Honeytrap: ರಾಜ್ಯದ ಪ್ರಭಾವಿ ಸಚಿವನಿಗೆ ಮತ್ತೊಬ್ಬ ರಾಜಕಾರಣಿಯಿಂದಲೇ ಹನಿಟ್ರ್ಯಾಪ್?
ಇಡೀ ರಾಜ್ಯವೇ ಬೆಚ್ಚಿಬೀಳುವ ಘಟನೆಯೊಂದು ರಾಜ್ಯ ರಾಜಕಾರಣದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇತೀಚೆಗೆ ಸೈಲೆಂಟ್ ಆಗಿದ್ದ ಹನಿಟ್ರ್ಯಾಪ್ ಮತ್ತೆ ಸದ್ದು ಮಾಡಿದೆ. ಕರ್ನಾಟಕದ ಪ್ರಭಾವಿ ಸಚಿವರೊಬ್ಬರು ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಅಚ್ಚರಿಯೆಂದರೆ ಹನಿಟ್ರ್ಯಾಪ್ ಹಿಂದೆ ಮತ್ತೊಬ್ಬ ಪ್ರಭಾವಿ ರಾಜಕಾರಣಿಯ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ವಿಚಾರದಲ್ಲಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಭಾವಿ ಸಚಿವನಿಗೆ ಮತ್ತೊಬ್ಬ ರಾಜಕಾರಣಿ ಈ ಹನಿಟ್ರ್ಯಾಪ್ ಮಾಡಿಸಿರುವ ಆರೋಪ ಕೇಳಿಬರುತ್ತಿವೆ.
ಹೌದು, ರಾಜಕೀಯ ದುರುದ್ದೇಶದಿಂದ ಪ್ರಬಲ ರಾಜಕಾರಣಿಯೊಬ್ಬರು ಈ ಹನಿಟ್ರ್ಯಾಪ್ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ಕುರ್ಚಿಯ ಆಕಾಂಕ್ಷಿಯೂ ಆಗಿರುವ ಸಚಿವರೊಬ್ಬರನ್ನು ಈ ಖೆಡ್ಡಾಗೆ ಬೀಳಿಸಲಾಗಿದ್ದು, ರಾಜಕೀಯವಾಗಿ ಮಟ್ಟ ಹಾಕಲು ಈ ಬಲೆ ಬೀಸಲಾಗಿದೆ ಎಂದು ಕನ್ನಡದ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇಬ್ಬರೂ ಪ್ರಭಾವಿ ರಾಜಕೀಯ ನಾಯಕರು ಎಂದು ಹೇಳಲಾಗುತ್ತಿದೆ.

ಇಲ್ಲಿವರೆಗೆ ಒಂದು ಪಕ್ಷದವರ ಮೇಲೆ ಮತ್ತೊಂದು ಪಕ್ಷದ ನಾಯಕರು ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದರು. ಆದರೆ, ಈಗ ಪ್ರಭಾವಿ ಸಚಿವನಿಗೆ ಮತ್ತೊಬ್ಬ ರಾಜಕಾರಣಿಯೇ ಹನಿಟ್ರ್ಯಾಪ್ ಮಾಡಿಸಿದ್ದಾರೆ ಎಂಬ ವಿಚಾರವಂತೂ ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ. ಸಚಿವನಿಗೆ ಹನಿಟ್ರ್ಯಾಪ್ ಮಾಡಿಸಿ, ಈ ಮೂಲಕ ಅವರನ್ನು ರಾಜಕೀಯವಾಗಿ ತುಳಿಯಲು ಈ ವಾಮಮಾರ್ಗ ಹಿಡಿದಿದ್ದಾರೆ. ಇದರ ಹಿಂದೆ ಪ್ರಭಾವಿ ನಾಯಕನ ಕೈವಾಡವಿದೆ ಎನ್ನುವ ಆರೋಪ ಕೇಳಿಬಂದಿದೆ.
ರಾಜಕೀಯವಾಗಿ ಅಧಿಕಾರದ ದಾಹಕ್ಕಾಗಿ ಇಬ್ಬರ ನಡುವೆ ಪ್ರಬಲ ಪೈಪೋಟಿಯೂ ಇದೆ. ಹಾಗಾಗಿ ರಾಜಕೀಯವಾಗಿ ಮಟ್ಟ ಹಾಕಬೇಕು ಎಂಬ ಉದ್ದೇಶದಿಂದಲೇ ಹನಿಟ್ರ್ಯಾಪ್ ಬಲೆ ಬೀಸಲಾಗಿದೆ ಎಂದು ಗುಸುಗುಸು ಕೇಳಿಬರುತ್ತಿದೆ. ಅಚ್ಚರಿಯೆಂದರೆ ಮುಖ್ಯಮಂತ್ರಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ನಾಯಕನ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎನ್ನಲಾಗುತ್ತಿದೆ.

ಇದಕ್ಕಾಗಿ ಮತ್ತೊಬ್ಬ ಪ್ರಭಾವಿ ನಾಯಕ ಹಲವು ತಿಂಗಳಿನಿಂದ ಸಂಚು ರೂಪಿಸಿದ್ದು, ಆತತ ತಂಡವೇ ಈ ಕೆಲಸ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ರಾಜಕೀಯವಾಗಿ ಇತ್ತೀಚೆಗೆ ಗುರುತಿಸಿಕೊಳ್ಳಲು ಮುಂದಾದ ಕಾರಣಕ್ಕೆ ಆ ನಾಯಕನ ಮೇಲೆ ಹನಿಟ್ರ್ಯಾಪ್ ಪ್ರಯೋಗ ಮಾಡಲಾಗಿದ್ದು, ನಿರಂತರವಾಗಿ ಈ ಯತ್ನ ಮುಂದುವರಿದಿದೆ. ಕೊನೆಗೆ ಈ ಬಗ್ಗೆ ಅನುಮಾನಗೊಂಡ ಸಚಿವ ಎದುರಾಳಿ ತಂಡವನ್ನು ಪತ್ತೆ ಹಚ್ಚಿ ಖಡಕ್ ಎಚ್ಚರಿಕೆ ಕೂಡ ಕೊಟ್ಟಿದ್ದಾರಂತೆ. ಆದರೆ ಈ ತಂಡದ ಹಿಂದೆ ಇರುವುದು ಇನ್ನೊಬ್ಬ ರಾಜಕಾರಣಿ ಎಂಬುದೂ ಗೊತ್ತಾಗಿದೆಯಂತೆ.
ರಾಜಕೀಯವಾಗಿ ಇಬ್ಬರ ನಡುವೆ ಸ್ಪರ್ಧೆ ಇದ್ದು, ಹನಿಟ್ರ್ಯಾಪ್ ಬಲೆ ಬೀಸಿದರೆ ತಮ್ಮ ಹಾದಿ ಸುಗಮವಾಗುತ್ತೆ ಎಂಬ ಕಾರಣಕ್ಕೆ ಈ ಕೃತ್ಯ ಮಾಡಿದ್ದಾರೆ. ಇದರಿಂದ ರಾಜಕೀಯವಾಗಿ ಆ ಸಚಿವನನ್ನು ಮಟ್ಟ ಹಾಕಬಹುದು ಎಂದೂ ಪ್ಲ್ಯಾನ್ ನಡೆದಿತ್ತಂತೆ. ಈ ವಿಚಾರ ತಿಳಿದ ಸಚಿವ ಈ ಸಂಚಿನ ಬಗ್ಗೆ ಪಕ್ಷದ ಹಿರಿಯ ನಾಯಕರು ಹಾಗೂ ಸಿಎಂ ಗಮನಕ್ಕೂ ತಂದಿದ್ದಾರಂತೆ. ತಮ್ಮ ಮೇಲೆ ಪದೇ ಪದೇ ಹನಿಟ್ರ್ಯಾಪ್‌ಗೆ ಯತ್ನಿಸಿದ್ದವರ ಕಳ್ಳಾಟ ಗೊತ್ತಾಗಿ ಇದೀಗ ಅವರು ಫುಲ್ ಅಲರ್ಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ವರದಿಗಳಲ್ಲಿ ಉಲ್ಲೇಖಿಸಿರುವಂತೆ ತುಮಕೂರು ಭಾಗದ ಪ್ರಭಾವಿ ರಾಜಕಾರಣಿಗೆ ಈ ಹನಿಟ್ರ್ಯಾಪ್ ಬಲೆ ಬೀಸಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಆ ಇಬ್ಬರು ಪ್ರಭಾವಿ ಸಚಿವರ ಹೆಸರುಗಳು ಎಲ್ಲಿಯೂ ಬಹಿರಂಗವಾಗಿಲ್ಲ. ಸದ್ಯ ರಾಜಕೀಯ ವಲಯದಲ್ಲಿ ಈ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ. ಹನಿಟ್ರ್ಯಾಪ್ ಮಾಡಿಸಿರುವ ಪ್ರಭಾವಿ ರಾಜಕಾರಣಿ ಬಳಿಕ ಹಲವರ ವಿಡಿಯೋ ಕೂಡ ಇದೆ ಎಂದು ಹೇಳಲಾಗುತ್ತಿದೆ. ಇವುಗಳನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ ಮಟ್ಟ ಹಾಕಲು ಸಂಚು ನಡೆದಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ರಾಜ್ಯ ರಾಜಕಾರಣದಲ್ಲಿ ಈ ಸುದ್ದಿ ಕೋಲಾಹಲವೇ ಸೃಷ್ಟಿಸುವ ಸಾಧ್ಯತೆ ಇದೆ.
ಪಂಚಾಯಿತಿ ಮಾಜಿ ಅಧ್ಯಕ್ಷನಿಗೂ ಹನಿಟ್ರ್ಯಾಪ್:
ಇತ್ತೀಚೆಗೆ ತುಮಕೂರಿನ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಕೂಡ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಯುವತಿಯೊಬ್ಬರು ಈತನನ್ನ ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸಿ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಳು. ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟು ಬ್ಲ್ಯಾಕ್‌ಮೇಲ್ ಕೂಡ ಮಾಡಿದ್ದಳು. ಇದರಿಂದ ಹಿಂದೆಯೂ ಒಂದು ಗ್ಯಾಂಗ್‌ನ ಕೈವಾಡವಿತ್ತು ಎಂದು ವರದಿಯಾಗಿತ್ತು.
ಫೇಸ್‌ಬುಕ್ ಮೂಲಕ ನಿರಂತರವಾಗಿ ಮಾಜಿ ಅಧ್ಯಕ್ಷ ಜೊತೆ ಮೆಸೇಜ್ ಮಾಡುತ್ತಿದ್ದ ಯುವತಿಯು ಗುಬ್ಬಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷನೊಂದಿಗೆ ಆತ್ಮೀಯವಾಗಿದ್ದಳು. ಬಳಿಕ ಪ್ರೀತಿಯ ನಾಟಕವಾಡಿ ಮದುವೆಯಾಗುವಂತೆಯೂ ಕೇಳಿದ್ದಳು. ಸ್ವಲ್ಪ ದಿನ ಇಬ್ಬರೂ ಒಟ್ಟಿಗೆ ಸುತ್ತಾಡಿದ್ದು ಮಾತ್ರವಲ್ಲದೆ, ಲಾಡ್ಜ್‌ಗಳಿಗೆ ತೆರಳಿದ್ದಾಗ ಈ ಹನಿಟ್ರ್ಯಾಪ್ ಕೃತ್ಯ ಎಸಗಿದ್ದರು. ಬಳಿಕ ಈ ವಿಡಿಯೋಗಳನ್ನು ತೋರಿಸಿ ಬರೋಬ್ಬರಿ 20 ಲಕ್ಷ ರೂಪಾಯಿ ಕೊಡುವಂತೆ ಡಿಮ್ಯಾಂಡ್ ಮಾಡಿದ್ದರು.
ಅಷ್ಟೇ ಅಲ್ಲದೆ ಹಣ ಕೊಡದಿದ್ದರೆ, ಆತನ ಮೇಲೆ ಅತ್ಯಾಚಾರ ಕೇಸ್ ದಾಖಲಿಸಿ, ಬೆತ್ತಲೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಮಾಜಿ ಅಧ್ಯಕ್ಷ ಈ ಗ್ಯಾಂಗ್ ವಿರುದ್ಧ ದೂರು ನೀಡಿದ್ದ. ಪೊಲೀಸರು ಫೀಲ್ಡಿಗಿಳಿದು ಹನಿಟ್ರ್ಯಾಪ್ ಗ್ಯಾಂಗ್‌ನಲ್ಲಿದ್ದವರನ್ನು ಅರೆಸ್ಟ್ ಕೂಡ ಮಾಡಿತ್ತು. ಎಲ್ಲರೂ ತುಮಕೂರು ಜಿಲ್ಲೆಯವರೇ ಆಗಿದ್ದು, ಇನ್ನಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಪ್ರಕರಣ ಮಾಸುವ ಮುನ್ನವೇ ರಾಜ್ಯ ರಾಜಕಾರಣಿಯ ಹನಿಟ್ರ್ಯಾಪ್ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ ಇದು ಕೂಡ ತುಮಕೂರು ಭಾಗದ ಪ್ರಭಾವಿ ರಾಜಕಾರಣಿ ಮೇಲೆ ನಡೆದಿರುವ ಕೃತ್ಯ ಎಂದು ಹೇಳಲಾಗುತ್ತಿದ್ದು, ಈ ಎರಡೂ ಪ್ರಕರಣಕ್ಕೂ ಏನಾದರೂ ನಂಟು ಇದೆಯೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ರಾಜಕೀಯವಲಯದಲ್ಲಿ ಈಗ ಇದೇ ವಿಚಾರ ಚರ್ಚೆಯಲ್ಲಿದೆ. ಸಿಎಂ ಆಪ್ತ ಬಳದಗವರೇ ಎನ್ನಲಾದ ಆ ಪ್ರಭಾವಿ ಸಚಿವರು ಯಾರಿರಬಹುದು? ಹನಿಟ್ರ್ಯಾಪ್ ಮಾಡಲು ಯತ್ನಿಸಿದ ಆ ಮತ್ತೊಬ್ಬ ಪ್ರಭಾವಿ ರಾಜಕಾರಣಿ ಎಂಬ ಪ್ರಶ್ನೆಗಳು ಎಲ್ಲರ ತಲೆಯಲ್ಲಿ ಓಡಾಡುತ್ತಿವೆ.












Click it and Unblock the Notifications