖರೀದಿಸಿ ನೀಡಲಾಗಿದೆ. ಮುಂದಿನ ಅಧಿವೇಶನದಿಂದ ಎಲ್ಲ ಸದಸ್ಯರು ಕಡ್ಡಾಯವಾಗಿ ಈ ಬ್ಯಾಡ್ಜ್ ಧರಿಸಿ ಸದನಕ್ಕೆ ಹಾಜರಾಗುವಂತೆ ಸ್ಪೀಕರ್ ಯು.ಟಿ.ಖಾದರ್ ನಿರ್ದೇಶಿಸಿದ್ದಾರೆ.
ಬ್ಯಾಡ್ಜ್ ಕಡ್ಡಾಯವಾಗಿ ಧರಿಸಿಯೇ ಬರಬೇಕು
ಈ ಹೊಸ ನಿಯಮಕ್ಕೆ ಕಾರಣ ತಿಳಿಸಿರುವ ಯು.ಟಿ.ಖಾದರ್ ಅವರು, ವಿಧಾನಸೌಧಕ್ಕೆ ಬರುವವರೆಲ್ಲರೂ ಶಾಸಕ, ಸಚಿವರ ರೀತಿಯಲ್ಲಿಯೇ ಉಡುಪು ಧರಿಸಿ ಬರುತ್ತಾರೆ. ಹೀಗಾಗಿ ಮುಂದಿನ ವಿಧಾನಸಭೆ ಅಧಿವೇಶನಕ್ಕೆ ಬುರವಾಗ ಎಲ್ಲ ಸದಸ್ಯರೂ ಈ ಬ್ಯಾಡ್ಜ್ ಕಡ್ಡಾಯವಾಗಿ ಧರಿಸಿಕೊಂಡೇ ಬರಬೇಕು. ಇದರಿಂದ ನಮ್ಮ ಗಾರ್ಡ್‌ಗಳಿಗೂ ಶಾಸಕರನ್ನು ಗುರುತಿಸಲು ನೆರವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಸಚಿವಾಲಯದಿಂದ ಎಲ್ಲ ಸದಸ್ಯರಿಗೂ ಒಂದು ಕಿಟ್ ಕೊಡಲಾಗಿದೆ. ಅದರಲ್ಲಿ ಪ್ರತಿ ಸದಸ್ಯರಿಗೂ ಗಂಡಭೇರುಂಡ ಲಾಂಛನವುಳ್ಳ ಮೂರು ಬ್ಯಾಡ್ಜ್‌ಗಳನ್ನು ನೀಡಲಾಗಿದೆ. ಅದರಲ್ಲಿ ಒಂದನ್ನು ತಮ್ಮ ಊರಿನಲ್ಲಿ, ಇನ್ನೊಂದು ಬೆಂಗಳೂರಿನಲ್ಲಿ ಇಟ್ಟುಕೊಳ್ಳಬಹುದು. ಮತ್ತೊಂದನ್ನು ಪ್ರತಿ ದಿನ ಬಳಕೆಗೆಂದು ನೀಡಲಾಗಿದೆ.

ಆಸ್ಟ್ರೇಲಿಯಾದಂತೆ ಕರ್ನಾಟಕದಲ್ಲಿ ಬ್ಯಾಡ್ಜ್ ಮಾದರಿ ಜಾರಿ
ಅಲ್ಲದೇ ಶಾಸಕರು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ವಿವಿಧ ಕಡೆಗೆ ರಾಜಕೀಯ ಕಾರ್ಯಕ್ರಮ ಮತ್ತಿತರ ಉದ್ದೇಶಗಳಿಗೆ ತೆರಳುವಾಗಲೂ ಈ ಬ್ಯಾಡ್ಜ್ ಅನ್ನು ಗೌರವ ಸೂಚಕವಾಗಿ ಧರಿಸಿ ಹೋಗಬಹುದು. ಇತ್ತೀಚೆಗೆ ಆಸ್ಟ್ರೇಲಿಯಾ ಮೇಯರ್ ಒಬ್ಬರನ್ನು ಭೇಟಿ ಮಾಡಿದಾಗ, ಅವರ ತಮ್ಮ ಸರ್ಕಾರ ಬ್ಯಾಡ್ಜ್ ಧರಿಸಿದ್ದರು. ಅದನ್ನು ಉಡುಗೊರೆಯಾಗಿದ್ದ ನೀಡಿದ್ದರು. ಅಲ್ಲಿಯವರು ಆ ಬ್ಯಾಡ್ಜ್ ಅನ್ನು ಗೌರವ ಸೂಚಕವಾಗಿ ಧರಿಸುತ್ತಾರೆ. ಅದೇ ರೀತಿ ಇಲ್ಲಿಯೂ ಜಾರಿಗೆ ತರಲು ನಿರ್ಧರಿಸಿದ್ದೇವೆ ಎಂದು ತಿಳಸಿದರು.












Click it and Unblock the Notifications