ಸಿಹಿ ಸುದ್ದಿ: ಕರ್ನಾಟಕದಲ್ಲಿ 'ಹೊಸ ವಿದ್ಯುತ್ ನೀತಿ' ಜಾರಿಗೆ ಸರ್ಕಾರ ಚಿಂತನೆ?, ಏನಿದು?
ಬೆಂಗಳೂರು, ಅಕ್ಟೋಬರ್ 25: ಕರ್ನಾಟಕದ ಜನತೆಗೆ ಉಚಿತ ವಿದ್ಯುತ್ ಪೂರೈಕೆಯ 'ಗೃಹ ಜ್ಯೋತಿ' ಯೋಜನೆ ಜಾರಿಗೊಳಿಸಿರುವ ರಾಜ್ಯ ಸರ್ಕಾರ ಇದೀಗ ಜನರಿಗೆ ಅನೂಕೂಲಕರ ವಿದ್ಯುತ್ ಪಾಲಿಸಿ ತರುವ ಚಿಂತನೆ ನಡೆಸಿದೆ. ತಮಿಳುನಾಡಿನಲ್ಲಿರುವ ಈ ನೀತಿ ನಮ್ಮಲ್ಲೂ ಜಾರಿಯಾದರೆ ಪ್ರತಿ ವರ್ಷ ವಿದ್ಯುತ್ ದರದಲ್ಲಿ ಉಂಟಾಗುರುತ್ತಿರುವ ಏರು ಪೇರು ತಪ್ಪಲಿದೆ.
ಹೌದು, ಕರ್ನಾಟಕದಲ್ಲಿ 'ಬಹುವಾರ್ಷಿಕ ವಿದ್ಯುತ್ ದರ ನೀತಿ'ಯನ್ನು (Multi-Year Tariff- MYT) ಜಾರಿಗೆ ತರುವ ಪ್ರಸ್ತಾಪವನ್ನು ಕರ್ನಾಟಕ ವಿದ್ಯುತ್ ನಿರ್ವಹಣಾ ಆಯೋಗವು ರಾಜ್ಯ ಸರ್ಕಾರದ ಮುಂದೆ ಇರಿಸಿದೆ. ಸದ್ಯ ಈ ನೀತಿಯು ನೆರೆಯ ತಮಿಳುನಾಡಿನಲ್ಲಿ ಜಾರಿಯಲ್ಲಿದೆ. ಹಾಗಾದರೆ ಏನಿದು? ಬಹುವಾರ್ಷಿಕ ವಿದ್ಯುತ್ ದರ ನೀಡಿ, ಇದರಿಂದ ಜನರಿಗಾಗುವ ಪ್ರಯೋಜನಗಳು ಏನು ಎಂಬ ಮಾಹಿತಿ ಇಲ್ಲಿ ತಿಳಿಯಿರಿ.

ವಿದ್ಯುತ್ ಹೊಂದಾಣಿಕೆ, ಪೂರೈಕೆ, ಬಳಕೆ ತೆರಿಗೆ ವೆಚ್ಚ ಸೇರಿದಂತೆ ಎಲ್ಲ ಮಾದರಿಯ ಸುಂಕ ಆಧಾರದಲ್ಲಿ ಈವರೆಗೆ ನಮಗೆ ಲಭ್ಯವಾಗುವ ವಿದ್ಯುತ್ ಮೇಲೆ ದರ ನಿಗದಿ ಆಗುತ್ತಿತ್ತು. ಇದೇ ಕಾರಣದಿಂದಲೇ ಪ್ರತಿ ವರ್ಷವು ವಿದ್ಯುತ್ ಮೇಲಿನ ದರ ಏರುಪೇರಾಗಿ ಗ್ರಾಹಕರಿಗೆ ಆರ್ಥಿಕ ಹೊರೆ ಉಂಟಾಗುತ್ತಿತ್ತು.
ಮೂರು ಇಲ್ಲವೇ ಐದು ವರ್ಷಕ್ಕೊಮ್ಮೆ ದರ ಏರಿಕೆ?
ಇಂತಹ ಸಮಸ್ಯೆಗಳಿಗೆ ಮುಕ್ತ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಹೊರ ನೀತಿ ಜಾರಿಗೆ ತರಲಿದೆ. ಇದರಿಂದ ಪ್ರತಿ ವರ್ಷ ವಿದ್ಯುತ್ ದರ ಕುರಿತು ನಿರ್ಧಾರಗಳು ಆಗದೇ ಪ್ರತಿ ಮೂರು ಇಲ್ಲವೇ ಐದು ವರ್ಷಗಳಿಗೆ ಒಮ್ಮೆ ಆಗುತ್ತಿದೆ. ಸದ್ಯ ಇದು ಪ್ರಸ್ತಾವನೆ ಹಂತದಲ್ಲಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಸರ್ಕಾರ ನಿರ್ಧರಿಸಲಿದೆ.

ಅಂದುಕೊಂಡಂತೆ ನೀತಿ ಜಾರಿಯಾದರೆ ಪ್ರತಿ ವರ್ಷಕ್ಕೆ ಬದಲಾಗಿ ಪ್ರತಿ ಮೂರು ವರ್ಷ ಇಲ್ಲವೇ ವರ್ಷಕ್ಕೊಮ್ಮೆ ವಿದ್ಯತ್ ದರ ನಿಗದಿ ಆಗುತ್ತದೆ ಆಗ ವಿದ್ಯುತ್ ಯುನಿಟ್ ಮೇಲಿನ ದರದಲ್ಲಿನ ಏರು ಪೇರಿನ ಸಮಸ್ಯೆ ಉದ್ಭವಿಸುವುದಿಲ್ಲ ಎನ್ನಲಾಗಿದೆ. ಸದ್ಯ ಈ ನೀತಿ ತಮಿಳುನಾಡಿನಲ್ಲಿ ಅನುಷ್ಠಾನಗೊಂಡಿದೆ. ಇದನ್ನು ಕರ್ನಾಟಕಕ್ಕೂ ತರುವ ಪ್ರಯತ್ನ ನಡೆಯುತ್ತಿದೆ.
ಶೀಘ್ರವೇ ಸರ್ಕಾರ ನಿರ್ಧಾರ ಸಾಧ್ಯತೆ
ರಾಜ್ಯ ಸರ್ಕಾರಕ್ಕೆ ಬಹುವಾರ್ಷಿಕ ವಿದ್ಯುತ್ ಟಾರಿಫ್ ಕುರಿತು ಪ್ರಸ್ತಾವನೆ ಸಲ್ಲಿಸಿದ್ದೇವೆ. ಅದರ ಅನುಷ್ಠಾನ ಕುರಿತು ಅವಲೋಕಿಸಬೇಕಿದೆ. ಕರ್ನಾಟಕದಲ್ಲಿ ಯಾವ ಸ್ವರೂಪದಲ್ಲಿ ಜಾರಿಗೊಳಿಸಿದರೆ ಉತ್ತಮ ಹಾಲಿ ನೀತಿ ರದ್ದಿನಿಂದ ಆಗುವ ಸಮಸ್ಯೆ ಕುರಿತು ಚರ್ಚಿಸಿ ಸರ್ಕಾರ ನೀರ್ಣಯಿಸುವ ಸಾಧ್ಯತೆಗಳು ಇವೆ ಎಂದು ಕರ್ನಾಟಕ ವಿದ್ಯುತ್ ನಿರ್ವಹಣಾ ಆಯೋಗದ ಅಧ್ಯಕ್ಷ ಪಿ.ರವಿಕುಮಾರ್ ಮಾಹಿತಿ ನೀಡಿದ್ದಾರೆ ಎಂದು ನ್ಯೂಸ್ 18ವರದಿ ಮಾಡಿದೆ.












Click it and Unblock the Notifications