ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Karnataka Gram Panchayat Election Results 2020 Live : ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ

|
Google Oneindia Kannada News

ಬೆಂಗಳೂರು, ಡಿಸೆಂಬರ್ 30: ಕರ್ನಾಟಕದ 5,728 ಗ್ರಾಮ ಪಂಚಾಯಿತಿಗಳಿಗೆ ಒಟ್ಟು 2 ಹಂತದಲ್ಲಿ ಮತದಾನ ನಡೆದಿತ್ತು. ಚುನಾವಣೆಯ ಮತ ಎಣಿಕೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಬುಧವಾರ ನಡೆದಿದೆ.

ಒಟ್ಟು 82,616 ಸ್ಥಾನಗಳಿಗೆ ಡಿಸೆಂಬರ್ 22 ಮತ್ತು 27ರಂದು ಮತದಾನ ನಡೆದಿತ್ತು. ಮತ ಎಣಿಕೆ ಕಾರ್ಯ ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿತ್ತು. ತಡ ರಾತ್ರಿ ತನಕ ಮತ ಎಣಿಕೆ ನಡೆದಿದೆ. ಬೀದರ್ ಜಿಲ್ಲೆಯಲ್ಲಿ ಮಾತ್ರ ಇವಿಎಂ ಬಳಕೆ ಮಾಡಲಾಗಿದ್ದು, ಉಳಿದ ಜಿಲ್ಲೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗಿತ್ತು. ಆದ್ದರಿಂದ, ಫಲಿತಾಂಶ ವಿಳಂಬವಾಯಿತು.

ಮೊದಲ ಹಂತದಲ್ಲಿ ಒಟ್ಟು 117 ತಾಲೂಕುಗಳ 3019 ಗ್ರಾಮ ಪಂಚಾಯಿತಿಗಳ 43,238 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 1,17,383 ಅಭ್ಯರ್ಥಿಗಳು ಕಣದಲ್ಲಿದ್ದರು. ಎರಡನೇ ಹಂತದಲ್ಲಿ 109 ತಾಲೂಕುಗಳ 2,709 ಗ್ರಾಮ ಪಂಚಾಯಿತಿಗಳ 39,378 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 1,05,431 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

Karnataka Gram Panchayat Election Results 2020 Live Updates and Highlights

ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆಯ ಮಾಹಿತಿ, ಚಿತ್ರ, ವಿಡಿಯೋಗಳು ಇಲ್ಲಿವೆ....

Newest FirstOldest First
6:48 PM, 31 Dec

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದ್ದು, ಇದು ನಮ್ಮ ಸರ್ಕಾರದ ಜನಪರ, ಅಭಿವೃದ್ಧಿ ಪರ ಹಾಗೂ ರೈತರ ಪರವಾಗಿ ತೆಗೆದುಕೊಂಡ ನಿರ್ಧಾರಗಳಿಗೆ ಸಿಕ್ಕ ಜಯವಾಗಿದೆ: ಅರುಣಕುಮಾರ ಪೂಜಾರ. ಶಾಸಕರು, ರಾಣೇಬೆನ್ನೂರು
4:12 PM, 31 Dec

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೊದಲ ಬಾರಿಗೆ ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಹೊಸ ಇತಿಹಾಸ ಬರೆದಿದೆ. ಜಿಲ್ಲೆಯಲ್ಲಿ ಶೂನ್ಯದಿಂದ ಬಿಜೆಪಿ ಇಂದು 4 ತಾಲೂಕುಗಳಲ್ಲಿ 234ಕ್ಕೂ ಹೆಚ್ಚು ಕಡೆ ಗೆಲುವು ಸಂಪಾದಿಸಿದೆ. ಇದಕ್ಕೆ ಕಾರಣೀಕರ್ತರಾದ ಎಲ್ಲಾ ನಾಯಕರಿಗೂ, ಕಾರ್ಯಕರ್ತರಿಗೂ ಅಭಿನಂದನೆಗಳು ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಟ್ವೀಟ್ ಮಾಡಿದ್ದಾರೆ.
3:18 PM, 31 Dec

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಂಚಾಯಿತಿ ಚುನಾವಣೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇನ್ನೂ ಹಲವು ಜಿಲ್ಲೆಗಳಲ್ಲಿ ಮತ ಎಣಿಕೆ ಕಾರ್ಯ ಪೂರ್ಣಗೊಂಡು ಫಲಿತಾಂಶ ಹೊರಬಂದಿಲ್ಲ, ಮೀಸಲಾತಿ ಅಡಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಹಂಚಿಕೆಯಾಗಿಲ್ಲ, ಆಗಲೇ ಯಡಿಯೂರಪ್ಪ ಅವರು ನಮ್ಮ ಪಕ್ಷ 3800ಕ್ಕೂ ಅಧಿಕ ಪಂಚಾಯತಿಗಳಲ್ಲಿ ಗೆದ್ದಿದೆ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.
2:42 PM, 31 Dec

ಶೇ 60ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
1:42 PM, 31 Dec

ಹಾಸನ ಜಿಲ್ಲೆಯಲ್ಲಿ ಒಟ್ಟು 8 ತಾಲೂಕು ಕೇಂದ್ರಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕಾ ಕಾರ್ಯವು ಶಾಂತಿಯುತವಾಗಿ ನಡೆದಿದೆ. ಒಟ್ಟು 245 ಪಂಚಾಯಿಗಳ ಗಳ 3,351 ಸ್ಥಾನಗಳಲ್ಲಿ 35 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದೇ ಬಾಕಿ ಉಳಿದಿತ್ತು, 376 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು
1:34 PM, 31 Dec

ಐದು ಬಾರಿ ಗ್ರಾಮ ಪಂಚಾಯತಿಗೆ ಸದಸ್ಯರಾಗಿ ಆಯ್ಕೆಯಾಗಿ ಆರನೇ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದ ಅಂಕೋಲಾ ತಾಲೂಕಿನ ಮಂಜುಗುಣಿ ಗ್ರಾಮದ ವೃದ್ಧೆ ಲೀಲಾವತಿ ನಾಯ್ಕ ಸೋಲು ಕಂಡಿದ್ದಾರೆ. 'ಲೋಕಲ್ ಎಂಎಲ್ಎ' ಎಂದೇ ಇವರು ಖ್ಯಾತಿಗಳಿಸಿದ್ದರು
1:16 PM, 31 Dec

ಮೈಸೂರಿನ ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಭಿಕ್ಷುಕ ಅಂಕನಾಯ್ಕ ಬೊಕ್ಕಹಳ್ಳಿಯಲ್ಲಿ ಸೋಲು ಕಂಡಿದ್ದಾರೆ. 311 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
12:53 PM, 31 Dec

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ ಹಾಲಿ ಸದಸ್ಯೆ ಸೋಲು ಕಂಡಿದ್ದಾರೆ. ಸುಳೇಬಾವಿ ಪಂಚಾಯಿತಿ ಚುನಾವಣೆಯಲ್ಲಿ ಲಕ್ಷ್ಮೀ ಪಾರ್ವತಿ ಸೋತಿದ್ದಾರೆ. ಸುಳೇಭಾವಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಹಾಲಿ ಸದಸ್ಯೆಯಾದ ಇವರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಂದ ಸೋಲನುಭವಿಸಿದ್ದಾರೆ. ಲಕ್ಷ್ಮೀ ಪಾರ್ವತಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿಸಿಕೊಂಡಿದ್ದರು. ಈ ಸೋಲಿನಿಂದಾಗಿ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಅವರಿಗೆ ಸಹ ಮುಖಭಂಗವಾಗಿದೆ.
12:20 PM, 31 Dec

ಪಂಚಾಯಿತಿ ಫಲಿತಾಂಶದ ಬಗ್ಗೆ ಕುಮಾರಸ್ವಾಮಿ ಟ್ವೀಟ್
12:01 PM, 31 Dec

ಪಂಚಾಯಿತಿ ಚುನಾವಣೆ ಬಗ್ಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಟ್ವೀಟ್
11:59 AM, 31 Dec

ಕಲಬುರಗಿ ಜಿಲ್ಲೆಯಲ್ಲಿ ಚುನಾವಣೆ ನಡೆದ 242 ಗ್ರಾಮ ಪಂಚಾಯಿತಿಗಳ ಎಲ್ಲಾ 1427 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದೆ. 4173 ಸದಸ್ಯರು ಆಯ್ಕೆಗೊಂಡಿದ್ದಾರೆ. ಮತ ಎಣಿಕೆ ಪ್ರಕ್ರಿಯೆ ಬುಧವಾರ ತಡರಾತ್ರಿ ವರೆಗೂ ನಡೆಯಿತು.
7:14 AM, 31 Dec

ಹಾವೇರಿ: ಜಿಲ್ಲೆಯ 209 ಗ್ರಾಮ ಪಂಚಾಯಿತಿಗಳ ಪೈಕಿ ಇದುವರೆಗೆ 160 ಗ್ರಾಮ ಪಂಚಾಯಿತಿಗಳ ಫಲಿತಾಂಶ ಮಾತ್ರ ಪ್ರಕಟಗೊಂಡಿದೆ. ಅಂದರೆ ಶೇ.76ರಷ್ಟು ಫಲಿತಾಂಶ ಇದುವರೆಗೆ ಘೋಷಣೆಯಾಗಿದೆ.
Advertisement
9:35 PM, 30 Dec

ಮೈಸೂರು ಜಿಲ್ಲೆಯಲ್ಲಿ ಗ್ರಾ.ಪಂ. ಚುನಾವಣೆ ಮತ ಎಣಿಕೆ ಬಹುತೇಕ ಮುಕ್ತಾಯ. ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಮೇಲುಗೈ. ಮೈಸೂರು ಜಿಲ್ಲಾದ್ಯಂತ ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದಿರುವ ಕಾಂಗ್ರೆಸ್‌ ಬೆಂಬಲಿತ ಸದಸ್ಯರು. ಬಹುತೇಕ ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಅಧಿಕಾರಕ್ಕೇರುವ ಸಾಧ್ಯತೆ. ಕಾಂಗ್ರೆಸ್ ಬೆಂಬಲಿತ ಸದಸ್ಯರು -1289, ಜೆಡಿಎಸ್ ಬೆಂಬಲಿತ ಸದಸ್ಯರು-1034, ಬಿಜೆಪಿ ಬೆಂಬಲಿತ ಸದಸ್ಯರು - 610, ಇತರೆ ಸದಸ್ಯರು - 279
8:52 PM, 30 Dec

ದೇವರಿಗೆ ಹರಕೆ ಹೊತ್ತು ಚಪ್ಪಲಿ ಬಿಟ್ಟು ಬರಿಗಾಲಿನಲ್ಲಿ ಓಡಾಡಿದ ನವೀನ್ ಹಾವಳಿ ಗೆಲುವು. ಸ್ನೇಹಿತರಿದ್ದರೂ ಒಬ್ಬಂಟಿಯಾಗಿ ಮತಯಾಚನೆ ಮಾಡಿದ್ದ ನವೀನ್. ಚಪ್ಪಲಿಯ ಗುರುತನ್ನೇ ಆಯ್ಕೆ ಮಾಡಿಕೊಂಡಿದ್ದ ನವೀನ್. ಚುನಾವಣೆ ನಿಲ್ಲುವ ಮುನ್ನವೇ ಚಪ್ಪಲಿ ಹಾಕೋದನ್ನು ನಿಲ್ಲಿಸಿದ್ದ ನವೀನ್ ಹಾವಳಿ. ಚಿಕ್ಕಮಗಳೂರು ಜಿಲ್ಲೆಯ ನಿಡುವಾಳೆ ಗ್ರಾ.ಪಂ ಯಿಂದ ಕಣಕ್ಕಿಳಿದಿದ್ದನು. ಕರಪತ್ರ ಹೊರತು ಪಡಿಸಿ ಬೇರೆ ಯಾವುದೇ ಖರ್ಚು ಮಾಡದ ನವೀನ್ ಹಾವಳಿ ಗೆಲುವು.
8:39 PM, 30 Dec

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಅವರ ರಾಜಕೀಯ ಗುರುವೊಬ್ಬರು ಸತತ 9ನೇ ಬಾರಿಗೆ ಗ್ರಾಮ ಪಂಚಾಯಿತಿಗೆ ಎಂಟ್ರಿ ನೀಡಿದ್ದಾರೆ. ಯಲ್ಲಾಪುರ ತಾಲ್ಲೂಕಿನ ಇಡಗುಂದಿ ಗ್ರಾ.ಪಂ. ಗುಳ್ಳಾಪುರ ವಾರ್ಡ್ ನ ಅಭ್ಯರ್ಥಿಯಾಗಿದ್ದ ಶ್ರೀಕಾಂತ ಶೆಟ್ಟಿ ಸತತ 9 ನೇ ಬಾರಿಗೆ ಆಯ್ಕೆಯಾಗುವ ಮೂಲಕ ಗ್ರಾ.ಪಂಚಾಯತ್ ಗೆ ಎಂಟ್ರಿ ನೀಡಿದ್ದಾರೆ.
8:18 PM, 30 Dec

ಬೆಳಿಗ್ಗೆಯೇ ಮತ ಎಣಿಕಾ ಕೇಂದ್ರಕ್ಕೆ ತೆರಳಿದ್ದ ಮಹಿಳಾ ಅಭ್ಯರ್ಥಿಯೋರ್ವಳು ಊಟ ನೀರು ಇಲ್ಲದೆ ಅಸ್ವಸ್ತಗೊಂಡಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಕೊನೆಗೂ ಆಕೆ ಹಳಕೋಟ ವಾರ್ಡ್ ನಿಂದ ಗೆಲುವಿನ ನಗೆ ಬೀರಿದ್ದಾಳೆ.
7:18 PM, 30 Dec

ಟಾಸ್ ಮೂಲಕ ಜಯ ಗಳಿಸಿದ ಅಭ್ಯರ್ಥಿ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ವಡಗನಹಳ್ಳಿಯ ಅಭ್ಯರ್ಥಿ ಲೋಕೇಶ್ ಜಯ. ತಲಾ 157 ಮತ ಪಡೆದುಕೊಂಡಿದ್ದ ಸುಬ್ರಮಣಿ ಹಾಗೂ ಲೋಕೇಶ್. ಚುನಾವಣಾಧಿಕಾರಿ ಟಾಸ್ ಹಾಕಿದಾಗ ಲೋಕೇಶ್ ಜಯಭೇರಿ. ದೊಡ್ಡ ಶಿವಾರ ಗ್ರಾಮ ಪಂಚಾಯತಿಗೆ ಸೇರಿರುವ ವಡಗನಹಳ್ಳಿ.
7:15 PM, 30 Dec

ಕೋಲಾರ ಮತ ಎಣಿಕೆ ಕೇಂದ್ರದಲ್ಲಿ ಗೊಂದಲ, ಅಭ್ಯರ್ಥಿಯನ್ನೇ ಹೊರಗಡೆ ತಳ್ಳಿದ ಪೊಲೀಸರು. ಕೋಲಾರ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ. ಸುಗಟೂರು ಗ್ರಾಮ ಪಂಚಾಯತಿಯ ಮತ ಎಣಿಕೆ ಕೇಂದ್ರದಲ್ಲಿ ಫಲಿತಾಂಶ ಕುರಿತು ಗೊಂದಲ. ಗೆದ್ದ ಮಂಜುನಾಥ್, ವಿಶ್ವನಾಥ್ ಎಂಬುವವರನ್ನು ಎಣಿಕೆ ಕೇಂದ್ರದಿಂದ ಪೊಲೀಸರು ಹೊರಕ್ಕೆ ತಳ್ಳಿದ್ದಾರೆ. ಇದರಿಂದ ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
6:40 PM, 30 Dec

ಕಾರವಾರ ತಾಲ್ಲೂಕು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯರಾದ ಶ್ಯಾಮನಾಥ ನಾಯ್ಕ ಕದ್ರಾ ಪಂಚಾಯತಿ ಬಾಳೆಮನೆ ಕ್ಷೇತ್ರದಲ್ಲಿ, ಪ್ರಭಾ (ಮೋಹಿನಿ ನಮಸೇಕರ) ಮಡಗಾಂವಕರ ಗೋಟೆಗಾಳಿ ಪಂಚಾಯತ ಬೈರಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
6:04 PM, 30 Dec

ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕರನ್ನು ಸೋಲಿಸುವ ಮೂಲಕ ದಂಪತಿಗಳಿಬ್ಬರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಕಾರವಾರ ತಾಲ್ಲೂಕಿನ ಚಿತ್ತಾಕುಲ ಗ್ರಾಮ ಪಂಚಾಯತಿಯ ಕಿಲ್ಲೆ ವಾರ್ಡ್ ನಿಂದ ಸ್ಪರ್ಧಿಸಿದ್ದ ಸೂರಜ್ ದೇಸಾಯಿ 109 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಚಿತ್ತಾಕುಲ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಾಜು ತಾಂಡೇಲ್ ವಿರುದ್ಧ ಸ್ಪರ್ಧಿಸಿದ್ದ ಅವರು, 440 ಮತಗಳನ್ನು ಪಡೆದಿದ್ದು, ರಾಜು ತಾಂಡೇಲ್ 331 ಮತಗಳನ್ನು ಪಡೆದುಕೊಂಡಿದ್ದಾರೆ.
6:02 PM, 30 Dec

ಕೊಡಗು ಜಿಲ್ಲೆಯ ಹಾಕತ್ತೂರು ಪಂಚಾಯತಿ ವ್ಯಾಪ್ತಿಯ ಬಿಳಿಗೇರಿ-2 ರಿಂದ ಸ್ಪರ್ಧಿಸಿದ್ದ ಪತಿ-ಪತ್ನಿ ಗೆಲುವು ದಾಖಲಿಸಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಬ್ದುಲ್ ಖಾದರ್, ಬಿಜೆಪಿ ಬೆಂಬಲಿತ ದರ್ಶನ ಅವರನ್ನು ಪರಾಭವಗೊಳಿಸಿದ್ದಾರೆ. ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಾಕೀರ 220 ಮತ ಪಡೆದು, ಎದುರಾಳಿ ಜಯಂತಿ ಅವರನ್ನು ಸೋಲಿಸಿದ್ದಾರೆ. ಪತಿ‌ ಅಬ್ದುಲ್ ಖಾದರ್ 2ನೇ ಬಾರಿ ಗೆಲುವು ಪಡೆದರೆ, ಪತ್ನಿ ಸಾಕೀರ ಮೊದಲ ಬಾರಿ ಜಯಶಾಲಿಯಾಗಿದ್ದಾರೆ.
5:56 PM, 30 Dec

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಗುಡಗೂರು ಗ್ರಾ.ಪಂ ವ್ಯಾಪ್ತಿಯ ಮೈದೂರು ಕ್ಷೇತ್ರದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೂರಕ್ಕೆ ಮೂರು ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವು. ಅಶೋಕ್ ಸಾವುಕಾರ, ಬಸಮ್ಮ ಜ್ಯೋತಿ ಹಾಗೂ ಗುಡ್ಡಪ್ಪ ಕರೂರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು.
5:14 PM, 30 Dec

ಗ್ರಾಮ ಪಂಚಾಯತ್‌ ಚುನಾವಣೆಯ ಕೆ.ಆರ್‌.ನಗರ ತಾಲ್ಲೂಕಿನ ಸಾಲಿಗ್ರಾಮದ 7ನೇ ಬ್ಲಾಕ್‌ನಿಂದ ಸ್ಪರ್ಧಿಸಿದ್ದ ತೃತೀಯಲಿಂಗಿ ದೇವಿಕಾ ಅವರು ಗೆಲುವು ಸಾಧಿಸಿದ್ದಾರೆ. ಮೈಸೂರಿನ ಕೆ.ಆರ್.ನಗರ ತಾಲ್ಲೂಕು ಸಾಲಿಗ್ರಾಮದ 7ನೇ ವಾರ್ಡ್‌ನಲ್ಲಿ ಎಸ್ಸಿ ಮಹಿಳಾ ಮೀಸಲು ಕ್ಷೇತ್ರದಿಂದ ಮಂಗಳಮುಖಿ ದೇವಿಕಾ ಸ್ಪರ್ದಿಸಿದ್ದರು. ದೇವಿಕಾ ಕೇವಲ ಐದು ಮತಗಳಿಂದ ಗೆದ್ದಿದ್ದಾರೆ.
5:03 PM, 30 Dec

ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಸಹೋದರಿ ಶಕುಂತಲಾ ಭೀಮಾನಾಯ್ಕ್ 509 ಮತಗಳನ್ನು ಪಡೆದು ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಪಂಚಾಯಿತಿ 3ನೇ ವಾರ್ಡ್‌ನಿಂದ ಗೆಲುವು ಸಾಧಿಸಿದ್ದಾರೆ.
4:57 PM, 30 Dec

ಮತದಾರರ ವಿಶ್ವಾಸವನ್ನು ಗೆಲ್ಲಲಾಗದ ಬಿಜೆಪಿ ಹಲವಾರು ಕಡೆಗಳಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಸೆ-ಆಮಿಷ ಮತ್ತು ಬೆದರಿಕೆ ಮೂಲಕ ಸೆಳೆಯುವ ಪ್ರಯತ್ನ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಇಂತಹ ಕೃತ್ಯಗಳು ಖಂಡನೀಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
4:56 PM, 30 Dec

ಪಂಚಾಯಿತಿ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್
4:51 PM, 30 Dec

ಹಾವೇರಿ ಜಿಲ್ಲೆಯ ಹಂಸಭಾವಿ ಗ್ರಾಮ ಪಂಚಾಯಿತಿಯ 20 ಸ್ಥಾನಗಳ ಪೈಕಿ ಪತಿ ಮತ್ತು ಪತ್ನಿ ಇಬ್ಬರೂ ಗೆಲುವು ಸಾಧಿಸಿದ್ದಾರೆ. ಮುತ್ತಯ್ಯ ಹಿರೇಮಠ 4ನೇ ವಾರ್ಡ್‌ನಿಂದ, ಸುಮಂಗಲಾ ಹಿರೇಮಠ 3ನೇ ವಾರ್ಡ್‌ನಿಂದ ಅಭ್ಯರ್ಥಿಯಾಗಿದ್ದರು.
4:46 PM, 30 Dec

ಇಬ್ಬರೂ ಅಭ್ಯರ್ಥಿಗಳು ಸಮಬಲದ ಮತ ಪಡೆದಿದ್ದರಿಂದ ಲಾಟರಿ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಹುಣಸೂರು ತಾಲೂಕಿನಲ್ಲಿ ಚಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಇಬ್ಬರೂ ಆಭ್ಯರ್ಥಿಗಳು 100 ಮತ ಪಡೆದಿದ್ದರು. ಅಂತಿಮವಾಗಿ ಲಾಟರಿ ಮೂಲಕ ಲಕ್ಷ್ಮೀ ಗೆಲುವು ಕಂಡರು.
4:31 PM, 30 Dec

ಗಿರಿಜನ ಅಭ್ಯರ್ಥಿಯೊಬ್ಬರು ಮೊದಲ ಬಾರಿಗೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರನ್ನೇ ಸೋಲಿಸಿದ್ದಾರೆ. ಹುಣಸೂರು ತಾಲೂಕಿನ ಹರಳಹಳ್ಳಿ ಕ್ಷೇತ್ರದಲ್ಲಿ ಮಾಜಿ ಅಧ್ಯಕ್ಷ ರಾಜ ನಾಯ್ಕ ಗಿರಿಜನ ಅಭ್ಯರ್ಥಿ ಅಣ್ಣಯ್ಯ ವಿರುದ್ಧ ಸ್ಪರ್ಧಿಸಿದ್ದರು.
4:30 PM, 30 Dec

ಬ್ಯಾಡಗಿ ತಾಲೂಕಿನ ಹಳೇ ಶಿಡೇನೂರು ಗ್ರಾಮ ಪಂಚಾಯಿತಿ ಮತಪೆಟ್ಟಿಗೆಯಲ್ಲಿ ಮತ ಪತ್ರದ ಜೊತೆ ಹಣ ಪತ್ತೆಯಾಗಿದೆ. ಎರಡು ಮತಪತ್ರದಲ್ಲಿ ನೋಟುಗಳು ಪತ್ತೆಯಾಗಿದ್ದು, ಅಧಿಕಾರಿಗಳು ಮತವನ್ನು ತಿರಸ್ಕರಿಸಿದ್ದಾರೆ.
READ MORE

English summary
Karnataka Gram Panchayat Polls Results 2020 Live Updates in Kannada: Check out the breaking news, images, videos and highlights. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X