ಸಿದ್ದರಾಮಯ್ಯ ಸರ್ಕಾರಕ್ಕೆ ಶಾಪವಾಗಿ ಕಾಡಿದ ಅಂಶವೇನು?

Posted By:
Subscribe to Oneindia Kannada

ಬೆಂಗಳೂರು, ಸೆ. 13: ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಸುಪ್ರೀಂಕೋರ್ಟಿನಿಂದ ಪದೇ ಪದೇ ಅನ್ಯಾಯವಾಗುತ್ತಿದ್ದು, ತಮಿಳುನಾಡಿಗೆ ನೀರು ಬಿಡುವುದು ಅನಿವಾರ್ಯವಾಗಿದೆ. ಹೀಗಾಗಿ ಪರ್ಯಾಯ ಮಾರ್ಗ ಅನುಸರಿಸುವುದು ಕರ್ನಾಟಕಕ್ಕೆ ಇರುವ ಏಕೈಕ ಮಾರ್ಗ. ಮೋಡ ಬಿತ್ತನೆ ಕಾರ್ಯ ಕೈಗೊಳ್ಳದಿರುವುದು ಸಿದ್ದರಾಮಯ್ಯ ಸರ್ಕಾರಕ್ಕೆ ಶಾಪವಾಗಿ ಪರಿಣಮಿಸಿದೆ.

ಕಾವೇರಿ ನದಿ ಪಾತ್ರದಲ್ಲಿ ಮಳೆಗಾಗಿ ಉದ್ದೇಶಿತ ಮೋಡ ಬಿತ್ತನೆ ಕಾರ್ಯವನ್ನು ಸರ್ಕಾರ ಕೈಬಿಟ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೋಡ ಬಿತ್ತನೆಯಿಂದ ಮಳೆ ಬರುವ ಮುನ್ಸೂಚನೆಯೂ ಇಲ್ಲ. ಮತ್ತೆ ಮಳೆ ಬರಲು ನವೆಂಬರ್ ಡಿಸೆಂಬರ್ ತನಕ ಕಾಯಬೇಕು.[ತಮಿಳುನಾಡಿಗೆ ಹೇಮಾವತಿ ನದಿ ನೀರು ಬಿಡುಗಡೆ, ಜೆಡಿಎಸ್ ಪ್ರತಿಭಟನೆ]

ಆದರೆ ತಜ್ಞರು ಮೋಡ ಬಿತ್ತನೆಯಿಂದ ಯಾವುದೇ ಲಾಭವಿಲ್ಲ ಎಂದು ವರದಿ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ಕೈಬಿಟ್ಟಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಪರಿಶೀಲನಾ ಕೇಂದ್ರದ ನಿರ್ದೇಶಕ ಜಿಎಸ್ ಶ್ರೀನಿವಾಸ್ ರೆಡ್ಡಿ ಅವರು ಹೇಳಿದ್ದಾರೆ.

ಮೋಡ ಬಿತ್ತನೆಯಿಂದ ಫಲವಿಲ್ಲ: ಒಂದು ವೇಳೆ ಈಗ ಮೋಡ ಬಿತ್ತನೆ ಕಾರ್ಯವನ್ನು ಕೈಗೊಂಡರೂ ಯಾವುದೇ ಪ್ರಯೋಜನವಿಲ್ಲ ಎಂಬ ಕಾರಣದಿಂದಾಗಿ ಮೋಡ ಬಿತ್ತನೆಯನ್ನು ಸರ್ಕಾರ ಕೈಬಿಡಲು ನಿರ್ಧರಿಸಿದೆ. [ಸುಪ್ರೀಂಕೋರ್ಟ್ ಆದೇಶವನ್ನು ಕರ್ನಾಟಕ ಸರ್ಕಾರ ಮೀರಬಹುದು]

ಈ ಮೊದಲು ಮಳೆ ಕೊರತೆ ಹೆಚ್ಚಿರುವುದರಿಂದ ರಾಜ್ಯಕ್ಕೆ ಅಗತ್ಯವಿರುವ ನೀರಿಗಾಗಿ ಮಳೆ ಬರಿಸಲು ಮೋಡ ಬಿತ್ತನೆಗೆ ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಕಾವೇರಿ, ಹೇಮಾವತಿ, ಕಬಿನಿ ಸೇರಿದಂತೆ ಎಲ್ಲೆಡೆ ನೀರಿಗಾಗಿ ಹಾಹಾಕಾರ ಏಳುವ ದಿನಗಳು ದೂರವಿಲ್ಲ.[ಬೆಂಗಳೂರು ಹೊತ್ತಿ ಉರಿಯಲು ಮೂಲ ಕಾರಣ ಇದು!]

ಮೋಡ ಬಿತ್ತನೆಯಿಂದ ಪ್ರಯೋಜನವಿಲ್ಲ

ಮೋಡ ಬಿತ್ತನೆಯಿಂದ ಪ್ರಯೋಜನವಿಲ್ಲ

ಜೂನ್ ಅಥವಾ ಜುಲೈ ತಿಂಗಳಲ್ಲಿ ಮೋಡಗಳು ಶೇ.80ರಷ್ಟು ಇರಲಿದ್ದು, ಆ ವೇಳೆ ಮೋಡ ಬಿತ್ತನೆ ನಡೆಸಿದರೆ ಆಗಸ್ಟ್ ವೇಳೆ ಮಳೆ ಸುರಿಯುತ್ತದೆ. ಆದರೆ ಈಗಾಗಲೇ ತಡವಾಗಿರುವುದರಿಂದ ಮೋಡ ಬಿತ್ತನೆಯಿಂದ ಪ್ರಯೋಜನವಿಲ್ಲ ಎಂದು ಹೇಳಲಾಗಿದೆ.

ಎರಡು ರೀತಿ ಮೋಡ ಬಿತ್ತನೆ ಮಾಡಬಹುದು

ಎರಡು ರೀತಿ ಮೋಡ ಬಿತ್ತನೆ ಮಾಡಬಹುದು

ಏರೋಪ್ಲೇನ್ ಮೂಲಕ ಮೋಡ ಬಿತ್ತನೆ ಹಾಗೂ ನೆಲ ಮಟ್ಟದಲ್ಲಿ ರೇನ್ ರಾಕೆಟ್ ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗಿದೆ. ಏರೋಪ್ಲೇನ್ ಮಾದರಿ ಹೆಚ್ಚು ಭೂ ಪ್ರದೇಶಕ್ಕೆ ಮಳೆ ಸುರಿಸುವ ಭರವಸೆ ನೀಡುತ್ತದೆ. 50 ರೇನ್ ರಾಕೆಟ್ ಗಳ ಬೆಲೆ 5,000 ರು ಆದರೆ, ಏರೋಪ್ಲೇನ್ ತಂತ್ರಕ್ಕೆ ಕನಿಷ್ಠ 15ಕೊಟಿ ರು ಖರ್ಚಾಗುತ್ತದೆ. ಶೇ 80ರಷ್ಟು ಮಳೆ ಸುರಿಸುವ ಭರವಸೆ ನೀಡುತ್ತದೆ.

ಮಳೆ ಬರುವ ಸಾಧ್ಯತೆಯೂ ಕಡಿಮೆ

ಮಳೆ ಬರುವ ಸಾಧ್ಯತೆಯೂ ಕಡಿಮೆ

ತಡವಾಗಿ ಮೋಡ ಬಿತ್ತನೆ ನಡೆಸಿದರೆ ಮಳೆ ಬರುವ ಸಾಧ್ಯತೆಯೂ ಕಡಿಮೆ. ಜೊತೆಗೆ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ . ಇದರೊಟ್ಟಿಗೆ ಮೋಡ ಬಿತ್ತನೆಗಾಗಿ ಸಾಕಷ್ಟು ಹಣ ವ್ಯಯಿಸಬೇಕಾಗಿರುತ್ತದೆ. ಇಷ್ಟಾದರೂ ಮಳೆ ಬಾರದಿದ್ದರೆ ಪ್ರಯೋಜನವೇನು ಎಂಬ ಮಾತು ಕೂಡಾ ಇದೆ. ಹವಾಮಾನ ಇಲಾಖೆ ತಜ್ಞರು ಈ ವರ್ಷದ ಮಳೆಯ ಅಂದಾಜನ್ನು ಸಾಮಾನ್ಯವಾಗಿ 41 ವರ್ಷಗಳಲ್ಲಿ ಈ ಭಾಗದಲ್ಲಿ ಆಗಿರುವ ಮಳೆ ಪ್ರಮಾಣವನ್ನು ಆಧರಿಸಿ ಲೆಕ್ಕಾಚಾರ ಹಾಕುತ್ತದೆ.

ಬಾಕಿ ಉಳಿಯುವುದು ಡೆಡ್ ಸ್ಟೋರೇಜ್ ನೀರು ಮಾತ್ರ

ಬಾಕಿ ಉಳಿಯುವುದು ಡೆಡ್ ಸ್ಟೋರೇಜ್ ನೀರು ಮಾತ್ರ

ಸುಪ್ರೀಂ ಕೋರ್ಟ್‌ನ ಆದೇಶದಂತೆ ತಮಿಳುನಾಡಿಗೆ ರಾಜ್ಯಸರ್ಕಾರ ನೀರು ಬಿಡುತ್ತಿರುವುದರಿಂದ ಬಾಕಿ ಉಳಿಯುವುದು ಡೆಡ್ ಸ್ಟೋರೇಜ್ ನೀರು ಮಾತ್ರ. ಈ ನೀರು ಯಾವುದೇ ಉದ್ದೇಶಕ್ಕೂ ಬಳಸಲು ಸಾಧ್ಯವಿಲ್ಲ. ಹಾಗಾಗಿ ರಾಜ್ಯ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸಲಿದೆ.

ಆಗಸ್ಟ್ ನಲ್ಲಿ ಮೋಡ ಬಿತ್ತನೆ ಮಾಡಬಹುದು

ಆಗಸ್ಟ್ ನಲ್ಲಿ ಮೋಡ ಬಿತ್ತನೆ ಮಾಡಬಹುದು

ಆಗಸ್ಟ್‌ ನಲ್ಲಾದರೂ ಮೋಡ ಬಿತ್ತನೆ ನಡೆಸಿದ್ದರೆ ಅಲ್ಪ ಪ್ರಮಾಣದ ಬೆಳೆ ನಿರೀಕ್ಷಿಸಬಹುದಾಗಿತ್ತು. ಈಗ ಮೋಡ ಬಿತ್ತನೆ ಕಾರ್ಯ ಕೈಗೊಂಡರೆ ಶೇ.10ರಷ್ಟು ಮೋಡಗಳು ಮಾತ್ರ ದೊರೆಯಲಿದ್ದು, ಇದರಿಂದ ಮಳೆ ಬಿದ್ದರೆ ಬೀಳಬಹುದು, ಇಲ್ಲದೆ ಇರಬಹುದು. ಹಾಗಾಗಿ ಮಳೆ ಸುರಿಯುವ ಸಾಧ್ಯತೆ ಸಾಕಷ್ಟು ಕ್ಷೀಣಿಸಿದೆ.ಮಳೆ ಬಂದರೆ ಮುಂದಿನ ದಿನಗಳಲ್ಲಿ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಇನ್ನಿತರ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Why didn't Karnataka government take up cloud-seeding over the catchment areas in Cauvery basin. Congress government led by chief minister SM Krishna had first tired cloud-seeding for nine days, inducing some rain in north karnataka, but with little success otherwise.
Please Wait while comments are loading...