ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ: ಉಪೇಂದ್ರ ಪ್ರತಿಭಟನೆ
Recommended Video
ಕರ್ನಾಟಕದಲ್ಲಿ ಕನ್ನಡಿಗರಿಗೆ ಕೆಲಸ ಕೊಡಿ ಇಲ್ಲಾ ಅಂದ್ರೆ..? | Oneindia Kannada
ಬೆಂಗಳೂರು, ಆಗಸ್ಟ್ 13: ಕರ್ನಾಟಕದಲ್ಲಿ ಉದ್ಯೋಗ ನೀಡಿಕೆಗೆ ಮೊದಲ ಆದ್ಯತೆ ಕನ್ನಡಿಗನೇ ಆಗಿರಬೇಕು ಎಂದು ಒತ್ತಾಯಿಸಿ ನಗರದಲ್ಲಿ ಎರಡು ದಿನಗಳ ಕಾಲ ಪ್ರತಿಭಟನೆ ನಡೆಯುತ್ತಿದ್ದು, ಇದಕ್ಕೆ ಉಪೇಂದ್ರ ಬೆಂಬಲ ನೀಡಿದ್ದಾರೆ.
ಆಗಸ್ಟ್ 14 ಮತ್ತು 15 ರಂದು ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಗಾಂಧಿ ಪ್ರತಿಮೆ ಮುಂಭಾಗ ಉಪವಾಸ ಮಾಡಲಾಗುತ್ತದೆ. ಈ ಹೋರಾಟದಲ್ಲಿ ಮೊದಲ ದಿನವೇ ಉಪೇಂದ್ರ ಅವರು ನೇರವಾಗಿ ಭಾಗವಹಿಸಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಉಪೇಂದ್ರ ''ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಮೀಸಲಾಗಲಿ ಎನ್ನುವುದು ಬಹಳ ವರ್ಷಗಳಿಂದ ಇರುವ ಬೇಡಿಕೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಲೇ ಬೇಕು. ಅದು ಎಲ್ಲರ ಕನಸು. ಇದರ ಬಗ್ಗೆ ಹೋರಾಟ ನಡೆಯುತ್ತಿದ್ದು, ನಾನು ಕೂಡ ಇದರಲ್ಲಿ ಭಾಗಿಯಾಗುತ್ತಿದ್ದೇನೆ'' ಎಂದು ತಿಳಿಸಿದ್ದಾರೆ.

ನಟ ಉಪೇಂದ್ರ ಜೊತೆಗೆ ಹಾಸ್ಯ ನಟ ಚಿಕ್ಕಣ್ಣ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಬಿಗ್ ಬಾಸ್ ಸ್ಪರ್ಧಿಗಳಾದ ಪ್ರಥಮ್, ದಿವಕರ್ ಹಾಗೂ ಇನ್ನೂ ಹಲವರು ಹೋರಾಟಕ್ಕೆ ಸಾಥ್ ನೀಡಿದ್ದಾರೆ.












Click it and Unblock the Notifications