ಉಪ ಚುನಾವಣೆ ಫಲಿತಾಂಶ: ಯಾರಿಗೆ ಲಾಭ? ಯಾರಿಗೆ ನಷ್ಟ?

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 13:ಹಿರಿಯ ರಾಜಕಾರಣಿ ಶ್ರೀನಿವಾಸ ಪ್ರಸಾದ್ ಅವರಿಗೆ ಅಸ್ತಿತ್ವ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮುಂದಿನ ರಣತಂತ್ರಕ್ಕೆ ನಾಂದಿ, ಯಡಿಯೂರಪ್ಪಅವರ ಪ್ರತಿಷ್ಠೆ, ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ಸಿನ ನಿಷ್ಠೆಗೆ ಉಪ ಚುನಾವಣೆ ಫಲಿತಾಂಶ ಉತ್ತರ ನೀಡಲಿದೆ. ಚುನಾವಣೆ ಫಲಿತಾಂಶದಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಒಂದು ವಿಶ್ಲೇಷಣೆ ಇಲ್ಲಿದೆ...

ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ಕದನ ನೇರವಾಗಿ ಕರ್ನಾಟಕದ ಪ್ರಮುಖ ರಾಜಕಾರಣಿಗಳಾದ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇರ ಹಣಾಹಣಿಯಾಗಿದ್ದು, ಇಬ್ಬರ ಪ್ರತಿಷ್ಠೆಯ ಕಣವಾಗಿದೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ LIVE]

ಫಲಿತಾಂಶ ಏನೇ ಬಂದರೂ 2018ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ಫಲಿತಾಂಶದ ಆಧಾರದ ಮೇಲೆ ಹಳೆ ಮೈಸೂರು ಹಾಗೂ ಕರ್ನಾಟಕ ಕೆಲ ಕ್ಷೇತ್ರಗಳ ಬಗ್ಗೆ ರಣತಂತ್ರವನ್ನು ಪುನರ್ ರೂಪಿಸಬೇಕಾಗುತ್ತದೆ.

ಸದ್ಯದ ಟ್ರೆಂಡ್ ನಂತೆ 1-1 ನಂತೆ, ಗುಪ್ತಚರ ವರದಿಯಲ್ಲಿ ಬಿಜೆಪಿಗೆ ನಂಜನಗೂಡು ಹಾಗೂ ಕಾಂಗ್ರೆಸ್ಸಿಗೆ ಗುಂಡ್ಲುಪೇಟೆ ಸಿಗಲಿದೆ ಎನ್ನಲಾಗಿತ್ತು. ಆದರೆ, ಅಂತಿಮ ನಿರ್ಧಾರ ಜನರ ಕೈಯಲ್ಲಿದೆ. ಕಾದುನೋಡೋಣ.. ಸದ್ಯಕ್ಕೆ ಫಲಿತಾಂಶದ ನಂತರ ಪರಿಣಾಮಗಳ ಬಗ್ಗೆ ಮುಂದೆ ಓದಿ...

ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ

ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ

* ಸಿಎಂ ಸಿದ್ದರಾಮಯ್ಯ ಅವರಿಗೆ ಆನೆಬಲ ಬಂದಂತೆ ಆಗುತ್ತದೆ. ಪಕ್ಷದಲ್ಲೂ ಅವರ ಮಾತಿಗೆ ಇನ್ನಷ್ಟು ಬೆಲೆ ಸಿಗುತ್ತದೆ.
* ಉಳಿದ ಒಂದೂವರೆ ವರ್ಷದಲ್ಲಿ ಸಂಪುಟ ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷರ ನೇಮಕ, ಕೊನೆಗೆ ಟಿಕೆಟ್ ಹಂಚಿಕೆಯಲ್ಲೂ ಅವರ ಮಾತಿಗೆ ಹೈಕಮಾಂಡ್ ತಲೆದೂಗಲಿದೆ.
* ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಒಲವಿದೆ, ಆಡಳಿತ ವಿರೋಧಿ ಅಲೆ ಇಲ್ಲ ಎಂಬ ಸಂದೇಶ ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.
* ಅಹಿಂದ, ದಲಿತ, ಮುಸ್ಲಿಂ ಮತಗಳು ಈಗಲೂ ಕಾಂಗ್ರೆಸ್ ಪರ ಇರುವ ಮುನ್ಸೂಚನೆ ಸಿಗಲಿದೆ. ಇದರಿಂದ ಮುಂದಿನ ಚುನಾವಣೆಯ ಜಾತಿ ಲೆಕ್ಕಾಚಾರ, ರಣತಂತ್ರಕ್ಕೆ ಅನುಕೂಲಕರ.

ಕಾಂಗ್ರೆಸ್ ಸೋತರೆ

ಕಾಂಗ್ರೆಸ್ ಸೋತರೆ

* ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನತೆ ತಿರುಗಿ ಬಿದ್ದಿದ್ದಾರೆ ಎಂಬ ಸೂಚನೆ ನೀಡುತ್ತದೆ.
* ಅಹಿಂದ, ಲಿಂಗಾಯತಮತಗಳಲ್ಲದೆ, ಪ್ರಜ್ಞಾವಂತ ಮತದಾರರ ತಿರಸ್ಕಾರ, ಸಿದ್ದರಾಮಯ್ಯ ಸರ್ಕಾರ ಭಾರಿ ಹೊಡೆತ ನೀಡಲಿದೆ.
* ಸಿದ್ದರಾಮಯ್ಯ ಅವರ ಮಾತಿಗೆ ಬೆಲೆ ಇಲ್ಲದ್ದಂತಾಗುತ್ತದೆ.ಮುಂದಿನ ಚುನಾವಣೆಗೆ ನಾಯಕತ್ವ ಬದಲಾಗಬಹುದು.
* ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಂಪುಟ ಪುನಾರಚನೆ ಎಲ್ಲದರ ಮೇಲೆ ಸಿದ್ದು ಹಿಡಿತ ತಪ್ಪುತ್ತದೆ.
* ಕಾಂಗ್ರೆಸ್​ ತೊರೆಯುವವರ ಸಂಖ್ಯೆ ಹೆಚ್ಚಳ, ಪಕ್ಷದಲ್ಲಿ ಭಿನ್ನಮತ ಹೆಚ್ಚಾಗಬಹುದು.

ಬಿಜೆಪಿ ಸೋತರೆ

ಬಿಜೆಪಿ ಸೋತರೆ

* ಬಿಎಸ್ ಯಡಿಯೂರಪ್ಪರನ್ನು ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಿಸುವುದು ಕಷ್ಟವಾಗಲಿದೆ.
* ಶೋಭಾ ಕರಂದ್ಲಾಜೆ ಹಾಗೂ ಬಿಎಸ್ ವೈ ವಿರುದ್ಧ ಭಿನ್ನಮತ ಮತ್ತೆ ಭುಗಿಲೇಳಲಿದೆ.
* ಯಡಿಯೂರಪ್ಪ ವಿರೋಧಿಗಳು ಹೈಕಮಾಂಡ್ ಬಾಗಿಲು ತಟ್ಟಲಿದ್ದಾರೆ.
* ಮುಂದಿನ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮೇಲೆ ಯಡಿಯೂರಪ್ಪ ಹಿಡಿತ ತಪ್ಪುತ್ತದೆ.
* ದಲಿತರು, ಲಿಂಗಾಯತರು ಯಡಿಯೂರಪ್ಪ ಅವರ ಬೆಂಬಲಕ್ಕೆ ಇಲ್ಲ ಎಂಬುದು ಸಾಬೀತಾಗುತ್ತದೆ.
* ಮೋದಿ ಅಲೆ ರಾಜ್ಯದಲ್ಲಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆ.
* ಎಸ್ಸೆಂ ಕೃಷ್ಣ ನಂತರ ಬಿಜೆಪಿಗೆ ಹೆಚ್ಚು ಮಂದಿ ಸೇರುತ್ತಾರೆ ಎಂಬ ನಿರೀಕ್ಷೆ ಟುಸ್ ಆಗಲಿದೆ.

ಸಮಬಲ ಸಾಧಿಸಿದರೆ

ಸಮಬಲ ಸಾಧಿಸಿದರೆ

*ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಇಬ್ಬರ ಪ್ರತಿಷ್ಠೆಯ ಕದನ ಮುಂದಿನ ಚುನಾವಣೆಗೆ ಶಿಫ್ಟ್ ಆಗಲಿದೆ.
* ಮತಗಳ ಅಂತರ, ಶೇಕಡಾವಾರು ಮತಗಳ ಗಣನೆ ಮುಂದಿನ ಕದನಕ್ಕೆ ದಿಕ್ಸೂಚಿಯಾಗಲಿದೆ.
*ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಕಷ್ಟ ಎಂಬ ಅಭಿಪ್ರಾಯವನ್ನು ಕಾಣಬಹುದು. ಕಾಂಗ್ರೆಸ್​ಗೆ ಒಂದು ಸ್ಥಾನ ನಷ್ಟ, ಬಿಜೆಪಿಗೆ ಒಂದು ಸ್ಥಾನ ಲಾಭ. ಶ್ರೀನಿವಾಸ್ ಪ್ರಸಾದ್ ಗೆದ್ದರೆ ಸಿದ್ದರಾಮಯ್ಯಗೆ ಕೊಂಚ ಹಿನ್ನಡೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gundlupet, Nanjangud By Poll results 2017 will be out today. What will the after effects of the results on upcoming assembly election and senior leaders Siddaramaiah and BS Yeddyurappa.
Please Wait while comments are loading...