ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲಾ ಕಾಲೇಜಿನಲ್ಲಿ ರಾಷ್ಟ್ರಗೀತೆ ಕಡ್ಡಾಯ ಆದೇಶ, ಏಕೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 18: ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ರಾಜ್ಯದ ಸರ್ಕಾರಿ, ಅನುದಾನಿತ, ಅನುದಾನರಹಿತ ಖಾಸಗಿ ಶಾಲೆಗಳಲ್ಲಿಯು ಪ್ರತಿದಿನ ತಪ್ಪದೇ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ರಾಷ್ಟ್ರಾಭಿಮಾನವನ್ನು ಬೆಳೆಯುವಂತೆ ಮಾಡುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ರಾಜ್ಯ ಸರ್ಕಾರದ ಆದೇಶವೇನು?

ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಅನ್ವಯ ಸಂವಿಧಾನದಲ್ಲಿ ಹೇಳಿರುವ ನಾಗರೀಕ ಪ್ರಜ್ಞೆಯನ್ನು ಬೋಧಿಸುವುದು, ಸಂವಿಧಾನವನ್ನು ಅನುಸರಿಸುವುದು ಹಾಗೂ ಸಂವಿಧಾನದ ಆದರ್ಶಗಳನ್ನು ಮತ್ತು ಸಂವಿಧಾನ ಸಂಸ್ಥೆಗಳನ್ನು ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಗೌರವಿಸುವ ಸಂಸ್ಕೃತಿಯನ್ನು ಬೆಳೆಸುವ ದೃಷ್ಟಿಯಿಂದ ರಾಜ್ಯದ ಎಲ್ಲ ರಾಜ್ಯದ ಸರ್ಕಾರಿ, ಅನುದಾನಿತ, ಅನುದಾನರಹಿತ ಖಾಸಗಿ ಶಾಲೆಗಳಲ್ಲಿಯು ಹಾಗೂ ಪದವು ಪೂರ್ವ ಕಾಲೇಜುಗಳಲ್ಲಿಯೂ ಪ್ರತಿದಿನ ಮುಂಜಾನೆ ಸಾಮೂಹಿಕ ಪ್ರಾರ್ಥನೆಯ ವೇಳೆಯಲ್ಲಿ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆಯನ್ನು ಹಾಡಿಸುವುದನ್ನು ಕಡ್ಡಾಯಗೊಳಿಸಿ ಆದೇಶಿಸಲಾಗಿದೆ.

ರಾಜ್ಯ ರಾಜಕಾರಣದಿಂದ ಬಿಎಸ್‌ವೈ ದೂರವಿಡುವ ಪ್ರಯತ್ನ: ಕಾಂಗ್ರೆಸ್ ಟೀಕೆರಾಜ್ಯ ರಾಜಕಾರಣದಿಂದ ಬಿಎಸ್‌ವೈ ದೂರವಿಡುವ ಪ್ರಯತ್ನ: ಕಾಂಗ್ರೆಸ್ ಟೀಕೆ

ಕೇಂದ್ರ ಗೃಹ ಇಲಾಖೆ ಹೇಳಿರುವುದು ಏನು?

ಭಾರತದ ಗೃಹ ಇಲಾಖೆಯ ಆದೇಶ 2016ರ ಅನ್ವಯದಲ್ಲಿ ಶಾಲೆಗಳಲ್ಲಿ ಸಾಮೂಹಿಕ ಪ್ರಾರ್ಥನೆಯ ವೇಳೆಯಲ್ಲಿ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆಯನ್ನು ಹಾಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನವನ್ನು ಮತ್ತು ರಾಷ್ಟ್ರದ ಬಗ್ಗೆ ಗೌರವಭಾವವನ್ನು ಮೂಡಿಸಬೇಕಿದೆ ಎಂದು ಆದೇಶಿಸಿದೆ.

Karnataka govt order: National Anthem Mandatory in Schools and Colleges

ಚಿತ್ರಮಂದಿರದಲ್ಲೂ ರಾಷ್ಟ್ರಗೀತೆ ಕಡ್ಡಾಯ ಮಾಡಲಾಗಿತ್ತು

2016ರ ನವೆಂಬರ್ 30ರಂದು ಚಿತ್ರ ಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು. ಈ ವೇಳೆ ಎಲ್ಲರೂ ಎದ್ದು ನಿಲ್ಲಬೇಕು ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿತ್ತು. ನಂತರ ವಿಚಾರಣೆಯೊಂದರ ವೇಳೆ ದೇಶಪ್ರೇಮದ ಹೆಸರಿನಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡುವುದು ನೈತಿಕ ಪೊಲೀಸ್ ಗಿರಿ ಆಗುತ್ತದೆ. ಹಾಗಾಗಿ ತನ್ನ ಆದೇಶ ಮಾರ್ಪಾಡಿಗೆ ಸಿದ್ದವೆಂಬ ಸುಳಿವನ್ನು ಸುಪ್ರಿಂಕೋರ್ಟ್ ನೀಡಿತ್ತು. ಈ ಸಂಬಂಧ ಮಾರ್ಗದರ್ಶಿ ಸೂತ್ರ ರಚಿಸುವಂತೆಯೂ ಅದು ಕೇಂದ್ರಕ್ಕೆ ಸಲಹೆ ನೀಡಿತ್ತು.

Karnataka govt order: National Anthem Mandatory in Schools and Colleges

ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡಲಾಗಿತ್ತಿದೆ

"ರಾಜ್ಯ ಸರ್ಕಾರ ಹೊಸದಾಗಿ ಆದೇಶವನ್ನು ಮಾಡಿ ಶಾಲಾ- ಕಾಲೇಜುಗಳಲ್ಲಿ ರಾಷ್ಟ್ರಗೀತೆ ಹಾಡಿಸಬೇಕು ಎಂದಿದೆ. ಆದರೆ ಶಾಲೆಗಳಲ್ಲಿ ನಿತ್ಯ ಪ್ರಾರ್ಥನೆಯ ವೇಳೆಯಲ್ಲಿ ರಾಷ್ಟ್ರಗೀತೆಯನ್ನು ಸಾಮೂಹಿಕವಾಗಿ ಹಾಡಿಸಲಾಗುತ್ತದೆ. ಹೊಸ ಆದೇಶಕ್ಕೂ ಪೂರ್ವದಿಂದಲೂ ಜಾತಿ, ಧರ್ಮ ಬೇಧವಿಲ್ಲದೇ ರಾಷ್ಟ್ರಗೀತೆಯನ್ನು ಹಾಡಿಸಲಾಗುತ್ತಿದೆ" ಎಂದು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

English summary
Karnataka government has issued an order making singing of the National Anthem mandatory in schools and colleges. This order is issued with the aim of developing national pride by singing the National Anthem every day. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X