ಅದೃಷ್ಟ ಬದಲಿಸದ ವಾಸ್ತು, ಸಂಸ್ಥೆಯನ್ನು ಕೋರ್ಟ್ ಗೆ ಎಳೆದ ಗ್ರಾಹಕ

Posted By:
Subscribe to Oneindia Kannada

ವಾಸ್ತು ಬದಲಾಯಿಸಿದ ನಂತರ ಕೂಡ ಅದೃಷ್ಟ ಒಲಿದುಬರಲಿಲ್ಲ ಎಂಬ ಕಾರಣಕ್ಕೆ ಉತ್ತರ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ವಾಸ್ತು ಸಲಹೆ ನೀಡುವ ಸಂಸ್ಥೆಯನ್ನು ಕೋರ್ಟ್ ಗೆ ಎಳೆದಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ ಎಚ್ ಡಿ ಕುಮಾರಸ್ವಾಮಿ ಮನೆ ವಾಸ್ತು ಬದಲಾವಣೆ

ಮಹದೇವ್ ದುದಿಹಾಳ್ ಗ್ರಾಹಕ ಸುರಕ್ಷತಾ ಕಾಯ್ದೆ ಅಡಿ ವಾಸ್ತು ಶಾಸ್ತ್ರ ಹೇಳುವ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಹದೇವ್ ದುದಿಹಾಳ್ ಕಾನೂನು ಸಲಹೆ ನೀಡುವ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Karnataka Man Drags Vastu Agency To Court After It Fails To Bring Him Good Luck

ಎರಡು ವರ್ಷದ ಹಿಂದೆ ಮನೆಯ ವಾಸ್ತು ಸರಿ ಇಲ್ಲ ಎಂದು ಹೇಳಿದ್ದ ಸಂಸ್ಥೆಯು ಕೆಲವು ಬದಲಾವಣೆಗಳನ್ನು ಸೂಚಿಸಿತ್ತು. ಅದಕ್ಕಾಗಿ ಹನ್ನೊಂದು ಸಾವಿರದ ಆರುನೂರು ರುಪಾಯಿ ಪಡೆದಿತ್ತು. ಹಾಗೆ ಬದಲಾವಣೆ ಮಾಡಿದರೆ ಮೂವರು ಹೆಣ್ಣುಮಕ್ಕಳ ವಿವಾಹ ಆಗುತ್ತದೆ ಎಂದು ವಾಸ್ತು ಸಂಸ್ಥೆಯು ತಿಳಿಸಿತ್ತು.

ಮನೆಯ ನಿರ್ಮಾಣದ ಬದಲಾವಣೆಗೆ ಐದು ಲಕ್ಷ ರುಪಾಯಿ ಖರ್ಚು ಮಾಡಿದ್ದರು. ಈ ಬದಲಾವಣೆ ಆದ ಮೂರರಿಂದ ಎಂಟು ತಿಂಗಳೊಳಗೆ ಮದುವೆ ಆಗುವುದಾಗಿ ಭರವಸೆ ನೀಡಲಾಗಿತ್ತು. ಆದರೆ ದುದಿಹಾಳ್ ರ ಮಕ್ಕಳಿಗೆ ಮದುವೆ ಆಗಿರಲಿಲ್ಲ. ಅಂದಹಾಗೆ ಟಿವಿ ಜಾಹೀರಾತಿನಲ್ಲಿ ನೋಡಿದ ನಂತರ ದುದಿಹಾಳ್ ಅವರು ಸಂಸ್ಥೆಯನ್ನು ಸಂಪರ್ಕಿಸಿದ್ದರು.

ವಾಸ್ತು ಸಲಹೆ ನೀಡುವ ಸಂಸ್ಥೆ ವಿರುದ್ಧ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ಆದರೆ ಜಿಲ್ಲಾ ಫೋರಂ, ಈ ಪ್ರಕರಣ ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A man from north Karnataka has taken an agency to court after, paying them money, he changed the 'vaastu' of his home, but it brought him no luck.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ