ಭೂಮಿಗೆ ಸಂಬಂಧಿಸಿದ ಎಲ್ಲ ಸೇವೆ ಒಂದೇ ಕಡೆ: ಯುಎಲ್‌ಎಂಎಸ್ ಯೋಜನೆ ಜಾರಿಗೆ ಸರ್ಕಾರ ಮಹತ್ವದ ಹೆಜ್ಜೆ
ಬೆಂಗಳೂರು: ಭೂಮಿಗೆ ಸಂಬಂಧಿಸಿದ ಸರ್ಕಾರದ ಎಲ್ಲ ಸೇವೆಗಳನ್ನು ಒಂದೇ ವ್ಯವಸ್ಥೆಯ ಅಡಿಯಲ್ಲಿ ತರಲು ಉದ್ದೇಶಿಸಿರುವ ಮಹತ್ವಾಕಾಂಕ್ಷಿ ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ (ULMS) ಯೋಜನೆ ಜಾರಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಈ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಕಂದಾಯ, ನಗರಾಭಿವೃದ್ಧಿ, ನೋಂದಣಿ, ಲೋಕೋಪಯೋಗಿ, ನೀರಾವರಿ, ವಸತಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಯಿತು.
ಯುಎಲ್‌ಎಂಎಸ್ ಎಂದರೇನು?
ಯುಎಲ್‌ಎಂಎಸ್ ಎನ್ನುವುದು ಗಣಕೀಕೃತ ಏಕೀಕೃತ ವ್ಯವಸ್ಥೆಯಾಗಿದ್ದು, ಭೂಮಿಗೆ ಸಂಬಂಧಿಸಿದ ಸರ್ವೆ, ಭೂ ಪರಿವರ್ತನೆ, ಬಡಾವಣೆ ಪ್ಲಾನ್ ಮಂಜೂರಾತಿ, ಮನೆ ಪ್ಲಾನ್ ಅನುಮೋದನೆ, ನಿವೇಶನ ಮಾರಾಟ, ಇ-ಖಾತಾ ಸೃಜನೆ, ಆಸ್ತಿ ತೆರಿಗೆ ಸಂಗ್ರಹ, ಭೂಸ್ವಾಧೀನ ಸೇರಿದಂತೆ ಅನೇಕ ಸೇವೆಗಳನ್ನು ಒಂದೇ ಆನ್‌ಲೈನ್ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಿದೆ. ಇದರಿಂದ ಜನರು ಬೇರೆ ಬೇರೆ ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲದೆ, ಒಂದೇ ಪೋರ್ಟಲ್ ಮೂಲಕ ಭೂ ಸೇವೆಗಳನ್ನು ಪಡೆಯಬಹುದಾಗಿದೆ. ಇದು ಮಹತ್ವದ ಆಡಳಿತ ಸುಧಾರಣಾ ಕ್ರಮವಾಗಿ ಪರಿಗಣಿಸಲಾಗಿದೆ.

ಯುಎಲ್‌ಎಂಎಸ್ ಅಡಿಯಲ್ಲಿ ಭೂ ಮಾಲೀಕತ್ವದ ಮೂಲ ದಾಖಲೆಗಳ ದೃಢೀಕರಣ, ಸರ್ವೆ ನಕ್ಷೆಗಳ ಡಿಜಿಟಲ್ ಒದಗಿಸುವುದು, ಭೂ ಪರಿವರ್ತನೆ, ಕಟ್ಟಡ ನಕ್ಷೆ ಅನುಮೋದನೆ, ಖಾತೆ ಪಡೆಯುವ ಪ್ರಕ್ರಿಯೆಗಳು ನೇರ ಆನ್‌ಲೈನ್ ವ್ಯವಸ್ಥೆಗೆ ತರಲಾಗುತ್ತದೆ. ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಕಡತಗಳು ಸ್ವಯಂಚಾಲಿತವಾಗಿ ಸಾಗುವ ವ್ಯವಸ್ಥೆ ಇರುತ್ತದೆ. ಪ್ರತ್ಯೇಕ ಇಲಾಖೆಗೆ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಕಾಲಮಿತಿಯೊಳಗೆ ತೀರ್ಮಾನ ಕೈಗೊಳ್ಳುವ ವ್ಯವಸ್ಥೆ ಇರುವುದರಿಂದ ವಿಳಂಬಕ್ಕೆ ಕಡಿವಾಣ ಬೀಳಲಿದೆ.
ನಕಲಿ ದಾಖಲೆಗಳಿಗೆ ಕಡಿವಾಣ
ಹಾಲಿ ವ್ಯವಸ್ಥೆಯಲ್ಲಿ ಕಾಗದ ಆಧಾರಿತ ದೃಢೀಕರಣದಿಂದ ದಾಖಲೆಗಳ ನೈಜತೆಯಲ್ಲಿ ಅನುಮಾನಗಳಿವೆ. ಆದರೆ ಯುಎಲ್‌ಎಂಎಸ್‌ನಲ್ಲಿ ಮೂಲ ದಾಖಲೆಗಳನ್ನು ನೇರವಾಗಿ ಅಧಿಕೃತ ಮೂಲಗಳಿಂದ ಪಡೆಯಲಾಗುತ್ತದೆ. ಸರ್ವೆ ನಕ್ಷೆ ಸೇರಿದಂತೆ ಎಲ್ಲಾ ದಾಖಲೆಗಳಿಗೆ ಸ್ಪಷ್ಟ ಜವಾಬ್ದಾರಿ ನಿಗದಿಯಾಗುತ್ತದೆ. ಇದರಿಂದ ನಕಲಿ, ಅಕ್ರಮ ಭೂ ವ್ಯವಹಾರಗಳು, ಮಾಲೀಕತ್ವದ ಗೊಂದಲಗಳು ಹಾಗೂ ವ್ಯಾಜ್ಯಗಳು ಕಡಿಮೆಯಾಗುವ ಸಾಧ್ಯತೆ ಇದೆ. ಅಮಾಯಕ ಜನರನ್ನು ವಂಚನೆಗಳಿಂದ ರಕ್ಷಿಸಲು ಇದು ಪರಿಣಾಮಕಾರಿ ಹೆಜ್ಜೆಯಾಗಲಿದೆ.
ಭೂ ಆಧಾರ್-ULPIN ಪರಿಚಯ
ಪ್ರತಿ ಭೂ ಆಸ್ತಿಗೆ ಏಕಮಾತ್ರ ಗುರುತಿನ ಸಂಖ್ಯೆ (ULPIN ) ನೀಡುವ ಯೋಜನೆ ಕೂಡ ಯುಎಲ್‌ಎಂಎಸ್‌ನ ಭಾಗವಾಗಿದೆ. ಇದರಿಂದ ಸಂಪೂರ್ಣ ಪಾರದರ್ಶಕತೆ, ಖಚಿತತೆ ಹಾಗೂ ಮಾಲಿಕತ್ವದ ಗ್ಯಾರಂಟಿ ಸಾಧಿಸಲು ಸಾಧ್ಯವಾಗಲಿದೆ. ಇದರ ಮೂಲಕ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳ್ಳಲಿದೆ. ಆಸ್ತಿ ತೆರಿಗೆ ವ್ಯವಸ್ಥೆಯಲ್ಲಿರುವ ತಾರತಮ್ಯ, ವಂಚನೆ, ಕಡಿಮೆ ಪಾವತಿ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇದರಿಂದ ಗ್ರಾಮ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಬಲಪಡಲಿವೆ.

ಭೂಮಿಯ ನೈಜ ಆರ್ಥಿಕ ಮೌಲ್ಯ ಮತ್ತು ಆದಾಯ ಹೆಚ್ಚಳಕ್ಕೂ ಇದು ಪೂರಕವಾಗಲಿದೆ. ಹೂಡಿಕೆ, ನಗರಾಭಿವೃದ್ಧಿ ಮತ್ತು ಇತರೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ದೇಶದ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳಲ್ಲಿ ಶೇ.50ಕ್ಕೂ ಹೆಚ್ಚು ಪ್ರಕರಣಗಳು ಭೂಮಾಲೀಕತ್ವ ಸಂಬಂಧಿತವೆಂದು ಅಂದಾಜಿಸಲಾಗಿದೆ. ಭೂ ದಾಖಲೆಗಳ ಖಚಿತತೆ ಮತ್ತು ಗ್ಯಾರಂಟಿ ವ್ಯವಸ್ಥೆ ರೂಪುಗೊಂಡರೆ, ಅನೇಕ ವ್ಯಾಜ್ಯಗಳನ್ನು ತಪ್ಪಿಸಬಹುದು ಎಂಬ ವಿಶ್ವಾಸ ಸರ್ಕಾರ ವ್ಯಕ್ತಪಡಿಸಿದೆ.
6 ತಿಂಗಳಲ್ಲಿ ಜಾರಿ
ಇದಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳು ಮುಂದಿನ ಆರು ತಿಂಗಳೊಳಗೆ ಈ ಏಕೀಕೃತ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಬೇಕೆಂದು ಸಭೆಯಲ್ಲಿ ಸೂಚಿಸಲಾಗಿದೆ. ಯುಎಲ್‌ಎಂಎಸ್ ಜನಕೇಂದ್ರಿತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತ ವ್ಯವಸ್ಥೆ ರೂಪಿಸುವ ಮಹತ್ವದ ಸುಧಾರಣೆಯಾಗಿ ಕಾಣಲಾಗುತ್ತಿದೆ. ಭೂ ಮಾಲಿಕತ್ವದಲ್ಲಿ ಖಚಿತತೆ ಮತ್ತು ನೆಮ್ಮದಿ ತಂದುಕೊಡುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications