ಗೃಹಲಕ್ಷ್ಮೀ ಯೋಜನೆ ಮೊತ್ತ 1,000 ರೂಪಾಯಿಗೆ ಇಳಿಕೆ ಮಾಡಲು... Gruha Lakshmi
ಕರ್ನಾಟಕದ ಗೃಹಲಕ್ಷ್ಮೀ ಯೋಜನೆ ಭಾರತದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದ್ದು, ಈ ಯೋಜನೆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹೊಸ ಶಕ್ತಿ & ಹುಮ್ಮಸ್ಸು ಕೂಡ ಬಂದಂತೆ ಆಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಕೂಡ ಗೃಹಲಕ್ಷ್ಮೀ ಯೋಜನೆ ಕಾಂಗ್ರೆಸ್ ಪಕ್ಷದ ಕೈಹಿಡಿಯುವ ನಿರೀಕ್ಷೆ ಮೂಡಿದೆ. ಹೀಗಿದ್ದಾಗಲೇ, ಗೃಹಲಕ್ಷ್ಮೀ ಯೋಜನೆಯ ಮೊತ್ತ 1,000 ರೂಪಾಯಿಗೆ ಇಳಿಕೆ ಮಾಡಲು...
ಕಾಂಗ್ರೆಸ್ ಪಕ್ಷ 2023ರ ವಿಧಾನಸಭೆ ಚುನಾವಣೆ ಸಮಯದಲ್ಲಿ ನೀಡಿದ್ದ 5 ಗ್ಯಾರಂಟಿ ಯೋಜನೆ ಪೈಕಿ 'ಗೃಹಲಕ್ಷ್ಮೀ ಯೋಜನೆ' ಕೂಡ ಒಂದಾಗಿತ್ತು. ಪ್ರತಿ ತಿಂಗಳು ಮನೆಯ ಯಜಮಾನಿಗೆ ಈ ಯೋಜನೆ ಮೂಲಕ 2,000 ರೂಪಾಯಿ ಕೊಡುವ ಯೋಜನೆ ಇದಾಗಿತ್ತು. ಅಲ್ಲದೆ ಇದೇ ಯೋಜನೆ ಬಗ್ಗೆ ಬಿಜೆಪಿ & ಕಾಂಗ್ರೆಸ್ ನಡುವೆ ದೊಡ್ಡ ಫೈಟಿಂಗ್ ಕೂಡ ನಡೆಯುತ್ತಿದೆ. ಈ ಯೋಜನೆ ನಿಲ್ಲುತ್ತದೆ ಅಂತಾ, ಬಿಜೆಪಿ ನಾಯಕರು ಆರೋಪ ಮಾಡುವಾಗಲೇ ಮತ್ತೊಂದು ಸ್ಫೋಟಕ ಸುದ್ದಿ ಹರಿದಾಡುತ್ತಿದೆ!

ಗೃಹಲಕ್ಷ್ಮೀ ಹಣ 1,000 ರೂಪಾಯಿಗೆ...
ಗೃಹಿಣಿಯರ ಪಾಲಿಗೆ ಗೃಹಲಕ್ಷ್ಮೀ ಯೋಜನೆ ವರವಾಗಿದೆ. ಗೃಹಲಕ್ಷ್ಮೀ ಹಣದಲ್ಲಿ ಬೋರ್‌ವೆಲ್ ತೋಡಿಸಿದ್ದು, ಗೃಹಲಕ್ಷ್ಮೀ ಹಣ ಬಳಸಿ ಶಾಲೆ ಮಕ್ಕಳಿಗೆ ಸಹಾಯ ಮಾಡಿದ್ದು ಹೀಗೆ ಗೃಹಲಕ್ಷ್ಮೀ ಹಣ ಬಳಸಿ ಸಾಕಷ್ಟು ಉತ್ತಮ ಕೆಲಸ ಮಾಡಿದ ಉದಾಹರಣೆ ಕರ್ನಾಟಕದಲ್ಲಿ ಕಾಣಬಹುದು. ಕರ್ನಾಟಕದ ಯೋಜನೆ ಜಾಗತಿಕವಾಗೂ ಸದ್ದು ಮಾಡುತ್ತಿದ್ದು, ಗೃಹಲಕ್ಷ್ಮೀ ಯೋಜನೆಯಿಂದ ಕರ್ನಾಟಕ ದಿವಾಳಿ ಆಗಲಿದೆ ಅಂತಾ ವಿರೋಧ ಪಕ್ಷಗಳ ನಾಯಕರು ಆರೋಪ ಮಾಡುತ್ತಿದ್ದರೆ. ಹೀಗಿದ್ದಾಗಲೇ, ಗೃಹಲಕ್ಷ್ಮೀ ಯೋಜನೆ ಮೊತ್ತ 1,000 ರೂಪಾಯಿಗೆ ಇಳಿಕೆ ಮಾಡಲು...
ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ?
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಸಿಕ್ಕಾಪಟ್ಟೆ ಜನ ಮನ್ನಣೆ ಸಿಕ್ಕು, ಗಮನ ಸೆಳೆಯುತ್ತಿವೆ. ಹೌದು, ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ನಂತರ ಅಭಿವೃದ್ಧಿಗೆ ಹಣ ಇಲ್ಲ ಎಂಬ ಆರೋಪ ಮಾಡಲಾಗುತ್ತಿದೆ. ಹೀಗೆ ವಿರೋಧ ಪಕ್ಷಗಳ ನಾಯಕರು ಅಭಿವೃದ್ಧಿಗೆ ಹಣವೇ ಇಲ್ಲ, ಹೀಗಾಗಿ ಕಾಂಗ್ರೆಸ್ ಸರ್ಕಾರವೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಿದೆ ಎಂದು ಆರೋಪ ಮಾಡುತ್ತಿದ್ದಾರೆ.
ಹೀಗಿದ್ದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಈಗ ಹಬ್ಬಿದ್ದು, ಗೃಹಲಕ್ಷ್ಮೀ ಯೋಜನೆ ಮೊತ್ತ 1,000 ರೂಪಾಯಿಗೆ ಇಳಿಕೆ ಮಾಡಲು ಚಿಂತನೆ ನಡೆದಿದೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ಈವರೆಗೂ ಕರ್ನಾಟಕ ಸರ್ಕಾರವೇ ಆಗಲಿ ಅಥವಾ ಅಧಿಕಾರಿಗಳೇ ಆಗಲಿ ಈ ಕುರಿತಾಗಿ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಈ ಸುದ್ದಿ ಸುಳ್ಳು ಎಂಬ ಮಾತು ಕೂಡ ಕೇಳಿಬಂದಿದೆ. ಆದರೆ ಇಂತಹ ಸುದ್ದಿಗಳು ಹಬ್ಬುತ್ತಿರುವ ಕಾರಣ ಫಲಾನುಭವಿಗಳೂ ಚಿಂತೆ ಮಾಡುವಂತೆ ಆಗಿದೆ!












Click it and Unblock the Notifications