Karnataka Major Reservoirs: ಕೆಆರ್ಎಸ್ ಸೇರಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಆಗಸ್ಟ್ 18ರ ಅಂಕಿಅಂಶಗಳು
Karnataka Reservoirs Water Level: ರಾಜ್ಯದಲ್ಲಿ ಬಹುತೇಕ ಭಾಗಗಳಲ್ಲಿ ಮುಂಗಾರು ತಗ್ಗಿದೆ. ಹಾಗಾದ್ರೆ ಮಂಗಳವಾರ (ಆಗಸ್ಟ್ 18) ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್ಎಸ್ (ಕೃಷ್ಣರಾಜ ಸಾಗರ) ಸೇರಿದಂತೆ ಇಲ್ಲಿನ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೆಳೆದ ಕೆಲದ ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಇಲ್ಲದೆ ಬರೀ ಮೋಡ ಕವಿದ ವಾತಾವರಣ ಮುಂದುವರೆದಿದೆ. ಇನ್ನೂ ಕೆಲವೇ ಭಾಗಗಳಲ್ಲಿ ಮಾತ್ರ ಮಳೆಯಾಗುತ್ತಿದ್ದು, ಜಲಾಶಯನಗಳ ಒಳಹರಿವು ಹೆಚ್ಚಾಗುತ್ತಲಿದೆ. ಹಾಗಾದ್ರೆ ಯಾವ್ಯಾವ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

1. ಕೆಆರ್ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 109.55 ಅಡಿ
* ಒಳಹರಿವು - 2,069 ಕ್ಯೂಸೆಕ್
* ಹೊರಹರಿವು - 3,186 ಕ್ಯೂಸೆಕ್
2. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,280.02 ಅಡಿ
* ಒಳಹರಿವು - 7,747 ಕ್ಯೂಸೆಕ್
* ಹೊರಹರಿವು - 13,600 ಕ್ಯೂಸೆಕ್
3. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಇಂದಿನ ನೀರಿನ ಮಟ್ಟ - 1,629.74 ಅಡಿ
* ಒಳಹರಿವು - 16,923 ಕ್ಯೂಸೆಕ್
* ಹೊರಹರಿವು - 7,880 ಕ್ಯೂಸೆಕ್
4. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಇಂದಿನ ನೀರಿನ ಮಟ್ಟ - 1794.80 ಅಡಿ
* ಒಳಹರಿವು - 11,191 ಕ್ಯೂಸೆಕ್
* ಹೊರಹರಿವು - 2,022 ಕ್ಯೂಸೆಕ್
5. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಇಂದಿನ ನೀರಿನ ಮಟ್ಟ - 173.05 ಅಡಿ
* ಒಳಹರಿವು - 3,154 ಕ್ಯೂಸೆಕ್
* ಹೊರಹರಿವು - 203 ಕ್ಯೂಸೆಕ್
6. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಇಂದಿನ ನೀರಿನ ಮಟ್ಟ - 2,858.27 ಅಡಿ
* ಒಳಹರಿವು - 2,928 ಕ್ಯೂಸೆಕ್
* ಹೊರಹರಿವು - 2,387 ಕ್ಯೂಸೆಕ್
7. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಇಂದಿನ ನೀರಿನ ಮಟ್ಟ - 2,916.75 ಅಡಿ
* ಒಳಹರಿವು - 3,905 ಕ್ಯೂಸೆಕ್
* ಹೊರಹರಿವು - 4,875 ಕ್ಯೂಸೆಕ್
8. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 519.60 ಮೀಟರ್
* ಇಂದಿನ ನೀರಿನ ಮಟ್ಟ - 519.57 ಮೀಟರ್
* ಒಳಹರಿವು - 30,243 ಕ್ಯೂಸೆಕ್
* ಹೊರಹರಿವು - 24,155 ಕ್ಯೂಸೆಕ್
9. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಇಂದಿನ ನೀರಿನ ಮಟ್ಟ - 2,174.86 ಅಡಿ
* ಒಳಹರಿವು - 8,523 ಕ್ಯೂಸೆಕ್
* ಹೊರಹರಿವು - 4,655 ಕ್ಯೂಸೆಕ್
10. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.50 ಅಡಿ
* ಇಂದಿನ ನೀರಿನ ಮಟ್ಟ - 2,066 ಅಡಿ
* ಒಳಹರಿವು - 2,842 ಕ್ಯೂಸೆಕ್
* ಹೊರಹರಿವು - 1,444 ಕ್ಯೂಸೆಕ್


Click it and Unblock the Notifications
