Karnataka Dams Water Level: ರಾಜ್ಯದ ಯಾವೆಲ್ಲಾ ಪ್ರಮುಖ ಜಲಾಶಯಗಳು ಭರ್ತಿ? ಅಕ್ಟೋಬರ್ 2ರಂದು ನೀರಿನ ಮಟ್ಟ ಎಷ್ಟಿದೆ?
Karnataka Reservoirs Water Level: ರಾಜ್ಯದಲ್ಲಿ ಭಾರೀ ಮಳೆಯಿಂದ ಈಗಾಗಲೇ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಕೆಲವೇ ಕೆಲವು ಮಾತ್ರ ತುಂಬುವ ಹಂತದಲ್ಲಿವೆ. ಹಾಗಾದ್ರೆ, ಇಂದು (ಅಕ್ಟೋಬರ್ 2) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೃಷ್ಣರಾಜ ಸಾಗರ (KRS) ಸೇರಿದಂತೆ ಉಳಿದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಮುಂಗಾರು ಮಳೆ ಆರ್ಭಟದಿಂದ ಹಲವು ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿದಿವೆ. ಅಲ್ಲದೆ, ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ಅನ್ನದಾತರ ಮುಖದಲ್ಲಿ ಮಂದಹಾಸ ಮನೆ ಮಾಡಿತ್ತು. ಇನ್ನು ಇದೀಗ ಮಳೆ ಆರ್ಭಟ ತಗ್ಗಿದೆ. ಹಾಗಾದ್ರೆ, ಪ್ರಸ್ತುತ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ತಿಳಿಯಿರಿ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.45 ಟಿಎಂಸಿ
* ಇಂದಿನ ನೀರಿನ ಮಟ್ಟ- 123.3 ಅಡಿ
* ಒಳಹರಿವು - 5,977 ಕ್ಯೂಸೆಕ್
* ಹೊರಹರಿವು - 6,404 ಕ್ಯೂಸೆಕ್
2. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 65 ಅಡಿ
* ಇಂದಿನ ನೀರಿನ ಮಟ್ಟ - 63.4 ಅಡಿ
* ಒಳಹರಿವು - 4,221 ಕ್ಯೂಸೆಕ್
* ಹೊರಹರಿವು - 850 ಕ್ಯೂಸೆಕ್
3. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಒಟ್ಟು ಸಾಮರ್ಥ್ಯ - 151.75 ಟಿಎಂಸಿ
* ಇಂದಿನ ನೀರಿನ ಮಟ್ಟ - 1816.70 ಅಡಿ
* ಒಳಹರಿವು - 7,160 ಕ್ಯೂಸೆಕ್
* ಹೊರಹರಿವು 3602.97 ಕ್ಯೂಸೆಕ್
4. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಒಟ್ಟು ಸಾಮರ್ಥ್ಯ - 71.54 ಟಿಎಂಸಿ
* ಇಂದಿನ ನೀರಿನ ಮಟ್ಟ - 184.2 ಅಡಿ
* ಒಳಹರಿವು - 4,384 ಕ್ಯೂಸೆಕ್
* ಹೊರಹರಿವು - 4,384 ಕ್ಯೂಸೆಕ್
ಈಗಾಗಲೇ ಮುಂಗಾರು ಮಳೆ ಆರ್ಭಟದಿಂದ ಹಲವು ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು ತುಂಬಿ ಹರಿದಿವೆ. ಮತ್ತೊಂದೆಡೆ ಪ್ರಮುಖ ಜಲಾಶಯಗಳು ಸಹ ಭರ್ತಿಯಾದ ಹಿನ್ನೆಲೆ ರೈತರ ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ಇದೀಗ ಸದ್ಯ ಮಳೆರಾಯನ ಆರ್ಭಟ ತಗ್ಗಿದ್ದು, ಮುಂದಿನ ದಿನಗಳಲ್ಲಿ ಹಲವೆಡೆ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದೀಗ ಮಳೆ ತಗ್ಗಿದ ಕಾರಣ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಕಡಿಮೆ ಆಗಿದೆ. ಇನ್ನು ಈ ಬಾರಿ ನದಿ, ಕರೆ-ಕಟ್ಟೆಗಳು, ಜಲಾಶಯಗಳು ತುಂಬಿದ ಹಿನ್ನೆಲೆ ನೀರಿನ ಕೊರತೆ ಇಲ್ಲದಂತಾಗಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ಈ ನಡುವೆಯೇ ಮತ್ತೆ ಇದೀಗ ಚಂಡಮಾರುತದ ಪ್ರಭಾವ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ. ಒಂದು ವೇಳೆ ಹವಾಮಾನ ಇಲಾಖೆ ಮುನ್ಸೂಚನಯಂತೆ ಮಳೆಯಾದರೆ, ಮತ್ತೆ ಜಲಾಶಯಶಯಗಳ ಒಳಹರಿವು ಹೆಚ್ಚಾಗಲಿದೆ. ಈಗಾಗಲೇ ಮುಂಗಾರು ಆರ್ಭಟದಿಂದ ಕೆಲ ಜಲಾಶಯಗಳು ಎರಡು ಬಾರಿ ತುಂಬಿರುವ ಉದಾಹರಣೆಗಳಿವೆ.












Click it and Unblock the Notifications