ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದಲ್ಲಿ ಸರಣಿ ಸ್ಪೋಟ : ಕರ್ನಾಟಕ ನಾಯಕರಿಂದ ಖಂಡನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 21 : ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟವನ್ನು ಕರ್ನಾಟಕದ ನಾಯಕರು ಸಹ ಖಂಡಿಸಿದ್ದಾರೆ. ಶ್ರೀಲಂಕಾದಲ್ಲಿ 7 ಕಡೆ ಬಾಂಬ್ ಸ್ಫೋಟ ಸಂಭವಿಸಿದ್ದು, 140ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.

ಭಾನುವಾರ ಬೆಳಗ್ಗೆಯಿಂದ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಸರಣಿ ಬಾಂಬ್ ಸ್ಫೋಟ ನಡೆಯುತ್ತಿದೆ. ಈಸ್ಟರ್ ದಿನ ಪ್ರಾರ್ಥನೆ ನಡೆಯುತ್ತಿರುವಾಗ ಚರ್ಚ್‌ನಲ್ಲಿ ಮೊದಲು ಬಾಂಬ್ ಸ್ಫೋಟವಾಯಿತು. ಬಳಿಕ ಹೋಟೆಲ್‌ನಲ್ಲಿ ಸ್ಫೋಟ ಸಂಭವಿಸಿದೆ.

ಕೊಲಂಬೋ ಸ್ಫೋಟಕ್ಕೆ ಕನಿಷ್ಠ 156 ಸಾವು; ಸುಷ್ಮಾ ಸ್ವರಾಜ್ ಟ್ವೀಟ್ಕೊಲಂಬೋ ಸ್ಫೋಟಕ್ಕೆ ಕನಿಷ್ಠ 156 ಸಾವು; ಸುಷ್ಮಾ ಸ್ವರಾಜ್ ಟ್ವೀಟ್

Karnataka leaders condemns terrorist attack in Sri Lanka

ಸರಣಿ ಬಾಂಬ್ ಸ್ಫೋಟದಿಂದಾಗಿ ಇದುವರೆಗೂ 140ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

ಈಸ್ಟರ್ ದಿನ ದುರಂತ: ಶ್ರೀಲಂಕಾದ ಚರ್ಚ್ ಸ್ಫೋಟ, ಕನಿಷ್ಠ 160 ಸಾವುಈಸ್ಟರ್ ದಿನ ದುರಂತ: ಶ್ರೀಲಂಕಾದ ಚರ್ಚ್ ಸ್ಫೋಟ, ಕನಿಷ್ಠ 160 ಸಾವು

ಡಾ.ಜಿ.ಪರಮೇಶ್ವರ ಟ್ವೀಟ್ : ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಶ್ರೀಲಂಕಾದಲ್ಲಿ ನಡೆದ ದಾಳಿಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.

ಕೆಪಿಸಿಸಿಯಿಂದ ಖಂಡನೆ : ಶ್ರೀಲಂಕಾದಲ್ಲಿ ನಡೆದ ಭೀಕರ ಸರಣಿ ಬಾಂಬ್ ಸ್ಪೋಟ ಅತ್ಯಂತ ಆಘಾತಕಾರಿ ಮತ್ತು ಖಂಡನೀಯ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಸಿದ್ದರಾಮಯ್ಯ ಖಂಡನೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಸರಣಿ ಬಾಂಬ್ ಸ್ಫೋಟವನ್ನು ಖಂಡಿಸಿದ್ದಾರೆ.

English summary
Karnataka political leaders condemned the terror attack in Sri Lanka on Sunday, April 21, 2019. More than 140 people killed in a serial blast in Sri Lanka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X