ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಮಂಡ್ಯಕ್ಕೆ ಹೊಸ ಎಸ್ಪಿ
ಬೆಂಗಳೂರು, ಅಕ್ಟೋಬರ್ 30; ಕರ್ನಾಟಕ ಸರ್ಕಾರ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮಂಡ್ಯ, ಉತ್ತರ ಕನ್ನಡ, ಕಲಬುರಗಿ, ಗದಗಕ್ಕೆ ಹೊಸ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇಮಕವಾಗಿದೆ.
ಶನಿವಾರ ಕರ್ನಾಟಕ ಸರ್ಕಾರ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮಂಡ್ಯ ಎಸ್‌ಪಿಯಾಗಿ ಯತೀಶ್ ಎನ್. ನೇಮಕ ಮಾಡಲಾಗಿದೆ. ಮಂಡ್ಯ ಎಸ್‌ಪಿ ನೇಮಕ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎನ್. ಯತೀಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಂಡ್ಯ ಎಸ್‌ಪಿಯಾಗಿ ನೇಮಕ ಮಾಡಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳು
* ಬೆಂಗಳೂರಿನ ಕಮಾಂಡ್ ಸೆಂಟರ್ ಡೆಪ್ಯೂಟಿ ಕಮೀಷನರ್ ಆಗಿದ್ದ ಇಶಾ ಪಂತ್ ವರ್ಗಾವಣೆಗೊಂಡಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಕಲಬುರಗಿ ಎಸ್ಪಿಯಾಗಿ ನೇಮಕ ಮಾಡಲಾಗಿದೆ.
* ಮಂಡ್ಯ ಎಸ್ಪಿಯಾಗಿದ್ದ ಡಾ. ಸುಮನ್ ಡಿ. ಪನ್ನೇಕರ್ ವರ್ಗಾವಣೆಗೊಂಡಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಉತ್ತರ ಕನ್ನಡ ಎಸ್ಪಿಯಾಗಿ ಅವರನ್ನು ವರ್ಗಾವಣೆ ಮಾಡಲಾಗಿದೆ.
* ಉತ್ತರ ಕನ್ನಡ ಎಸ್ಪಿಯಾಗಿದ್ದ ಶಿವ ಪ್ರಕಾಶ್ ದೇವರಾಜು ವರ್ಗಾವಣೆಗೊಂಡಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಗದಗ ಎಸ್ಪಿಯಾಗಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
* ಕಲಬುರಗಿ ಎಸ್ಪಿಯಾಗಿದ್ದ ಸಿಮಿ ಮರಿಯಮ್ ಜಾರ್ಜ್ ವರ್ಗಾಗೊಂಡಿದ್ದಾರೆ. ಮೈಸೂರಿನಲ್ಲಿ ಕರ್ನಾಟಕ ಪೊಲೀಸ್ ಅಕಾಡಮೆ ನಿರ್ದೇಶಕರಾಗಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
* ಗದಗ ಎಸ್ಪಿಯಾಗಿದ್ದ ಯತೀಶ್ ಎನ್. ವರ್ಗಾವಣೆಗೊಂಡಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಮಂಡ್ಯ ಎಸ್‌ಪಿಯಾಗಿ ನೇಮಕ ಮಾಡಲಾಗಿದೆ.












Click it and Unblock the Notifications