ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ - ಚಿಕ್ಕಮಗಳೂರು : ಮುದುಡಿದ ತಾವರೆ ಅರಳಿತು

|
Google Oneindia Kannada News

ಉಡುಪಿ, ಮೇ 16: ಉಡುಪಿ - ಚಿಕ್ಕಮಗಳೂರು ಕ್ಷೇತ್ರಕ್ಕೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಬಿಜೆಪಿ ಸಚಿವೆ ಶೋಭಾ ಕರಂದ್ಲಾಜೆ ಜಯಭೇರಿ ಭಾರಿಸಿದ್ದಾರೆ.

ಶೋಭಾ ತನ್ನ ಸಮೀಪದ ಪ್ರತಿಸ್ಪರ್ಧಿ ಹಾಲಿ ಕಾಂಗ್ರೆಸ್ ಸಂಸದ ಕೆ ಜಯಪ್ರಕಾಶ್ ಹೆಗ್ಡೆ ಅವರನ್ನು 181,643 ಮತಗಳ ಅಂತರದಿಂದ ಸೋಲಿಸಿ ಚೊಚ್ಚಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ್ದಾರೆ. (ಕರ್ನಾಟಕ ಸೀಟುಗಳಿಗೆ ಮತ ಎಣಿಕೆ : ಹಿನ್ನಡೆ ಮುನ್ನಡೆ)

ರಾಜ್ಯದ ಜಿದ್ದಾಜಿದ್ದಿನ ಕ್ಷೇತ್ರಗಳಲ್ಲೊಂದಾಗಿದ್ದ ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ತೊರೆದು, ಕೆಜಿಪಿ ಸೇರಿ ಆ ಪಕ್ಷವನ್ನೂ ತೊರೆದು ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಧನಂಜಯ ಕುಮಾರ್ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದ್ದಲ್ಲದೇ, ಠೇವಣಿಯನ್ನೂ ಕಳೆದುಕೊಂಡಿದ್ದಾರೆ.

Lok Sabha Election results 2014, Karnataka : Shobha Karandlaje (BJP) Wins Udupi-Chikmagalur constituency

ಏಪ್ರಿಲ್ 17ರಂದು ನಡೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ದಾಖಲೆಯ ಶೇ. 74.46 ಮತದಾನವಾಗಿತ್ತು. (ಕರ್ನಾಟಕ ಲೋಕಸಭೆ : ಗೆದ್ದವರು ಸೋತವರು)2009ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿದ್ದ ಸದಾನಂದ ಗೌಡ, ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗ್ಡೆ ವಿರುದ್ದ 26,685 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ನಂತರ ಬಿಜೆಪಿಯಲ್ಲಿ ಬದಲಾದ ಸನ್ನಿವೇಶದಲ್ಲಿ ಸದಾನಂದ ಗೌಡ ರಾಜ್ಯದ ಮುಖ್ಯಮಂತ್ರಿಯಾದ ನಂತರ ಉಡುಪಿ - ಚಿಕ್ಕಮಗಳೂರು ಕ್ಷೇತ್ರಕ್ಕೆ ಮರುಚುನಾವಣೆ ನಡೆಯಿತು.

ಮರುಚುನಾವಣೆಯಲ್ಲಿ ಕಾಂಗ್ರೆಸ್ಸಿನ ಕೆ ಜಯಪ್ರಕಾಶ್ ಹೆಗ್ಡೆ ಬಿಜೆಪಿಯ ಸುನೀಲ್ ಕುಮಾರ್ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು. ಈಗ ಮತ್ತೆ ಬಿಜೆಪಿ ಗೆಲ್ಲುವ ಮೂಲಕ ಕ್ಷೇತ್ರದ ಮೇಲೆ ತನ್ನ ಹಿಡಿತ ಮುಂದಿವರಿಸಿದೆ.

ಉಡುಪಿ- ಚಿಕ್ಕಮಗಳೂರು ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ಶೋಭಾ ಕರಂದ್ಲಾಜೆ 1 ಬಿಜೆಪಿ 581168
ಜಯಪ್ರಕಾಶ್ ಹೆಗ್ಡೆ
2 ಕಾಂಗ್ರೆಸ್ 399525
ಧನಂಜಯ್ ಕುಮಾರ್
3 ಜೆಡಿಎಸ್ 14895
ಎಸ್ ವಿಜಯ್ ಕುಮಾರ್ 4 ಸಿಪಿಐ 9691
English summary
Lok Sabha Election results 2014, Karnataka : Former BJP minister Shobha Karandlaje (BJP) Wins Udupi-Chikmagalur constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X