ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನ ಪರಿಷತ್‌ ಚುನಾವಣೆ: 6 ರಲ್ಲಿ ಎರಡು ಜೆಡಿಎಸ್‌, 1 ಬಿಜೆಪಿ ಗೆಲುವು

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಜೂನ್ 12: ಇಂದು ನೆಡಯುತ್ತಿರುವ ವಿಧಾನಪರಿಷತ್ ಚುನಾವಣೆ ಮತ ಎಣಿಕೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಫಲಿತಾಂಶ ಹೊರ ಬಿದ್ದಿದ್ದು ಜೆಡಿಎಸ್‌ನ ಮರಿತಿಬ್ಬೇಗೌಡ ಗೆದ್ದಿದ್ದಾರೆ.

ಈ ಗೆಲುವಿನ ಮೂಲಕ ನಾಲ್ಕನೇ ಬಾರಿ ಮರಿತಿಬ್ಬೇಗೌಡ ಅವರು ಪರಿಷತ್‌ಗೆ ಆಯ್ಕೆ ಆದಂತಾಗಿದೆ. ಅವರು ತಮ್ಮ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಂ.ಲಕ್ಷ್ಮಣ್‌ ಅವರನ್ನು 360 ಮತಗಳ ಅಂತರದಿಂದ ಸೋಲಿಸಿದ್ದಾರೆ.

ವಿಧಾನಪರಿಷತ್ ಚುನಾವಣೆ: ಇಂದು ಫಲಿತಾಂಶ ವಿಧಾನಪರಿಷತ್ ಚುನಾವಣೆ: ಇಂದು ಫಲಿತಾಂಶ

karnataka legislative council election result 2018

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ನ ರಮೇಶ್‌ ಬಾಬು ಅವರು ಸೋಲನ್ನಪ್ಪಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಾಮಪ್ಪ ಅವರು ಸ್ಪರ್ಧಿಸಿದ್ದರು.

ಭೋಜೆಗೌಡ ಅವರು 907 ಮತಗಳ ಮುನ್ನೆಡೆ ಕಾಯ್ದುಕೊಂಡಿದ್ದಾರೆ. 8ನೇ ಸುತ್ತಿನ ಅಂತ್ಯಕ್ಕೆ ಅವರಿಗೆ 6329 ಮತಗಳು ದೊರೆತಿವೆ.
ಬಿಜೆಪಿಯ ಅಭ್ಯರ್ಥಿ ಗಣೇಶ್ ಕಾರ್ಣಿಕ್ 5407 ಮತಗಳನ್ನು ಪಡೆದಿದ್ದಾರೆ, ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ 2450 ಮತಗಳನ್ನು ಪಡೆದಿದ್ದಾರೆ. ಒಟ್ಟು 16479 ಮತಗಳು ಚಲಾವಣೆಯಾಗಿದ್ದು ಗೆಲುವಿಗೆ 7847 ಮತಗಳು ಬೇಕಿದೆ.

ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 2ನೇ ಸುತ್ತಿನ ಪ್ರಾಶಸ್ತ್ಯದ ಮತಗಳ ಎಣಿಕೆ ಮುಗಿದಿದ್ದು, ಜೆಡಿಎಸ್‌ನ ಪ್ರತಾಪ್ ರೆಡ್ಡಿ ಅವರು 8,176 ಮತಗಳು ಗಳಿಸಿದ್ದಾರೆ. ಬಿಜೆಪಿಯ ಶ್ರೀನಿವಾಸ್ ಅವರಿಗೆ 7,876 ಮತಗಳು ಪಡೆದಿದ್ದಾರೆ. ಪ್ರತಾಪ್ ರೆಡ್ಡಿ ಅವರು 270 ಮತಗಳು ಮುಂದೆ ಇದ್ದಾರೆ.

ಕಾಂಗ್ರೆಸ್‌ನ ಚಂದ್ರಶೇಖರ ಪಾಟೀಲ್ ಅಷ್ಟೇನು ಉತ್ತಮ ಸ್ಥಿತಿಯಲ್ಲಿಲ್ಲ ಅಲ್ಲದೆ ನಿರೀಕ್ಷೆ ಹುಟ್ಟಿಸಿದ್ದ ಹೋರಾಟಗಾರ ಡಾ.ರಝಾಕ್​ ಉಸ್ತಾದ್​ ಹಾಗೂ ವಾಟಾಳ್ ನಾಗರಾಜು ಅವರು ಹಿಂದೆ ಬಿದ್ದಿದ್ದಾರೆ.

ಒಟ್ಟು ಆರು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ ಫಲಿತಾಂಶ ಹೊರಬೀಳಲಿದೆ. ನೈರುತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ ಹಾಗೂ ಈಶಾನ್ಯ ಪದವೀಧರ ಕ್ಷೇತ್ರ, ನೈರುತ್ಯ ಪದವೀಧರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರಗಳಿಗೆ ಜೂನ್ 8ರಂದು ಮತದಾನ ನಡೆದಿತ್ತು.

English summary
Karnataka legislative council election result announcing today. counting is going on in Mysuru. as first result JDS's candidate Marithibbe Gowda won from south teachers constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X