ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Water Bell : ಶಾಲೆಗಳಲ್ಲಿ ಮಕ್ಕಳಿಗೆ ನಿಯಮಿತ ನೀರು ಸೇವನೆಗಾಗಿ 3 ಬಾರಿ ಗಂಟೆ ಮೊಳಗಲಿದೆ

|
Google Oneindia Kannada News

ಬೆಂಗಳೂರು, ನವೆಂಬರ್ 11: ಮಕ್ಕಳಲ್ಲಿ ನೀರಿನ ಅಂಶದ ಕೊರತೆ ದೂರ ಮಾಡಲು ಹಾಗೂ ನಿಯಮಿತವಾಗಿ ವಿದ್ಯಾರ್ಥಿಗಳಿಗೆ ನೀರು ಕುಡಿಯುವಂತೆ ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಶಾಲೆಗಳಲ್ಲಿ ದಿನಕ್ಕೆ ಮೂರು ಬಾರಿ ನೀರಿನ ಗಂಟೆ ಬಾರಿಸಲು ಸೂಚಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯಾದ್ಯಂತ ಎಲ್ಲಾ ಮಂಡಳಿಗಳಿಗೆ ಸಂಯೋಜಿತವಾದ ಶಾಲೆಗಳಲ್ಲಿ ಈ ಹೊಸ ವ್ಯವಸ್ಥೆ ತರಲು ತೀರ್ಮಾನಿಸಿದೆ. ಈ ಪ್ರಯುಕ್ತ ಇಲಾಖೆ ಸಚಿವ ಬಿ.ಸಿ.ನಾಗೇಶ್ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಮಕ್ಕಳು ಶಾಲೆಗಳಲ್ಲಿ ಪಾಠ ಕೇಳುವಾಗಿ ಆಗಾಗ ಎದ್ದು ಹೋಗಿ ನೀರು ಕುಡಿಯುವುದು ತೀರಾ ಕಡಿಮೆ. ಆಟಕ್ಕೆ ಬಿಟ್ಟಾಗ, ಊಟದ ಸಮಯದಲ್ಲಿ ನೀರು ಕುಡಿಯುತ್ತಾರೆ. ವಿದ್ಯಾರ್ಥಿಗಳ ದೇಹದಲ್ಲಿ ನೀರಿನ ಕೊರತೆಯಿಂದ ನಿರ್ಜಲೀಕರಣ, ಹೊಟ್ಟೆ ನೋವು, ಒಣ ಗಂಟಲು ಮತ್ತು ತಲೆನೋವಿನಂಥ ಅನಾರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ. ಈ ಸಮಸ್ಯೆ ಮಕ್ಕಳಿಗೆ ಬರದಂತೆ ತಡೆಯಲು ಈ ಹೊಸ ವ್ಯವಸ್ಥೆ ತರಲು ಸರ್ಕಾರ ಸಜ್ಜಾಗಿದೆ. ಈ ಹೊಸ ವ್ಯವಸ್ಥೆಯಡಿ 'ರಾಜ್ಯದ ಶಾಲೆಗಳಲ್ಲಿ ಇನ್ನು ಮುಂದೆ ದಿನಕ್ಕೆ ಮೂರು ಬಾರಿ ನೀರಿನ ಗಂಟೆ ಬಾರಿಸಲಿದೆ.

Karnataka govt schools to ring Water Bell thrice a day, remind children to drink water

ನೆರೆಯ ಕೇರಳ ರಾಜ್ಯದ ಮಾದರಿಯಲ್ಲಿ ಕರ್ನಾಟಕದಲ್ಲಿ ಈ ವ್ಯವಸ್ಥೆ ಜಾರಿಗೆ ತರಲು ಅಂದಿನ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರ ಸಲಹೆಯನ್ನು ಅನುಸರಿಸಿ, 2019ರಲ್ಲಿ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರಿಚಯಿಸಿದ್ದರು. ಆದರೆ ಕೋವಿಡ್ ಹಿನ್ನೆಲೆ ಈ ಪರಿಕಲ್ಪನೆ ಅನುಷ್ಠಾನ ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ.

ಮೂರು ಗಂಟೆಯ ಸಮಯ ಏನು?

ಶಾಲೆಗಳಲ್ಲಿ ಬೆಳಗ್ಗೆ 10.35ಕ್ಕೆ ಮೊದಲ ಗಂಟೆ, ಎರಡನೆಯದ್ದು ಮಧ್ಯಾಹ್ನ 12ಕ್ಕೆ ಮತ್ತು ಮಧ್ಯಾಹ್ನ 2 ಗಂಟೆಗೆ ಮೂರನೇ ಗಂಟೆಗೆ ಬಾರಿಸಲು ವೇಳಾಪಟ್ಟಿ ಮಾಡಿಕೊಳ್ಳಲಾಗಿದೆ. ಸಚಿವ ಬಿ.ಸಿ.ನಾಗೇಶ್‌ ರಾಜ್ಯದ ಕೆಲ ಶಾಲೆಗಳಿಗೆ ಭೇಟಿ ನೀಡಿದ್ದ ವೇಳೆ ಶಿಕ್ಷಕರು ಮಕ್ಕಳಿಗೆ ನೀರು ಕುಡಿಯಲು ಬಿಡುತ್ತಿಲ್ಲ ಎಂದು ಪೋಷಕರು ಸಚಿವರಿಗೆ ತಿಳಿಸಿದ್ದರು. ಮಕ್ಕಳಿಗೆ ನೀರಿನ ಬಾಟಲಿಯಲ್ಲಿ ನೀರು ತುಂಬಿ ಕಳುಹಿಸಿದರೂ ಮರಳಿ ಮನೆಗೆ ಬಂದಾಗ ಅಷ್ಟೇ ಪ್ರಮಾಣ ನೀರು ಉಳಿದಿರುತ್ತವೆ ಎಂದು ಕೆಲವು ಪೋಷಕರು ಹೇಳಿದ್ದರು.

Karnataka govt schools to ring Water Bell thrice a day, remind children to drink water

ಶಾಲೆಯಲ್ಲಿ ಶಿಕ್ಷಕರು ನೀರು ಕುಡಿಯಲು ಬಿಡದಿರುವುದು, ಶಿಸ್ತು, ಇನ್ನಿತರ ಕಾರಣದಿಂದಾಗಿ ಮಕ್ಕಳ ದೇಹದಲ್ಲಿ ನೀರಿನ ಕೊರತೆ ಕಂಡು ಬರುತ್ತಿದೆ. ಅಲ್ಲದೇ ಬೇಸಿಗೆ ವೇಳೆ ಮಕ್ಕಳು ಆಟವಾಡಿ ಹೆಚ್ಚು ದಣಿಯುತ್ತಾರೆ. ಆಗ ಅವರಿಗೆ ಹೆಚ್ಚು ನೀರಿನ ಅಗತ್ಯವಿರುತ್ತದೆ. ಆದರೆ ನಿಯಮಿತವಾಗಿ ನೀರು ಕುಡಿಯುವಲ್ಲಿ ಗಮನ ಹರಿಸುವುದಿಲ್ಲ. ಇದು ಹೀಗೆ ಮುಂದುವರಿದರೆ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಹೊಸ ವ್ಯವಸ್ಥೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ.

English summary
Karnataka govt schools to ring Water Bell thrice a day, remind children to drink water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X