ಪ್ರಸಾದ್ ಮತ್ತು ಗಣಪತಿ 8 ವರ್ಷದಿಂದ ಭೇಟಿಯೇ ಆಗಿಲ್ಲ!
ಬೆಂಗಳೂರು, ಜುಲೈ, 08: ಡಿವೈಎಸ್ ಪಿ ಎಮ್ ಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗುಪ್ತಚರದಳದ ಅಡಿಶನಲ್ ಜನರಲ್ ಆಫ್ ಪೊಲೀಸ್ ಎ ಎಂ ಪ್ರಸಾದ್ ಅವರ ಹೆಸರು ಕೇಳಿ ಬಂದಿದೆ. ಪ್ರಸಾದ್ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಅಪವಾದವೂ ಕೇಳಿ ಬಂದಿದೆ.
ಆದರೆ ಪೊಲೀಸ್ ಇಲಾಖೆ ಒನ್ ಇಂಡಿಯಾಕ್ಕೆ ನೀಡಿರುವ ಮಾಹಿತಿ ಇನ್ನೊಂದು ಆಯಾಮವನ್ನು ತೆಗೆದಿರಿಸುತ್ತದೆ. ಪೊಲೀಸ್ ಮೂಲಗಳು ಹೇಳುವಂತೆ ಎ ಎಂ ಪ್ರಸಾದ್ ಮತ್ತು ಆತ್ಮಹತ್ಯೆ ಮಾಡಿಕೊಂಡ ಕಳೆದ ಗಣಪತಿ ಎಂಟು ವರ್ಷಗಳಿಂದ ಭೇಟಿಯೇ ಆಗಿಲ್ಲ![ಡಿವೈಎಸ್‌ಪಿ ಎಂ.ಕೆ.ಗಣಪತಿ ಡೆತ್ ನೋಟ್ ಎಲ್ಲಿ?]

2008 ರಲ್ಲಿ ಎ ಎಂ ಪ್ರಸಾದ್ ಪಶ್ಚಿಮ ವಲಯದ ಐಜಿಪಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಗ ಗಣಪತಿ ಕದ್ರಿ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದರು. ಈ ಸಂದರ್ಭದಲ್ಲಿ ಪ್ರಸಾದ್ ಗಣಪತಿ ಅವರನ್ನು ಒಂದೆರಡು ಸಾರಿ ಭೇಟಿ ಮಾಡಿದ್ದರು. ಗಣಪತಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿದ್ದ ಎನ್ ಸತೀಶ್ ಕುಮಾರ್ ಅವರಿಗೆ ವರದಿ ಮಾಡಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲೇ ಗಣಪತಿ ಹೆಸರು ಚರ್ಚ್ ಗಲಾಟೆಯೊಂದಿಗೆ ತಳುಕು ಹಾಕಿಕೊಂಡಿದ್ದು.[ಸಮವಸ್ತ್ರದಲ್ಲೇ ನೇಣಿಗೆ ಶರಣಾದ ಡಿವೈಎಸ್ಪಿ ಗಣಪತಿ]
2008 ರ ನಂತರ ಪ್ರಸಾದ್ ಗುಪ್ತಚರ ದಳಕ್ಕೆ ನಿಯೋಜನೆಗೊಂಡರು. ಇದಾದ ಮೇಲೆ ಗಣಪತಿ ಮತ್ತು ಪ್ರಸಾದ್ ಭೇಟಿಯಾಗಿದ್ದೇ ಇಲ್ಲ. ಆದರೆ ಸಾವಿಗೂ ಮುನ್ನ ಗಣಪತಿ ಪ್ರಸಾದ್ ಅವರ ಹೆಸರನ್ನು ಯಾಕೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.[ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ : ಯಾರು, ಏನು ಹೇಳಿದರು?]
ಅಲ್ಲದೇ ಗಣಪತಿ ಪ್ರಸಾದ್ ಅವರ ಬಳಿ ಬಂದು ಸಹಾಯ ಕೇಳಿದ್ದರೂ ಎಂಬ ಸಂಗತಿಯನ್ನು ಇಲಾಖೆ ಮೂಲಗಳು ತಳ್ಳಿಹಾಕುತ್ತವೆ. ಒಟ್ಟಿನಲ್ಲಿ ಗಣಪತಿ ಅವರ ಸಾವು ರಾಜ್ಯದ ಪೊಲೀಸ್ ಇಲಾಖೆಗೆ ಆದ ನಷ್ಟ. ಆದರೆ ಅನೇಕ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಗುವುದು ಯಾವಾಗಲೋ?












Click it and Unblock the Notifications