Pension: 5-6 ತಿಂಗಳಿಂದ ಪಿಂಚಣಿಯೇ ಬಂದಿಲ್ಲ: ವಿಶೇಷಚೇತನರ ಮಾಶಾಸನ ₹5,000ಕ್ಕೆ ಹೆಚ್ಚಿಸಲು ಆಗ್ರಹ

ರಾಮನಗರ: ಕರ್ನಾಟಕ ರಾಜ್ಯ ಸರ್ಕಾರ ಆಡಳಿತ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಅವರು ಮತ್ತೆ ಕಿಡಿ ಕಾರಿದ್ದಾರೆ. 'ಈ ಹೃದಯಹೀನ ಸರ್ಕಾರ ವಿಶೇಷಚೇತನರ ಅಹವಾಲುಗಳನ್ನು ಕೇಳಿಲ್ಲ. ಕೂಡಲೇ ವಿಶೇಷಚೇತನರ ಮಾಸಾಶನವನ್ನು 5,000 ರೂ. ಏರಿಕೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

ರಾಮನಗರದಲ್ಲಿ ವಿಶೇಷಚೇತನರ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ವಿಶೇಷಚೇತನರಿಂದ ದೊಡ್ಡಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ನೀವು ಮಾಡುತ್ತಿರುವ ಧರಣಿಗೆ ಪ್ರತಿಕ್ರಿಯೆಯಾಗಿ ಜಿಲ್ಲಾಧಿಕಾರಿ ನನ್ನೊಂದಿಗೆ ಮಾತಾಡಿದ್ದಾರೆ. ನೀತಿ ಸಂಹಿತೆ ಇರುವುದರಿಂದ ಬರಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

Karnataka Govt

ಬಿಜೆಪಿ ಅವಧಿಯಲ್ಲಿ ಹೆಚ್ಚಾಗಿದ್ದೆಷ್ಟು?

ಬಿಜೆಪಿ ಅವಧಿಯಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ 700 ರೂ. ಇದ್ದ ಮಾಸಾಶನವನ್ನು 1,400 ರೂ. ಮಾಡಿದ್ದೆ. ಆಸಿಡ್‌ ದಾಳಿಗೊಳಗಾದ ಹೆಣ್ಣುಮಕ್ಕಳಿಗೆ ಮಾಸಿಕ 3,000 ರೂ. ಅನ್ನು 10,000 ರೂ. ಮಾಡಿದ್ದೆ. ಈ ಮೂಲಕ ಅವರಿಗೆ ಔಷಧಿಗೆ ಸಹಾಯವಾಗಿತ್ತು. ಈಗ ವಿಶೇಷಚೇತನರ ಮಾಸಾಶನವನ್ನು 5,000 ರೂ. ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ದೆಹಲಿಯಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆದಾಗ ಅಲ್ಲಿನ ಬಿಜೆಪಿ ಸಿಎಂ 5,000 ರೂ.ಗೆ ಏರಿಕೆ ಮಾಡಿದ್ದಾರೆ. ಆಂಧ್ರ ಪ್ರದೇಶದಲ್ಲಿ 3,000 ರೂ. ಆಗಿದೆ ಎಂದು ವಿವರಿಸಿದರು.

ಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮಾಸಾಶನವನ್ನು 5,000 ರೂ. ಗೆ ಏರಿಕೆ ಮಾಡಬೇಕಿತ್ತು. ಆದರೆ ಇದು ಹೃದಯ ಇಲ್ಲದ ಬಂಡೆ ಸರ್ಕಾರವಾಗಿದೆ. ರಾಮನಗರ ಅವರದ್ದೇ ಜಿಲ್ಲೆಯಾಗಿದ್ದು, ವಿಶೇಷಚೇತನರನ್ನು ಭೇಟಿಯಾಗಿ ಮಾತಾಡಬೇಕಿತ್ತು. ಎಷ್ಟು ಏರಿಸುತ್ತೇವೆಂದಾದರೂ ಭರವಸೆ ನೀಡಬೇಕಿತ್ತು. ಐದಾರು ತಿಂಗಳಿಂದ ಯಾರಿಗೂ ಪಿಂಚಣಿಗಳು ಬರುತ್ತಿಲ್ಲ. ಇದನ್ನು ಪ್ರಶ್ನೆ ಮಾಡಿದರೆ ಬಯೋಮೆಟ್ರಿಕ್‌, ಸರ್ವೆ ಎಂದೆಲ್ಲ ನೆಪ ಹೇಳುತ್ತಾರೆ. ಸ್ವಾತಂತ್ರ್ಯ ಬಂದಾಗಿಂದಲೂ ಸರ್ವೆ ನಡೆಯುತ್ತಲೇ ಇದ್ದು, ಅದರಲ್ಲಿ ವಿಶೇಷವೇನೂ ಇಲ್ಲ. ಆರ್ಥಿಕ ಇಲಾಖೆ ಪಾಪರ್‌ ಆಗಿದೆ ಎಂದು ತಿಳಿವಳಿಕೆ ಪತ್ರ ನೀಡಲಾಗಿದೆ. ಹಣ ಇಲ್ಲದೆ, ನಾವು ಪಾಪರ್‌ ಆಗಿದ್ದೇವೆ, ನೀವೇ ಡೊನೇಶನ್‌ ಕೊಡಿ ಎಂದು ಬೇಡಿಕೊಳ್ಳಲಿ ಎಂದು ಟೀಕಿಸಿದರು.

ಅಧಿಕಾರಿಗಳು ಕೈಯಿಂದ ಹಣ ಹಾಕಬೇಕಾ?

ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡರು ರಸ್ತೆಗೆ ಜಲ್ಲಿ ಹಾಕಿ ಎಂದು ಅಧಿಕಾರಿಗಳ ಬಳಿ ಕೈ ಮುಗಿಯವ ಸ್ಥಿತಿ ಬಂದಿದೆ. ನಾಯಿಯನ್ನು ಬಾಲ ಅಲ್ಲಾಡಿಸುವಂತೆ ಈ ಸರ್ಕಾರದ ಪರಿಸ್ಥಿತಿಯಾಗಿದೆ. ಒಬ್ಬ ಸಚಿವ ಎಂಜಿನಿಯರ್‌ ಬಳಿ ಮನವಿ ಮಾಡುತ್ತಾರೆಂದರೆ, ಕೈಯಿಂದ ಹಣ ಹಾಕಿ ರಸ್ತೆ ಮಾಡಿ ಎಂದರ್ಥ. ಒಬ್ಬ ಸಚಿವರು ಬಂದು ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಗ್ಯಾರಂಟಿಗಳಿಂದಾಗಿ ಯಾರಿಗೂ ಹಣ ಕೊಡಲು ಆಗುತ್ತಿಲ್ಲ ಎಂದಿದ್ದಾರೆ. ಸಚಿವ ಬಸವರಾಜ ರಾಯರೆಡ್ಡಿ ಅವರು ಗ್ಯಾರಂಟಿ ಬೇಕೋ ರಸ್ತೆ ಬೇಕೋ ಎಂದು ಪ್ರಶ್ನಿಸಿದರು.

ಬಿಜೆಪಿ ಅವಧಿಯಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ ಪೌರಕಾರ್ಮಿಕರನ್ನು ಕಾಯಂ ಮಾಡುವ ಕೆಲಸವಾಗಿತ್ತು. ಇಂತಹ ಕೆಲಸವನ್ನು ಈಗಿನ ಸರ್ಕಾರ ಮಾಡಬೇಕು. ಈಗಿನ ಕಾಲದ ದರಕ್ಕೆ ತಕ್ಕಂತೆ ಪಿಂಚಣಿ ಏರಿಸಬೇಕಿದೆ. ಪ್ರತಿ ವರ್ಷ ಪಿಂಚಣಿಗಳಿಗೆ 10,000 ಕೋಟಿ ರೂ. ಮೀಸಲಿಡಲಾಗುತ್ತದೆ. ಅದನ್ನು ಹೆಚ್ಚಳ ಮಾಡುವುದು ಸರ್ಕಾರದ ಕರ್ತವ್ಯ. ಹಣವಿಲ್ಲ ಎಂಬ ಕಾರಣಕ್ಕೆ ಹೆಚ್ಚಳ ಮಾಡದೇ ಇರಲು ಸಾಧ್ಯವಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+