Karnataka Winter Session 2021: ಮತಾಂತರ ನಿಷೇಧ ವಿಧೇಯಕ ಇಂದು ಪರಿಷತ್‌ನಲ್ಲಿ ಮಂಡನೆ
ಬೆಳಗಾವಿ, ಡಿಸೆಂಬರ್ 24: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನವು ಡಿಸೆಂಬರ್ 13ರ ಸೋಮವಾರದಿಂದ ಆರಂಭವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ನಂತರದಲ್ಲಿ ಮೊದಲ ಬಾರಿಗೆ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಹತ್ತು ದಿನಗಳ ಅಧಿವೇಶನಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಈ ನಡುವೆ 40ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಪ್ರತಿಭಟನೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಂಡಿವೆ.
ಚಳಿಗಾಲ ಅಧಿವೇಶನಕ್ಕೆ ಸರ್ಕಾರ ಒಂದು ಕಡೆ ಅಣಿಯಾಗಿದ್ದರೆ, ಇದೇ ವೇಳೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸನ್ನದ್ಧವಾಗಿವೆ. ಪ್ರವಾಹ, ಕೊರೊನಾವೈರಸ್ ಕಾರಣದಿಂದಾಗಿ ಬೆಂಗಳೂರಿನಲ್ಲೇ ಅಧಿವೇಶನವನ್ನು ನಡೆಸಲಾಗಿದ್ದು, 2018ರ ನಂತರ ಬೆಳಗಾವಿಯಲ್ಲಿ ಮೊದಲ ಬಾರಿ ಅಧಿವೇಶನ ನಡೆಯುತ್ತಿದೆ. ಡಿಸೆಂಬರ್ 13 ರಿಂದ ಡಿಸೆಂಬರ್ 24 ರವರೆಗೆ ಚಳಿಗಾಲ ಅಧಿವೇಶನ ನಡೆಯಲಿದೆ.
ಸುವರ್ಣ ಸೌಧದಲ್ಲಿ ಅಧಿವೇಶನಕ್ಕೆ 12 ಕೋಟಿ ಖರ್ಚು:
ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನಕ್ಕಾಗಿ ಸುಮಾರು 12 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಶಾಸಕರು, ಸಚಿವರು, ಅಧಿಕಾರಿಗಳು, ಸಿಬ್ಬಂದಿ ಸೇರಿ ಸುಮಾರು 4500 ಜನರಿಗೆ ಜಿಲ್ಲಾಡಳಿತದಿಂದ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಹತ್ತು ದಿನದ ಚಳಿಗಾಲದ ಅಧಿವೇಶನಕ್ಕಾಗಿ ಸರ್ಕಾರ ಹನ್ನೆರಡು ಕೋಟಿ ಖರ್ಚು ಮಾಡುತ್ತಿದೆ. ಈ ಹಿಂದಿನ ಅಧಿವೇಶನಕ್ಕೆ ಸುಮಾರು 24 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿತ್ತು. ಆದರೆ ಈ ಬಾರಿ ಚಳಿಗಾಲದ ಅಧಿವೇಶನಕ್ಕೆ ಸುಮಾರು 12 ಕೋಟಿ ರೂ. ಮಾತ್ರ ಖರ್ಚು ಮಾಡಲಾಗುತ್ತಿದೆ. ಅಧಿವೇಶನ ಭದ್ರತೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಸುಮಾರು 2800 ಪೊಲೀಸ್ ಸಿಬ್ಬಂದಿ, ಐನೂರಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತಾಲಯ ವಸತಿ ಸೌಲಭ್ಯ ಕಲ್ಪಿಸುತ್ತಿದೆ.

ಸರ್ಕಾರಕ್ಕೆ ವಿಪಕ್ಷಗಳ ಸವಾಲು:
ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಅಸ್ತ್ರ ಪ್ರಯೋಗಕ್ಕೆ ಪ್ರತಿಪಕ್ಷಗಳು ಅಣಿಯಾಗಿವೆ. ಆ ಪೈಕಿ ಅತಿವೃಷ್ಟಿ, ನೆರೆ ಹಾವಳಿ ಪರಿಹಾರ ಕಾರ್ಯ ಹಾಗೂ ಪುನರ್ ವ್ಯವಸ್ಥೆ, ಕೇಂದ್ರ ಸರ್ಕಾರ ನೆರವು ವಿಚಾರ, ಬಿಟ್‌ಕಾಯಿನ್ ಹಗರಣ, ಮೇಕೆದಾಟು ಯೋಜನೆ ವಿಳಂಬ, ವಿವಿಧ ಇಲಾಖೆಗಳಲ್ಲಿ ಶೇ.40ರಷ್ಟು ಪರ್ಸೆಂಟೇಜ್ ತೆಗೆದುಕೊಳ್ಳುತ್ತಿರುವ ಬಗ್ಗೆ ಗುತ್ತಿಗೆದಾರರ ಆರೋಪ, ಕೊವಿಡ್-19 ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡದ ಕುರಿತು ವಿಷಯಗಳನ್ನು ಪ್ರತಿಪಕ್ಷಗಳು ತಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಂಡಿವೆ. ಇದೇ ವಿಷಯಗಳನ್ನು ಇಟ್ಟುಕೊಂಡು ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸನ್ನದ್ಧವಾಗಿವೆ. ಸೋಮವಾರದಿಂದ ಬೆಳಗಾವಿ ಸುವರ್ಣ ಸೌಧದದಲ್ಲಿ ಆರಂಭವಾಗುತ್ತಿರುವ ಚಳಿಗಾಲ ಅಧಿವೇಶನದ ಕ್ಷಣಕ್ಷಣದ ಅಪ್‌ಡೇಟ್‌ಗಾಗಿ ಇಲ್ಲಿ ಓದಿ.
Belagavi | 'Anti-conversion bill being discussed in Karnataka Assembly today
— ANI (@ANI) December 23, 2021
JC Madhuswamy, State Law and Parliamentary Affairs minister places on record that this bill was actually initiated by Siddaramaiah lead govt in 2016 pic.twitter.com/7rWQlCiIPA












Click it and Unblock the Notifications