ಕಲಾಪದಲ್ಲಿ ಭಾಗಿ: ದೇಶದಲ್ಲಿ ಕರ್ನಾಟಕದ ಶಾಸಕರೇ ನಂಬರ್ ಒನ್
Recommended Video

ಬೆಂಗಳೂರು, ನವೆಂಬರ್ 15: ದೇಶದಲ್ಲಿರುವ ವಿವಿಧ ವಿಧಾನಸಭೆಗಳ ಪೈಕಿ ಕರ್ನಾಟಕದ ಶಾಸಕರೇ ಹಚ್ಚು ನಿಷ್ಠಾವಂತರು ಹೆಚ್ಚು ಅವಧಿಗೆ ಕಲಾಪಕ್ಕೆ ಹಾಜರಾಗಿದ್ದಾರೆ ಎನ್ನುವ ವಿಷಯ ತಿಳಿದುಬಂದಿದೆ.
26 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಯ ಕಾರ್ಯವನ್ನು 2011 ರಿಂದ 2016ರ ಅವಧಿಯಲ್ಲಿ ಪರಿಶೀಲನೆ ನಡೆಸಿರುವ ಪಿಆರ್ ಎಸ್ ಲೆಜಿಸ್ಲೇಟಿವ್ ರಿಸರ್ಚ್ ಇತ್ತೀಚೆಗೆ ಈ ವರದಿ ನೀಡಿದೆ.
ಸಂಸದರಿಗೆ = ಹೋಲಿಸಿದರೆ ದೇಶಾದ್ಯಂತ ಶಾಸಕರು ವಾರ್ಷಿಕವಾಗಿ ಬೆರಳೆಣಿಕೆ ದಿನಗಳು ಮಾತ್ರವೇ ಕೆಲಸ ಮಾಡುತ್ತಾರೆ. ಅದರಲ್ಲೂ ಸಣ್ಣ ರಾಜ್ಯಗಳ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎನ್ನುವುದು ಬೇಸರದ ಸಂಗತಿಯಾಗಿದ್ದರೂ ಇದರ ಮಧ್ಯೆ ಕರ್ನಾಟಕದ ಶಾಸಕರು ಹೆಚ್ಚು ದಿನ ಕಲಾಪಕ್ಕೆ ಹಾಜರಾಗಿದ್ದಾರೆ ಎನ್ನುವುದು ಖುಷಿ ತಂದಿದೆ.

ಆದರೆ ವಿಧಾನಸಭೆಗಿಂತ ಹೆಚ್ಚು ಲೋಕಸಭೆಯೇ ಹೆಚ್ಚು ದಿನ ಕಾರ್ಯಕಲಾಪ ನಡೆಸಿದೆ. ವಿಧಾನಸಭೆಗಳಲ್ಲಿ ಶಾಸಕರ ಹಾಜರಿ ದಿನಗಳು ಸರಿಯಾಗಿ ವಾರ್ಷಿಕ 28 ದಿನಗಳಾಗಿವೆ, ಆರು ವರ್ಷದ ಅವಧಿಯ ದಾಖಲೆಗಳನ್ನು ಗಮನಿಸಿದರೆ ಈ ಸಮೀಕ್ಷಾ ವರದಿ ಬಿಡುಗಡೆ ಮಾಡಲಾಗಿದ್ದು, 26 ವಿಧಾನಸಭೆಗಳ ಪೈಕಿ 13 ವಿಧಾನಸಭೆಗಳಲ್ಲಿ ಶಾಸಕರ ಹಾಜರಾತಿ ವಾರ್ಷಿಕ ಸರಾಸರಿ 28 ದಿನಗಳಷ್ಟೇ ಇದೆ.
ಕರ್ನಾಟಕ 46 ದಿನ, ಕೇರಳ 46 ದಿನಗಳು, ಮಹಾರಾಷ್ಟ್ರ 45 ದಿನಗಳು, ಒಡಿಶಾ 42 ದಿನಗಳು ಹಾಗೂ ಜಮ್ಮು ಮತ್ತು ಕಾಶ್ಮೀರ 39 ದಿನಗಳಿದ್ದು ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ.












Click it and Unblock the Notifications