ದೇಶದಲ್ಲೇ ಮೊದಲ 'ವಿದ್ಯುತ್ ವಾಹನ ನೀತಿ' ಕರ್ನಾಟಕದಲ್ಲಿ ಜಾರಿ
ಬೆಂಗಳೂರು, ಸೆಪ್ಟೆಂಬರ್ 14: ಬೆಂಗಳೂರನ್ನು ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯನ್ನಾಗಿ ಮಾಡಲು ಹೊರಟಿರುವ ಕರ್ನಾಟಕ ಸರಕಾರ, ದೇಶದ ಮೊತ್ತ ಮೊದಲ ವಿದ್ಯುತ್ ವಾಹನ ನೀತಿಯನ್ನು ಜಾರಿಗೆ ತಂದಿದೆ.
'ಕರ್ನಾಟಕ ಎಲೆಕ್ಟ್ರಿಕ್ ವೆಹಿಕಲ್ ಆ್ಯಂಡ್ ಎನರ್ಜಿ ಸ್ಟೋರೇಜ್ ಪಾಲಿಸಿ - 2017' ಅಥವಾ 'ಕರ್ನಾಟಕ ವಿದ್ಯುತ್ ವಾಹನ ಮತ್ತು ಇಂಧನ ಸಂಗ್ರಹಣಾ ನೀತಿ 2017'ಗೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಈ ನೀತಿಯ ಅಡಿಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಪ್ರೋತ್ಸಾಹ, ವಾಹನ ಖರೀದಿದಾರರಿಗೆ ವಿವಿಧ ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತದೆ.
With the #ElectricVehiclePolicy we aim to make #Bengaluru the #ElectricVehicleHub of India. Will encourage manufacturing of EVs & batteries.
— CM of Karnataka (@CMofKarnataka) September 14, 2017
ಇದಲ್ಲದೆ ವಿದ್ಯುತ್ ವಾಹನಗಳು ಹಾಗೂ ಈ ವಾಹನಗಳಿಗೆ ಬೇಕಾದ ಬ್ಯಾಟರಿಗಳ ಉತ್ಪಾದನೆಗೆ ಮುಂದಾಗುವ ಉದ್ಯಮಗಳಿಗೆ ವಿಶೇಷ ರಿಯಾಯಿತಿಯನ್ನೂ ಸರಕಾರ ನೀಡಲಿದೆ.












Click it and Unblock the Notifications