ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕರ್ನಾಟಕದಲ್ಲಿ ಅಧಿಕ ಕೊರೊನಾ ಪಾಸಿಟಿವ್ ಕೇಸ್ ದಾಖಲು, ಬೆಂಗಳೂರಲ್ಲಿ 266 ಕೇಸ್ ಸಕ್ರಿಯ

|
Google Oneindia Kannada News

ಬೆಂಗಳೂರು, ಜನವರಿ 06: ಭಾರತದ ರಾಜ್ಯಗಳ ಪೈಕಿ ಕಳೆದ ಎರಡು ವಾರಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿ ಕಂಡು ಬಂದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ಇದು ನಾಡಿನ ಜನರಲ್ಲಿ ಆತಂಕ ಮೂಡಲು ಕಾರಣವಾಗಿದೆ.

ಕರ್ನಾಟಕ ಕಳೆದ ವಾರ ಡಿಸೆಂಬರ್ 26 ರಿಂದ ಜನವರಿ 1ರವರೆಗೆ 276 ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಆಗಿವೆ. ಅದರ ಹಿಂದಿನ ವಾರ ಅಂದರೆ ಡಿಸೆಂಬರ್ 19 ರಿಂದ ಡಿ.25 ರ ನಡುವಿನ ಅವಧಿಯಲ್ಲಿ 116 ಪ್ರಕರಣಗಳು ದಾಖಲಾಗಿದ್ದವು. ಸದ್ಯ ಜನವರಿ 4 ವರೆಗಿನ ಅಂಕಿ ಅಂಶಗಳ ಗಮನಿಸಿದರೆ ಕರ್ನಾಟಕದಲ್ಲಿ 309 ಸಕ್ರಿಯ ಪ್ರಕರಣಗಳಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೋವಿಡ್ ಸೋಂಕು ಪುರುಷರಲ್ಲಿ ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು: ಏಮ್ಸ್ ಅಧ್ಯಯನಕೋವಿಡ್ ಸೋಂಕು ಪುರುಷರಲ್ಲಿ ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು: ಏಮ್ಸ್ ಅಧ್ಯಯನ

ಕರ್ನಾಟಕದಲ್ಲಿ ಅತ್ಯಧಿಕ ಸೋಂಕಿನ ಪ್ರಕರಣಗಳ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ವರದಿಯಾಗಿವೆ. 266 ಸಕ್ರಿಯ ಪ್ರಕರಣ ಹೊಂದಿರುವ ಬೆಂಗಳೂರು ರಾಜ್ಯದ ಕೇಂದ್ರ ಬಿಂದುವಾಗಿದೆ. ದೇಶದ ಮಹಾನಗರಗಳಲ್ಲೇ ಬೆಂಗಳೂರಿನಲ್ಲಿ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ.

Karnataka has recorded 309 active cases and Bengaluru has 266

ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಮುಂಬೈ ಎರಡೂ ಮಹಾನಗರಗಳು ಜನವರಿ 3ರವರೆಗೆ ತಲಾ 32 ಸಕ್ರಿಯ ಪ್ರಕರಣಗಳನ್ನಷ್ಟೇ ಹೊಂದಿವೆ. ನಂತರ ಚೆನ್ನೈ ನಗರದಲ್ಲಿ ಕೇವಲ 27 ಸಕ್ರಿಯ ಪ್ರಕರಣಗಳು ಇವೆ. ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣವು ಡಿಸೆಂಬರ್ 25 ರಂದು ಶೇ.2.2 ರಷ್ಟು ಇತ್ತು. ಅದು ಜನವರಿ 3ರ ಹೊತ್ತಿಗೆ ಶೇ.0.3ರಷ್ಟಕ್ಕೆ ಇಳಿಕೆ ಆಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ನಿತ್ಯ 5,000 ಕೋವಿಡ್ ಪರೀಕ್ಷೆ

ನಗರದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಆಗಿದ್ದರೂ ಸಹ ಆತಂಕ ಪಡುವ ಅಗತ್ಯವಿಲ್ಲ. ಸದ್ಯ ದಿನಕ್ಕೆ ಬಿಬಿಎಂಪಿಯು 5,000 ಕೋವಿಡ್ ಪರೀಕ್ಷೆ ಮಾಡುತ್ತಿದೆ. ಇಷ್ಟು ಪ್ರಮಾಣದ ಪರೀಕ್ಷೆಗೆ ಹೋಲಿಕೆ ಮಾಡಿದರೆ ಪಾಸಿಟಿವ್ ಪ್ರಕರಣಗಳ ಕಂಡು ಬರುತ್ತಿರುವ ಪ್ರಮಾಣವು ಸಾಮಾನ್ಯ ಸಂಗತಿಯಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ತ್ರಿಲೋಕ್ ಚಂದ್ರ ಹೇಳಿದ್ದಾರೆ.

Karnataka has recorded 309 active cases and Bengaluru has 266

ಆರೊಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಡಿಸೆಂಬರ್ 27ರಿಂದ ಜನವರಿ 2 ರವರೆಗೆ 12,397 ಪರೀಕ್ಷೆಗಳನ್ನು ಮಾಡಲಾಗಿದೆ. ಡಿಸೆಂಬರ್ 20 ರಿಂದ 26 ರವರೆಗೆ 3,353 ಮತ್ತು ಡಿಸೆಂಬರ್ 13 ರಿಂದ 19 ರವರೆಗೆ 3,223 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಹೇಳಿದೆ.

English summary
Karnataka has recorded 309 active cases and Bengaluru has 266
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X