KSRTC Fly Bus: ಬೆಂಗಳೂರು ಏರ್‌ಪೋರ್ಟ್-ದಾವಣಗೆರೆ ನೇರ ಫ್ಲೈ ಬಸ್ ಸೇವೆಗೆ ಚಾಲನೆ: ಸಮಯ, ಟಿಕೆಟ್ ದರ, ವೇಳಾಪಟ್ಟಿ
KSRTC Fly Bus in Karnataka: ರಾಜಧಾನಿ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳ ಮಾರ್ಗವಾಗಿ ಬೆಣ್ಣೆ ನಗರಿ ದಾವಣಗೆರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನೂತನ ನೇರ ಫ್ಲೈ ಬಸ್ ಸೇವೆ (KSRTC Fly Bus Service) ಆರಂಭಿಸಿದೆ. ಇಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾನ (KIA) ಟರ್ಮಿನಲ್ 2ರಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಿಂದಲೇ ದಾವಣಗೆರೆಗೆ ನೂತನವಾಗಿ ನೇರ ಫ್ಲೈ ಬಸ್ ಸೇವೆ ಇದಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆಯನ್ನು ನೀಡುವ ಉದ್ದೇಶದಿಂದ ಈ ಸೇವೆ ಆರಂಭಿಸಿದೆ. ಈ ಬಸ್ ಯಾವ ಮಾರ್ಗದಲ್ಲಿ ಸಂಚರಿಸಲಿದೆ, ಟಿಕೆಟ್ ದರ, ಸಮಯ ವೇಳಾಪಟ್ಟಿ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನೂತನ ಬಸ್ ಸೇವೆಗೆ ಚಾಲನೆ ನೀಡಿದ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ನಾನು ಸಚಿವರಾಗಿ ಮೊದಲ ಅವಧಿಯಲ್ಲಿ ಮೊದಲ ಬಾರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಂದ ಮೈಸೂರಿಗೆ 2013ರಲ್ಲಿ ಆಗಸ್ಟ್ ತಿಂಗಳಲ್ಲಿ ನೇರ ಫ್ಲೈಬಸ್ ಸಾರಿಗೆ ವ್ಯವಸ್ಥೆಯು ಪ್ರಾರಂಭಿಸಲಾಗಿತ್ತು. ಕೆಲವು ದಿನಗಳ ಬಳಿಕ ಅದನ್ನು ಮಡಿಕೇರಿ, ಕುಂದಾಪುರಕ್ಕೆ ಫ್ಲೈ ಬಸ್ ಸೇವೆಯನ್ನು ವಿಸ್ತರಿಸಲಾಯಿತು ಎಂದು ತಿಳಿಸಿದರು.
ಸಾರ್ವಜನಿಕ ಸಾರಿಗೆಯನ್ನು ಉತ್ತೀಜಿಸುವುದು ಹೆಚ್ಚು ಹೆಚ್ಚು ಬಳಸುವಂತೆ ಮಾಡುವುದು ನಮ್ಮ ಪ್ರಥಮ ಆದ್ಯತೆ ಆಗಿರಬೇಕು. ಆ ನಿಟ್ಟಿನಲ್ಲಿ ಇಂದು ಬೆಂಗಳೂರು - ದಾವಣಗೆರೆ ನಡುವೆ ನೇರ ಫ್ಲೈ ಬಸ್ ಸೇವೆ ಆರಂಭಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಹೊಸ ಹೊಸ ಸೇವೆ ಮತ್ತು ಉಪಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಮುಂಚೂಣಿಯಲ್ಲಿದೆ. ಭಾರತ ಸರ್ಕಾರದಿಂದ ಇತ್ತೀಚೆಗೆ ಮೈಸೂರು ನಗರದ ಧ್ವನಿಸ್ಪಂದನ ಉಪಕ್ರಮಕ್ಕೆ ಉತ್ಕೃಷ್ಟತಾ ಪ್ರಶಸ್ತಿ ಲಭಿಸಿದೆ. ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಫ್ಲೈ ಬಸ್ ಗಳಲ್ಲಿ ಇನ್ನು ಮುಂದೆ ಸ್ಯ್ನಾಕ್ಸ್ ಕಿಟ್ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಫ್ಲೈಬಸ್ ಸೇವೆ ವೇಳಾಪಟ್ಟಿ, ಸಂಚಾರ ಸಮಯ
KSRTC ನೂತನ ಫ್ಲೈಬಸ್ ಸೇವೆಯು ಬೆಂಗಳೂರು ಏರ್‌ಪೋರ್ಟ್‌ನಿಂದ ನಿತ್ಯ ಬೆಳಗ್ಗೆ (ಮಧ್ಯರಾತ್ರಿ) 00.45 ಗಂಟೆಗೆ ಇಲ್ಲಿಂದ ಹೊರಟು ಬೆಳಗಿನ ಜಾವ 5.45ಕ್ಕೆ ದಾವಣಗೆರೆ ತಲುಪಲಿದೆ. ಅದೇ ರೀತಿ ಮತ್ತೊಂದು ಬಸ್ ಬೆಂಗಳೂರು ಏರ್ಪೋರ್ಟ್ ನಿಂದ ಬೆಳಗ್ಗೆ 10 ಗಂಟೆಗೆ ಹೊರಟು ಮಧ್ಯಾಹ್ನ 15 ಗಂಟೆಗೆ ದಾವಣಗೆರೆ ನಗರ ತಲುಪುತ್ತದೆ.
ಮರಳಿ ದಾವಣಗೆರೆಯಿಂದ ಬೆಳಗ್ಗೆ 08 ಗಂಟೆಗೆ ಹೊರಡುವ ಕೆಎಸ್‌ಆರ್‌ಟಿ ನೇರ ಫ್ಲೈಬಸ್ ಮಧ್ಯಾಹ್ನ 01 ಗಂಟೆಗೆ ಬೆಂಗಳೂರು ಏರ್‌ಪೋರ್ಟ್ ತಲುಪುತ್ತದೆ. ಮತ್ತೊಂದು ಬಸ್ ಸಂಜೆ 17 ಗಂಟೆಗೆ ದಾಣವಗೆರೆಯಿಂದ ಹೊರಟು ರಾತ್ರಿ 22 ಗಂಟೆಗೆ ಬೆಂಗಳೂರು ಏರ್‌ಪೋರ್ಟ್ ನಿಲ್ದಾಣ ಬಂದು ಸೇರುತ್ತದೆ ರಾಜ್ಯ ಸಾರಿಗೆ ನಿಗಮ ತಿಳಿಸಿದೆ.

ನೇರ ಫ್ಲೈಬಸ್ ಸಂಚಾರ ಮಾರ್ಗ ಯಾವುದು?
ಬೆಂಗಳೂರು ಏರ್‌ಪೋರ್ಟ್‌ನಿಂದ ಈ ಫ್ಲೈ ಬಸ್ ಸ್ಯಾಟ್ ಲೈಟ್ ಟೌನ್ ರಿಂಗ್ ರಸ್ತೆ ಮೂಲಕ ದೊಡ್ಡ ಬಳ್ಳಾಪುರ ಬೈಪಾಸ್- ದಾಬಾಸ್ ಪೇಟೆ, ತುಮಕೂರು ಬೈಪಾಸ್, ಚಿತ್ರದುರ್ಗ ಬೈಪಾಸ್ ಮೂಲಕ ನೇರವಾಗಿ ದಾವಣಗೆರೆಗೆ ತಲುಪುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ತುಮಕೂರು ಬೈಪಾಸ್ ಮತ್ತು ಚಿತ್ರದುರ್ಗ ಬೈಪಾಸ್ ಸೇರಿ ಎರಡು ಮಾರ್ಗ ಮಧ್ಯ ಪಿಕಪ್ ಮತ್ತು ಡ್ರಾಪ್ ಪಾಯಿಂಟ್ ಮಾಡಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ಹೇಳಿದ್ದಾರೆ.
ತಪುತ್ತೆ ಟ್ರಾಫಿಕ್ ಬಿಸಿ, ಹಣ-ಸಮಯ ಉಳಿತಾಯ
ಈ ಸೇವೆಯಿಂದ ಮಾರ್ಗ ಹಾಗೂ ನಡುವಿನ ಕೆಲವು ಜಿಲ್ಲೆಗಳ ಜನರಿಗೆ ನೇರ ಬಸ್ ಸಾರಿಗೆ ಸೇವೆ ಸಿಗುತ್ತಿದೆ. ಬೆಂಗಳೂರು ಏರ್‌ಪೋರ್ಟ್‌ನಿಂದ ನಗರದ ಬಸ್ ನಿಲ್ದಾಣಗಳಿಗೆ ಈ ಟ್ರಾಫಿಕ್ ನಲ್ಲಿ ಬರಬೇಕಿತ್ತು. ಮತ್ತೆ ಇಲ್ಲಿಂದ ದಾವಣಗೆರೆ ತೆರಳಬೇಕಿತ್ತು. ಇದರಿಂದ ಸಮಯ, ಹಣ ಉಳಿತಾಯವಾಗುತ್ತದೆ. ಸಂಚಾರ ದಟ್ಟಣೆಯ ಕಿರಿ ಕಿರಿ ತಪ್ಪುತ್ತದೆ. ಜೊತೆಗೆ ಜನರಿಗೆ ನೇರ ಬಸ್ ಸೇವೆ ಸಿಕ್ಕಂತಾಗಿದೆ.
ಟಿಕೆಟ್ ಬುಕ್ಕಿಂಗ್ ಹೇಗೆ?
www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ KIAB ಬುಕ್ಕಿಂಗ್ ಕೌಂಟರ್ ಸಂಖ್ಯೆ 99722 13726 ಗೆ ಕರೆ ಮಾಡಿ ಅಥವಾ ಕಾಲ್ ಸೆಂಟರ್ ಸಂಖ್ಯೆ 080 2625 2625 ಗೆ ಕರೆ ಮಾಡುವ ಮೂಲಕ
ಫ್ಲೈಬಸ್ ಟಿಕೆಟ್ ದರ ವಿವರ
* ಬೆಂಗಳೂರು ವಿಮಾನ ನಿಲ್ದಾಣದಿಂದ - ತುಮಕೂರು ₹400
* ಬೆಂಗಳೂರು ವಿಮಾನ ನಿಲ್ದಾಣದಿಂದ - ಚಿತ್ರದುರ್ಗ ₹980
* ಬೆಂಗಳೂರು ವಿಮಾನ ನಿಲ್ದಾಣದಿಂದ -ದಾವಣಗೆರೆ ₹1250
ರಾಜ್ಯದಲ್ಲಿರುವ ಒಟ್ಟು ಫ್ಲೈಬಸ್ ಸಾರಿಗೆಗಳು ಎಷ್ಟು?
* ಒಟ್ಟು ಮಾರ್ಗಗಳಲ್ಲಿ 13 ಫ್ಲೈ ಬಸ್ ಸಂಚಾರ.
* ಮೈಸೂರು: 09
* ಮಡಿಕೇರಿ: 02
* ದಾವಣಗೆರೆ: 02
* ಕುಂದಾಪುರ: 02 (ಅಂಬಾರಿ ಉತ್ಸವ)
* ದಿನವಹಿ ಟ್ರಿಪ್ ಗಳು: 44
* ದಿನವಹಿ ಕಿಮೀ: 10240
* ಪ್ರತಿ ಕಿಮೀ ಆದಾಯ: ₹90
* ದಿನವಹಿ ಸರಾಸರಿ ಪ್ರಯಾಣಿಕರ ಸಂಖ್ಯೆ: 1050
-
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications