Weather: ಕರ್ನಾಟಕದಲ್ಲಿ 122ರಲ್ಲಿ 79 ದಿನ ಒಣ ಹವಾಮಾನ! ವಾಡಿಕೆಗೂ ಹೆಚ್ಚು ಮಳೆ ಆಗಿದ್ದೇ ಬರೀ 12 ದಿನ

ಬೆಂಗಳೂರು: ಮುಂಗಾರು ಅವಧಿಯ 122 ದಿನಗಳ ಪೈಕಿ ಕೇವಲ 12 ದಿನ ಮಾತ್ರವೇ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಆಗಿದೆ. ಉಳಿದಂತೆ ಹಲವು ದಿನ ಸಾಮಾನ್ಯ ಮುಂಗಾರು ಸುರಿದಿದ್ದು, ಬಿಟ್ಟರೆ ಬಹುತೇಕ 79 ದಿನಗಳು ಒಣ ದಿನಗಳನ್ನು (Dry Day) ರಾಜ್ಯ ಕಂಡಿದೆ. ರಾಜ್ಯಕ್ಕೆ ಬಹುಪಾಲು ನೀರು ಒದಗಿಸುವ ಮಳೆ ಈ ವರ್ಷ ಕೊರೆತೆ ಸೃಷ್ಟಿಸಿದೆ.

ಜೂನ್ 1ರಿಂದ ಸೆಪ್ಟೆಂಬರ್ 30 ರವರೆಗಿನ 122 ದಿನಗಳ ಮುಂಗಾರು ಅವಧಿಯಲ್ಲಿ ಮಳೆ ಬಂದಿದ್ದಕ್ಕಿಂತ ಹೆಚ್ಚಾಗಿ ಬಿಸಿಲಿನ ಆರ್ಭಟ, ಮಳೆ ಬಾರದ ಒಣ ದಿನಗಳೇ ಹೆಚ್ಚಿದ್ದವು. ರಾಜ್ಯಕ್ಕೆ ಪ್ರತಿ ವರ್ಷ ಶೇ.100ರಲ್ಲಿ ಸುಮಾರು 74ರಷ್ಟು ಮಳೆ ಇದೇ ಮುಂಗಾರು ಅವಧಿಯಲ್ಲೇ ಬರುತ್ತದೆ. ಆದರೆ ಈ ಬಾಗಿ ಶೇ.35ರಷ್ಟು ಮಳೆ ಕೊರತೆ ಆಗಿದ್ದು, ಎಲ್ಲೆಡೆ ಬರಗಾಲ ಸೃಷ್ಟಿ ಆಗಿದೆ. ರಾಜ್ಯವು 2026ರಲ್ಲಿ ದೀರ್ಘ ಕಾಲದವರೆಗೆ ಮಳೆ ಬಾರದ ದಿನಗಳಿಗೆ ಸಾಕ್ಷಿಯಾಗಿದೆ.

Karnataka

ಒಣ ಹವಾಮಾನದಿಂದ ಕೂಡಿದ್ದ 79 ದಿನಗಳು

ಕಂದಾಯ ಇಲಾಖೆಯು ಮುಂಗಾರಿನ ಈ 122 ದಿನಗಳಲ್ಲಿ 79 ದಿನಗಳು ಮಳೆಯೇ ಆಗಿಲ್ಲ ಎಂದು ಹೇಳಿದೆ. ಆಗಿರುವ ಅತ್ಯಲ್ಪ ಮಳೆಯಿಂದ ಕೊಂಚ ಕೆರೆ, ಜಲಾಶಯಗಳಿಗೆ ನೀರು ಸಿಕ್ಕಿದೆ. ಬಿಟ್ಟರೆ ಎಲ್ಲೆಡೆ ಬರಗಾಲ ಸ್ಥಿತಿಯೇ ಇದೆ. ಇನ್ನೂ 31 ದಿನಗಳಲ್ಲಿ ಸಾಮಾನ್ಯ ಮಳೆಯಾಗಿದ್ದರೆ, ಕೇವಲ 12 ದಿನಗಳಲ್ಲಿ ಮಾತ್ರ ಸಾಮಾನ್ಯಕ್ಕಿಂತ ಅಧಿಕ ಮಳೆ ಬಿದ್ದಿದೆ ಎಂದು ತಿಳಿಸಿದೆ. ಅಂದರೆ ಮುಂಗಾರಿನ ನಾಲ್ಕು ತಿಂಗಳಲ್ಲಿ (122 ದಿನ) ಶೇ.65ರಷ್ಟು ದಿನಗಳು ಒಣಗಿದ/ಮಳೆ ಬಾರದ ದಿನಗಳಾಗಿವೆ. ಇದರಿಂದ ಕೃಷಿಗೆ, ಅಂತರ್ಜಲಕ್ಕೆ ಪೆಟ್ಟು ಬಿದ್ದಂತಾಗಿದೆ. ಅಪಾರ ಬೆಳೆ ಹಾನಿ ನಷ್ಟವಾಗಿದ್ದು, ರೈತರು ಆರ್ಥಿಕವಾಗಿ ಮುಗ್ಗರಿಸಿದ್ದಾರೆ. ಸರ್ಕಾರ ಪರಿಹಾರ ಕ್ರಮ ಕೈಗೊಳ್ಳುತ್ತಿದೆ.

ಬೆಳೆಗಳು ಒಣಗುವುದೇಕೆ?

ಕೃಷಿಗೆ ಪ್ರಮುಖವಾಗಿ ಬೇಕಾದ ನೀರು ಮುಂಗಾರು ಮಳೆಯಿಂದ ಸಿಗುತ್ತದೆ. 10 ದಿನಕ್ಕೂ ಹೆಚ್ಚಾಗಿ ಒಣ ಹವಾಮಾನ ಮುಂದುವರಿದರೆ ಯಾವುದೇ ಬೆಳೆಗಳಾಗಲಿ ಬಾಡುತ್ತವೆ. ಮಳೆ ಕೊರತೆ ಬೆಳೆಗಳ ಬೆಳವಣಿಗೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 122 ದಿನಗಳಲ್ಲಿ ಕನಿಷ್ಠ ಏನಿಲ್ಲವೆಂದರೆ 50 ರಿಂದ 52 ದಿನಗಳ ಕಾಲ ಉತ್ತಮ ಮಳೆ ಆಗಬೇಕಿರುವುದು ಅವಶ್ಯಕವಾಗಿದೆ ಎಂದು ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಹವಾಮಾನ ತಜ್ಞರೊಬ್ಬರು ತಿಳಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಬೆಳೆ ನಷ್ಟದ ಪ್ರಮಾಣವು ರಾಜ್ಯದಲ್ಲಿ 46,323 ಕೋಟಿ ರೂಪಾಯಿ ತಲುಪಿದೆ. ಇದರಲ್ಲಿ ಕೇವಲ ಕೃಷಿ ಬೆಳೆಗಳು ಮಾತ್ರವಲ್ಲದೆ, ತೋಟಗಾರಿಕೆ ಮತ್ತು ಸಾಂಬಾರ ಬೆಳೆಗಳೂ ಒಳಗೊಂಡಿವೆ.

ಕಡಿಮೆ ತಾಪಮಾನ ಮತ್ತು ಹೆಚ್ಚಿನ ವಾಯುಭಾರ

ಜೂನ್ ತಿಂಗಳಲ್ಲಿ ಅಷ್ಟಾಗಿ ಮಳೆ ಅಬ್ಬರಿಸದಿದ್ದರೂ ಜುಲೈ ತಿಂಗಳ ಮಧ್ಯ ಭಾಗಕ್ಕೆ ವಿವಿಧೆಡೆ ಹವಾಮಾನದಲ್ಲಿ ಬದಲಾವಣೆ ಆಯಿತು. ಇದರಿಂದ ವೈರಪೀತ್ಯಗಳು ಸೃಷ್ಟಿಯಾಯಿತು. ಆಗ ಒಂದಷ್ಟು ಕಡೆಗಳಲ್ಲಿ ಉತ್ತಮ ಮಳ ಆಯಿತು. ನಂರ ಕರ್ನಾಟಕದ ದಕ್ಷಿಣ ಮತ್ತು ಉತ್ತರ ಒಳನಾಡು ಭಾಗಗಳಲ್ಲಿ ಮಳೆ ದುರ್ಬಲಗೊಂಡಿತು. ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಸಕ್ರಿಯವಾಗಿತ್ತಾದರೂ ಸಹಿತ ಅಲ್ಲಿಯೂ ಮಳೆ ಕೊರತೆ ಉಂಟಾಗಿದೆ.

ಕರ್ನಾಟಕದಲ್ಲಿ ಮುಂಗಾರು ಮಳೆಯು ವಿವಿಧ ಮಾದರಿಗಳಲ್ಲಿ ಆಗುತ್ತದೆ. ಬೆಳೆ ವಿಮೆ ಯೋಜನೆಯಲ್ಲಿ ಸರ್ಕಾರವು ಮಳೆಯ ಹಂಚಿಕೆ ಗಮನಿಸಬೇಕು. ಇದರಲ್ಲಿನ ಅಂಶಗಳನ್ನು ಪರಿಗಣಿಸಿದಾಗ ಮಾತ್ರ ಮಳೆ ಕೊರತೆಗೆ ಬೆಳೆ ಹಾನಿ ಆದಾಗ ಸೂಕ್ತ ಪರಿಹಾರ ಲೆಕ್ಕಾಚಾರಕ್ಕೆ ಸಹಕಾರಿಯಾಗುತ್ತದೆ. ರಾಜ್ಯದಲ್ಲಿ 2026ರ ಮುಂಗಾರಿನ ನಿರೀಕ್ಷಿತ (ವಾಡಿಕೆ) 852 ಮಿ.ಮೀ. ಆಗಬೇಕಿದ್ದು, ಆದರೆ ಕೇವಲ 551 ಮಿ.ಮೀ. ಸುರಿದು, ಶೇ.35 ರಷ್ಟು ಮಳೆಯ ಕೊರತೆ ಉಂಟಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+