ಅಧಿವೇಶನದ ಸಂದರ್ಭದಲ್ಲಿ ಶಾಸಕರಿಗೆ ಉಚಿತ ಊಟದ ಭಾಗ್ಯ!

Posted By: Gururaj
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 12 : ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಶಾಸಕರಿಗೆ ಉಚಿತ ಊಟದ ಭಾಗ್ಯ ಸಿಗಲಿದೆ. ವಿಧಾನಸೌಧದಲ್ಲೇ ಉಚಿತವಾಗಿ ಪೌಷ್ಠಿಕಾಂಶ ಯುಕ್ತ ಮಧ್ಯಾಹ್ನದ ಊಟ ನೀಡಲು ಚಿಂತನೆ ನಡೆದಿದೆ.

ವಿಧಾನಮಂಡಲ ಅಧಿವೇಶನಗಳು ನಡೆಯುವಾಗ ಕೆಲವು ಶಾಸಕರು ಮಧ್ಯಾಹ್ನದ ಊಟಕ್ಕೆ ಹೊರಹೋಗುತ್ತಾರೆ. ನಂತರ ನಡೆಯುವ ಕಲಾಪದಲ್ಲಿ ಅವರು ಪಾಲ್ಗೊಳ್ಳುವುದಿಲ್ಲ. ಆದ್ದರಿಂದ, ಉಚಿತವಾಗಿ ವಿಧಾನಸೌಧದಲ್ಲೇ ಊಟ ನೀಡಲು ಯೋಜನೆ ರೂಪಿಸಲಾಗುತ್ತಿದೆ.

ಕೆಂಗಲ್ ಹನುಮಂತಯ್ಯ ಅವರ ಕೂಸು, ವಿಧಾನಸೌಧಕ್ಕೀಗ ಅರುವತ್ತು !

Karnataka MLA's may get free food soon

'ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿ ಶಾಸಕರು ಉಭಯ ಸದನಗಳ ಕಲಾಪದಲ್ಲಿ ಭಾಗವಹಿಸುವಂತೆ ಆಕರ್ಷಿಸಲು ಉಚಿತ ಊಟದ ವ್ಯವಸ್ಥೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ' ಎಂದು ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದ್ದಾರೆ.

ನವೆಂಬರ್ 13 ರಿಂದ ಬೆಳಗಾವಿ ಚಳಿಗಾಲದ ಅಧಿವೇಶನ

'ಶಾಸಕರು ರಾತ್ರಿ ಹೋಟೆಲ್‌, ಪಬ್‌ಗಳಿಗೆ ತೆರಳುತ್ತಾರೆ. ಇದನ್ನು ತಡೆಯಲು 'ಕಾನ್ಸ್‌ಟಿಟ್ಯೂಷನ್ ಕ್ಲಬ್' ಮಾದರಿಯಲ್ಲಿ ಕ್ಲಬ್ ನಿರ್ಮಾಣ ಮಾಡಲಾಗುತ್ತದೆ. ಮುಖ್ಯಮಂತ್ರಿಗಳ ಅನುಗ್ರಹ ನಿವಾಸದ ಬಳಿಯ 2.20 ಎಕರೆ ಜಮೀನಿನಲ್ಲಿ ಕ್ಲಬ್ ನಿರ್ಮಾಣವಾಗಲಿದ್ದು, ಡಿಸೆಂಬರ್‌ನಲ್ಲಿ ಕಟ್ಟಡ ಕಾಮಗಾರಿಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಮಾಡಲಿದ್ದಾರೆ' ಎಂದು ಕೋಳಿವಾಡ ತಿಳಿಸಿದ್ದಾರೆ.

ರಾಜ್ಯಾದ್ಯಂತ 246 ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಒಪ್ಪಿಗೆ

'ಶಾಸಕರ ಖಾಸಗಿತನ ಕಾಪಾಡಲು ಕ್ಲಬ್ ನಿರ್ಮಾಣ ಮಾಡಲಾಗುತ್ತಿದ್ದು, ಜಿಮ್, ಈಜುಕೊಳ, ಬ್ಯಾಡ್ಮಿಂಟನ್ ಕೋರ್ಟ್, ಹೋಟೆಲ್, ಸಭಾಂಗಣವನ್ನು ಈ ಕ್ಲಬ್ ಒಳಗೊಂಡಿರಲಿದೆ' ಎಂದು ಕೋಳಿವಾಡ ಮಾಹಿತಿ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka MLA's may get free food during assembly session. Govt may introduce free food service for MLA's said Karnataka assembly Speaker K.B.Koliwad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ