Chaluvaraya Swamy Profile: ಎನ್.ಚಲುವರಾಯ ಸ್ವಾಮಿ ರಾಜಕೀಯ ಹಿನ್ನೆಲೆ
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ನೂತನ ಸಚಿವರಾಗಿ ಆಯ್ಕೆಯಾಗಿರುವ ಚಲುವರಾಯ ಸ್ವಾಮಿ ಅವರ ಪೂರ್ಣ ಹೆಸರು ಎನ್.ಚಲುವರಾಯ ಸ್ವಾಮಿ. 1960ರ ಜೂನ್ 1ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲ ಘಟ್ಟದಲ್ಲಿ ಜನಿಸಿದರು. ರಾಜಕೀಯದಲ್ಲಿ ಹಲವು ವರ್ಷಗಳಿಂದ ಪಳಗಿರುವ ಚೆಲುವರಾಯ ಸ್ವಾಮಿ ರಾಜಕಾರಣದ ಆಳ-ಅಗಲ ತಿಳಿದಿದ್ದಾರೆ.
ನರಸಿಂಹೇಗೌಡ ಮತ್ತು ಸಾಕಮ್ಮ ದಂಪತಿಯ ಪುತ್ರ ಎನ್.ಚಲುವರಾಯ ಸ್ವಾಮಿ ವಿದ್ಯಾವಂತ ರಾಜಕಾರಣಿಗಳ ಪಟ್ಟಿಗೆ ಸೇರುತ್ತಾರೆ. ಬಿ.ಕೆ.ಧನಲಕ್ಷ್ಮಿ ಅವರನ್ನ ವಿವಾಹವಾಗಿರುವ ಎನ್.ಚೆಲುವರಾಯ ಸ್ವಾಮಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. 1978-1983 ಸಾಲಿನಲ್ಲಿ ಮಂಡ್ಯದ ಕೆಆರ್ ಪೇಟೆಯ ಪಾಲಿಟೆಕ್ನಿಕ್ ಕಾಲೇಜ್‌ನಿಂದ ಸಿವಿಲ್ ಇಂಜಿನಿಯರಿಂಗ್ ಪೂರೈಸಿದ್ದಾರೆ. ಮಂಡ್ಯ ರಾಜಕೀಯದಲ್ಲಿ ಸುಮಾರು 3 ದಶಕಗಳಿಂದ ಪಳಗಿರುವ ಹಿನ್ನೆಲೆ ಈಗ ರಾಜ್ಯದ ಅತ್ಯುನ್ನತ ಪದವಿಗಳಲ್ಲಿ ಒಂದಾದ ಮಂತ್ರಿಪಟ್ಟ ಕೂಡ ಒಲಿದು ಬಂದಿದೆ.

ರಾಜಕೀಯಕ್ಕೆ ಎಂಟ್ರಿಯಾಗಿದ್ದು ಯಾವಾಗ?
1994ರಿಂದ ಚುನಾವಣೆಗೆ ಸ್ಫರ್ಧಿಸುತ್ತಾ ಬಂದಿದ್ದಾರೆ ಎನ್.ಚೆಲುವರಾಯ ಸ್ವಾಮಿ. 1994ರಿಂದ 1999 ರವರೆಗೂ ಜಿಲ್ಲಾ ಪಂಚಾಯತಿಯ ಸದಸ್ಯರಾಗಿದ್ದರು ಚೆಲುವರಾಯ ಸ್ವಾಮಿ. ಹಾಗೇ 1996 ಮತ್ತು 1997ರ ಮಧ್ಯೆ ಜಿ.ಪಂ ಉಪಾಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ್ದರು. ಅಲ್ಲದೆ 1999 ಮತ್ತು 2008ರ ನಡುವೆ 2 ಅವಧಿಗೆ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿ ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದರು. ಆದರೆ 2009ರಲ್ಲಿ ಬದಲಾದ ಕಾಲಘಟ್ಟದಲ್ಲಿ ಚಲುವರಾಯ ಸ್ವಾಮಿ ಲೋಕಸಭೆಗೂ ಹೋಗಬೇಕಾಗಿ ಬಂತು.
ಲೋಕಸಭೆ ಸದಸ್ಯ, 2013ರಲ್ಲಿ ವಿಧಾನಸಭೆಗೆ!
ಇನ್ನು 2009ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ 15 ನೇ ಲೋಕಸಭೆಗೆ ಸ್ಪರ್ಧಿಸಿ ಗೆದ್ದರು ಎನ್.ಚೆಲುವರಾಯ ಸ್ವಾಮಿ. ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಎನ್.ಚೆಲುವರಾಯ ಸ್ವಾಮಿ ರಾಷ್ಟ್ರ ರಾಜಕಾರಣಕ್ಕೂ ಎಂಟ್ರಿ ಕೊಟ್ಟಿದ್ದರು. ಆದರೆ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದ್ದು 2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ. ಜೆಡಿಎಸ್‌ನ ಮಾಸ್ ಲೀಡರ್ ಆಗಿದ್ದ ಚೆಲುವರಾಯ ಸ್ವಾಮಿ 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಗಮಂಗಲದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು.
'ತೆನೆ' ಬಿಟ್ಟು 'ಕೈ' ಹಿಡಿದಿದ್ದರು!
ರಾಜಕೀಯವೇ ಹಾಗೆ, ಇಲ್ಲಿ ಯಾರಿಗೆ ಯಾರೂ ಮಿತ್ರರಲ್ಲ, ಯಾರಿಗೆ ಯಾರೂ ಶತ್ರುಗಳಲ್ಲ. ಹಾಗೇ ಒಂದೇ ಪಕ್ಷಕ್ಕೆ ಒಬ್ಬರ ರಾಜಕಾರಣಿ ಅಂಟಿಕೊಂಡು ಇರುವುದು ತೀರಾ ಅಪರೂಪ. ಹೀಗೆ ಬದಲಾದ ಕಾಲಘಟ್ಟದಲ್ಲಿ ಪಕ್ಷಾಂತರ ಮಾಮೂಲು. ಇದೇ ರೀತಿ 2018ರಲ್ಲಿ ಜೆಡಿಎಸ್ ಒಳಗೆ ಆಂತರಿಕವಾಗಿ ಹೊತ್ತಿದ್ದ ಭಿನ್ನಾಭಿಪ್ರಾಯ ಬೆಂಕಿ ಕೆಲವು ನಾಯಕರನ್ನ ಹೊರ ಹೋಗುವಂತೆ ಮಾಡಿತ್ತು. ಈ ಪೈಕಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಟಿಕೆಟ್‌ಗೆ ಟ್ರೈಮಾಡಿದ್ದ ಎನ್.ಚೆಲುವರಾಯ ಸ್ವಾಮಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.
2018ರಲ್ಲಿ ಎದುರಾದ ಭೀಕರ ಸೋಲು
ದಳಪತಿಗಳ ಕೋಟೆಯಿಂದ ಹೊರಬಂದು, ದಳಪತಿಗಳ ವಿರುದ್ಧ ತೊಡೆತಟ್ಟಿ ನಿಂತಿದ್ದ ಎನ್.ಚೆಲುವರಾಯ ಸ್ವಾಮಿ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡರು. ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಅವರು 47,667 ಮತಗಳ ಅಂತರದಿಂದ ಸುರೇಶ್ ಗೌಡ ಎದುರು ಸೋಲು ಕಂಡಿದ್ದರು. ಈ ಮೂಲಕ ಭಾರಿ ಹಿನ್ನಡೆ ಅನುಭವಿಸಿದ್ದರು. ಕಳೆದ ಬಾರಿ ಮಂಡ್ಯದ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸಿತ್ತು. ಆದರೆ ಅದೇ ಸೋಲಿನ ಸುಳಿಯಿಂದ 2023ರಲ್ಲಿ ಮತ್ತೆ ಎದ್ದು ಬಂದರು.
'ಭಾರತ ಜೋಡೋ ಯಾತ್ರೆ'ಯ ಯಶಸ್ಸು!
ಹೌದು, ಈ ಬಾರಿ ಇಡೀ ಕರ್ನಾಟಕದ ಜನತೆಯನ್ನು ಸೆಳೆದಿದ್ದ ಭಾರತ ಜೋಡೋ ಯಾತ್ರೆ ಮಂಡ್ಯದಲ್ಲಿಯೂ ಮೋಡಿ ಮಾಡಿತ್ತು. ಅದೇ ರೀತಿ 'ಭಾರತ ಜೋಡೋ ಯಾತ್ರೆ' ಮಂಡ್ಯ ಜಿಲ್ಲೆಗೆ ಎಂಟ್ರಿಯಾದ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ಗಮನ ಸೆಳೆದರು. 2023ರ ವಿಧಾನಸಭೆ ಚುನಾವಣೆಯಲ್ಲಿ 4 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದೀಗ ಸಚಿವ ಸ್ಥಾನ ಕೂಡ ಮಂಡ್ಯದ ಶಾಸಕ ಎನ್.ಚೆಲುವರಾಯ ಸ್ವಾಮಿ ಅವರಿಗೆ ಸಿಕ್ಕಿದೆ.
ಸಿದ್ದರಾಮಯ್ಯ ಆಪ್ತನಿಗೆ ಒಲಿದ ಮಂತ್ರಿಪಟ್ಟ!
ಮೊದಲಿನಿಂದಲೂ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಎನ್.ಚೆಲುವರಾಯ ಸ್ವಾಮಿ ಅವರು, ಮಂಡ್ಯದ ನಾಗಮಂಗಲ ಕ್ಷೇತ್ರದಲ್ಲಿ ಸುಲಭವಾಗಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಈ ಮೂಲಕ JDS ಭದ್ರಕೋಟೆ ಮಂಡ್ಯದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿ, ಈಗ ಸಚಿವ ಸ್ಥಾನವನ್ನೂ ಪಡೆದಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರ ಮತ್ತೊಬ್ಬ ಆಪ್ತನಿಗೆ ಮಂತ್ರಿಪಟ್ಟ ಒಲಿದಿರುವುದು ವಿಶೇಷ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications