ಐಟಿ-ಬಿಟಿ ಇಲಾಖೆಯಲ್ಲಿ ಶೇ 80ರಷ್ಟು ಉದ್ಯೋಗ ಕಡಿತ

SR Patil
ಬೆಂಗಳೂರು, ನ.8 : ಉದ್ಯಮದಲ್ಲಿ ನಷ್ಟ ಉಂಟಾಗುತ್ತಿದೆ ಎಂದು ಖಾಸಗಿ ಕಂಪನಿಗಳು ಉದ್ಯೋಗ ಕಡಿತಗೊಳಿಸುವುದನ್ನು ಕೇಳಿದ್ದೇವೆ. ಸದ್ಯ ಕರ್ನಾಟಕ ಸರ್ಕಾರ ಐಟಿ-ಬಿಟಿ ಇಲಾಖೆಯಲ್ಲಿನ ಶೇ 80 ರಷ್ಟು ಉದ್ಯೋಗಳನ್ನು ಕಡಿತಗೊಳಿಸಲು ಮುಂದಾಗಿದೆ. ಹಣಕಾಸು ಇಲಾಖೆಯ ಸೂಚನೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅ.17ರಂದು ಹಣಕಾಸು ಅಧಿಸೂಚನೆ ಹೊರಡಿಸಿರುವ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಖಾಲಿ ಇರುವ 68 ಹುದ್ದೆಗಳನ್ನು ಕಡಿತಗೊಳಿಸುವಂತೆ ಆದೇಶ ನೀಡಿದೆ. ಇದರಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದು ಸರ್ಕಾರಿ ಉದ್ಯೋಗ ಪಡೆಯುವ ಉತ್ಸಾಹದಲ್ಲಿದ್ದ ವಿದ್ಯಾರ್ಥಿಗಳಿಗೆ ತೀವ್ರ ನಿರಾಸೆ ಉಂಟಾಗಿದೆ.

ಕಡಿತಗೊಳಿಸುವ ಉದ್ಯೋಗಗಳಲ್ಲಿ ಎರಡು ಹಿರಿಯ ಪ್ರೋಗ್ರಾಮರ್, ಎಂಟು ಸಿಸ್ಟಮ್ ಅನಲಿಸ್ಟ್, 37 ಕಿರಿಯ ಪ್ರೋಗ್ರಾಮರ್ ಸೇರಿದಂತೆ 21 ಹುದ್ದೆಗಳೂ ಸೇರಿವೆ. ಹಣಕಾಸು ಇಲಾಖೆ ಈ ಹುದ್ದೆಗಳಿಗಾಗಿ ಅನುಮತಿ ನೀಡಿಲ್ಲ. ಆದ್ದರಿಂದ ಅವುಗಳನ್ನು ಕಡಿತಗೊಳಿಸಲು ಐಟಿ-ಬಿಟಿ ಇಲಾಖೆ ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಐಟಿ-ಬಿಟಿ ಸಚಿವ ಎಸ್.ಆರ್.ಪಾಟೀಲ್, ಅಧಿಸೂಚನೆ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲ. ಪ್ರತಿ ಇಲಾಖೆಯಲ್ಲಿನ ಹುದ್ದೆಗೆ ಹಣಕಾಸು ಇಲಾಖೆಯ ಅನುಮತಿ ಬೇಕಾಗುತ್ತದೆ. ಯಾವುದೇ ಇಲಾಖೆಯಲ್ಲಿನ ಹುದ್ದೆಗಳ ಬಗ್ಗೆ ಹಣಕಾಸು ಇಲಾಖೆ ಆಕ್ಷೇಪ ವ್ಯಕ್ತಪಡಿಸಿದರೆ, ಅದನ್ನು ಕಡಿತಗೊಳಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಐಟಿ-ಬಿಟಿ ಇಲಾಖೆಯ ಶೇ 80ರಷ್ಟು ಹುದ್ದೆಗಳನ್ನು ಕಡಿಗೊಳಿಸಿದರೆ ಇಲಾಖೆಯ ಕಾರ್ಯವೈಖರಿಗೆ ತೊಂದರೆ ಯಾಗಲಿದೆ. ಆದ್ದರಿಂದ ಹಣಕಾಸು ಇಲಾಖೆ ತನ್ನ ನಿರ್ಧಾರವನ್ನು ಪುನಃ ಪರಿಶೀಲಿಸಬೇಕು ಎಂಬ ಮಾತು ಹೇಳಿಬಂದಿದೆ. ಹಣಕಾಸು ಇಲಾಖೆ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಸರ್ಕಾರವ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿದೆ.

ಈ ಸಮಿತಿಯ ಅಂತಿಮ ವರದಿಯ ನಂತರ ಸರ್ಕಾರ ಇಲಾಖೆಯಲ್ಲಿನ ಹುದ್ದೆಗಳನ್ನು ಕಡಿತಗೊಳಿಸುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಹಣಕಾಸು ಇಲಾಖೆ ತನ್ನ ನಿರ್ಧಾರ ಹಿಂಪಡೆದು ಸರ್ಕಾರಿ ನೌಕರಿ ಪಡೆಯಲು ಕಸಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+