KIADB Scam: ಡಿಸಿಎಂ ಕ್ಷೇತ್ರದಲ್ಲಿ ಭೂ ಮಂಜೂರಾತಿಯಲ್ಲಿ ಸರ್ಕಾರ ಕೋಟಿ ಹಣ ಲೂಟಿ: ಬಿಜೆಪಿ ಆರೋಪ
ಬೆಂಗಳೂರು, ಡಿಸೆಂಬರ್ 12: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (KIADB) ಅಧಿಕಾರಿಗಳು ಭೂ ಮಂಜೂರಾತಿ ನೆಪದಲ್ಲಿ ಎರಡೆರಡು ಬಾರಿ ಖಾತೆಗೆ ಹಣ ಹಾಕಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಬಿಜೆಪಿ ಆರೋಪಿಸಿದೆ.
ಕರ್ನಾಟಕ ರಾಜ್ಯ ಕೈಗಾರಿಕೆ ಪ್ರದೇಶ ಮಂಡಳಿಯಿಂದ ಹಣ ಬಿಡುಗಡೆ ವಿಚಾರವಾಗಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಇದು ಎಟಿಎಂ ಸರ್ಕಾರ ಎಂದು ಜರಿದಿದೆ. ಕಲೆಕ್ಷನ್, ಕಮಿಷನ್ ದಂಧೆಯನ್ನು ಹುಟ್ಟು ಹಾಕಿರುವ ಕರ್ನಾಟಕ ಸರ್ಕಾರವು ಇದೀಗ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಹಣವನ್ನು ಲೂಟಿ ಮಾಡುತ್ತಿದೆ ಎಂದು ಆಪಾದಿಸಿದೆ.

ಕೆಐಎಡಿಬಿ ಉಪ ಮುಖ್ಯಮಂತ್ರಿ ಅವರ ಕ್ಷೇತ್ರದಲ್ಲಿ ಅಧಿಕಾರಿಗಳು ಭೂ ಮಂಜೂರಾತಿ ನೆಪದಲ್ಲಿ ಎರಡೆರಡು ಬಾರಿ ಖಾತೆಗೆ ಹಣ ಹಾಕಿ ಅವ್ಯವಹಾರ ನಡೆಸುತ್ತಿದ್ದಾರೆ. ಅಧಿಕಾರಿಗಳನ್ನು ಕೋಟಿ ಕೋಟಿ ಲೂಟಿ ಹೊಡೆಯಲು ಬಿಟ್ಟು, ಅವರಿಂದಲೂ ಕಲೆಕ್ಷನ್ ಪಡೆದು ಕ್ರಮ ಕೈಗೊಳ್ಳದೆ ಎಟಿಎಂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದೆ.
ಕಲೆಕ್ಷನ್, ಕಮಿಷನ್ ದಂಧೆಯನ್ನು ಹುಟ್ಟು ಹಾಕಿರುವ @INCKarnataka ಸರ್ಕಾರ ಇದೀಗ ಅಧಿಕಾರಿಗಳನ್ನು ಬಳಸಿಕೊಂಡು ಸರ್ಕಾರಿ ಹಣವನ್ನು ಲೂಟಿ ಮಾಡುತ್ತಿದೆ.
— BJP Karnataka (@BJP4Karnataka) December 12, 2023
ಉಪ ಮುಖ್ಯಮಂತ್ರಿ @DKShivakumar ಅವರ ಕ್ಷೇತ್ರದಲ್ಲಿ ಕೆಐಎಡಿಬಿ ಅಧಿಕಾರಿಗಳು ಭೂ ಮಂಜೂರಾತಿ ನೆಪದಲ್ಲಿ ಎರಡೆರಡು ಬಾರಿ ಖಾತೆಗೆ ಹಣ ಹಾಕಿ ಅವ್ಯವಹಾರ ನಡೆಸುತ್ತಿದ್ದಾರೆ.… pic.twitter.com/joApp5gU2e
ಕೆಐಎಡಿಬಿ ಯಡವಟ್ಟು
ಕೈಗಾರಿಕೆ ಅಭಿವೃದ್ಧಿ ಮಂಡಳಿ ಯಡವಟ್ಟಿನಿಂದಾಗಿ ಅಧಿಕಾರಿಗಳು ಎರಡೆರಡು ಬಾರಿ ಅಕ್ರಮವಾಗಿ ಭೂ ಮಂಜುರಾತಿಗೆ ಹಣ ಬಿಡುಗಡೆ ಮಾಡಿ ಕರ್ನಾಟಕ ಸರ್ಕಾರದ ಭೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟು ಉಂಟು ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹರಳೂರು ಗ್ರಾಮದ ಸರ್ವೇ ನಂಬರ್ 37ರ ಪೈಕಿ 37/ಬಿ5 ಎರಡು ಎಕರೆ 32 ಗುಂಟೆ ಎಕರೆ ಜಮೀನು ಪಡೆಯಲು ಸರ್ಕಾರಕ್ಕೆ ನಕಲಿ ದಾಖಲೆ ಸಲ್ಲಿಸಲಾಗಿತ್ತು. ಇದರ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ, ಭೂಮಾಲೀಕರು ಶಾಮೀಲಾಗಿದ್ದಾರೆ.

ಅಕ್ರಮವಾಗಿ ಹಣ ಬಿಡುಗಡೆ ಆರೋಪ
ಈ ಕಾರಣದಿಂದಲೇ ಭೂಮಿ ಮಂಜೂರಾತಿಗೆ ರಾತ್ರೋ ರಾತ್ರಿ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದು ದಾಖಲೆಗಳಲ್ಲಿ ಬಹಿರಂಗವಾಗಿದೆ. ಎರಡೆರಡು ಬಾರಿ ಅಕ್ರಮವಾಗಿ ಹಣ ಬಿಡುಗಡೆ ಮಾಡಲಾಗಿದೆ ಅಂತಲೂ ಆರೋಪ ಕೇಳಿ ಬಂದಿದೆ.
ಸದ್ಯ ಈ ವಿಚಾರ ಇಟ್ಟುಕೊಂಡು ಕರ್ನಾಟಕ ಬಿಜೆಪಿಯು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಎಟಿಎಂ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದು, ಕೋಟ್ಯಂತರ ಹಣ ಲೂಟಿ ಹೊಡೆದಿದೆ ಎಂದು ಆರೋಪಿಸಿದೆ.
ಯಾವುದೇ ರೀತಿಯ ಹಕ್ಕು ಇಲ್ಲದಿದ್ದರೂ ಸಹಿತ ಭೂಮಿ ಮಾಲೀಕರು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿಕೊಂಡು ಕೆಐಎಡಿಬಿ ಎರಡನೇ ಬಾರಿ ಭೂಮಿ ಮಂಜುರಾತಿಗೆ ಹಣ ಬಿಡಗಡೆ ಮಾಡಿದ್ದಾರೆ. ಈ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯ ಕೇಳಿ ಬಂದಿದೆ.












Click it and Unblock the Notifications