• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Breaking; ಕರ್ನಾಟಕದಲ್ಲಿ ಲಾಕ್‌ಡೌನ್‌ನಲ್ಲಿ ಕೆಲವು ವಿನಾಯಿತಿ

|
Google Oneindia Kannada News

ಬೆಂಗಳೂರು, ಜೂನ್ 02; ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಸರ್ಕಾರ ಜೂನ್ 3ರ ಗುರುವಾರದಿಂದ ಜಾರಿಗೆ ಬರುವಂತೆ ಲಾಕ್‌ಡೌನ್‌ನಲ್ಲಿ ಕೆಲವು ವಿನಾಯಿತಿಗಳನ್ನು ಘೋಷಣೆ ಮಾಡಿದೆ.

   Karnataka Lockdown ನಿಯಮಗಳಲ್ಲಿ ಕೊಂಚ ಬದಲಾವಣೆ | Oneindia Kannada

   ಬುಧವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವರು, ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ತೀರ್ಮಾನವನ್ನು ಕೈಗೊಳ್ಳಲಾಗಿದೆ. ರಫ್ತು ಆಧರಿತ ಉದ್ಯಮಗಳ ಪ್ರಾರಂಭಕ್ಕೆ ಗುರುವಾರದಿಂದಲೇ ಅನುಮತಿ ನೀಡಲಾಗಿದೆ.

    ಅನ್ ಲಾಕ್ ಮೂಡ್ ನಲ್ಲಿದ್ದ ರಾಜ್ಯಕ್ಕೆ ಶಾಕ್: 3 ಷರತ್ತು ಹಾಕಿದ ಕೇಂದ್ರ? ಅನ್ ಲಾಕ್ ಮೂಡ್ ನಲ್ಲಿದ್ದ ರಾಜ್ಯಕ್ಕೆ ಶಾಕ್: 3 ಷರತ್ತು ಹಾಕಿದ ಕೇಂದ್ರ?

   ಕೃಷಿ ‌ಉತ್ಪನ್ನಗಳು, ಟ್ರ್ಯಾಕ್ಟರ್ ಉತ್ಪಾದನೆ, ಸಿದ್ಧ ಉಡುಪುಗಳು, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಆಟೋಮೊಬೈಲ್ ಉತ್ಪಾದಿಸುವ ಕೈಗಾರಿಕೆಗಳಿಗೆ ಅವಕಾಶವನ್ನು ನೀಡಲಾಗಿದೆ. ಶೇ 50ರಷ್ಟು ಕೆಲಸಗಾರರನ್ನಿಟ್ಟುಕೊಂಡು ಕೆಲಸ ಮಾಡಬೇಕು.

    ಲಾಕ್ ಡೌನ್ ಬೇಡ ಎಂದ ಸಚಿವರಿಗೆ ಡಾ.ಸುಧಾಕರ್ ಹೇಳಿದ್ದೇನು? ಲಾಕ್ ಡೌನ್ ಬೇಡ ಎಂದ ಸಚಿವರಿಗೆ ಡಾ.ಸುಧಾಕರ್ ಹೇಳಿದ್ದೇನು?

   ಕೆಲಸದ ಅವಧಿಯಲ್ಲಿ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ವಾರಕ್ಕೆರಡು ಬಾರಿ ಕೋವಿಡ್ ಪರೀಕ್ಷೆಗಳ್ನು ನೌಕರರು, ಸಿಬ್ಬಂದಿಗೆ ಮಾಡಿಸಬೇಕು ಎಂದು ಷರತ್ತು ಹಾಕಲಾಗಿದೆ.

   ಸರ್ಕಾರದ ಆದೇಶ

   ಅಂತೆಯೇ 1000ಕ್ಕೂ ಹೆಚ್ಚು ಕೆಲಸಗಾರರು ಅಥವಾ ಕಾರ್ಮಿಕರಿರುವ ಕೈಗಾರಿಕೆಗಳು ನಿಯಮಿತವಾಗಿ‌ ವಾರಕ್ಕೆ ಎರಡು ಭಾರಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸುವಂತೆ ಸರ್ಕಾರ ನಿರ್ದೇಶನ ನೀಡಿದೆ.

   ಬುಧವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಯಡಿಯೂರಪ್ಪ, ರಫ್ತು ಆಧಾರಿತ ಕೈಗಾರಿಕೆ ಅಥವಾ ಸಂಸ್ಥೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡುವುದಾಗಿ ಹೇಳಿದ್ದರು. ಸಂಜೆ ಈ ಕುರಿತು ಅಧಿಕೃತ ಆದೇಶ ಪ್ರಕಟವಾಗಿದೆ.

   ಲಾಕ್‌ಡೌನ್ ವಿಸ್ತರಣೆ; ಕರ್ನಾಟಕದಲ್ಲಿ ಜೂನ್ 7ರ ತನಕ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಲಾಕ್‌ಡೌನ್ ವಿಸ್ತರಣೆ ವಿಚಾರದಲ್ಲಿ ಸಚಿವರು, ಮುಖ್ಯಮಂತ್ರಿಗಳ ನಡುವೆ ಒಮ್ಮತ ಮೂಡಿಲ್ಲ.

   ಈ ಹಿನ್ನಲೆಯಲ್ಲಿ ಶನಿವಾರ ಮತ್ತೊಂದು ಸುತ್ತಿನ ಸಭೆ ಕರೆಯಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ. ಆ ಸಭೆಯಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡುವ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.

   English summary
   Karnataka government on June 2nd announced some relaxation on lockdown. It will come to effect from June 3.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X