ಸರ್ಕಾರಿ ಶಾಲಾ ಕಾಲೇಜಿಗಳಿಗೆ ಹೊಸ ಕೊಠಡಿಯ ಭಾಗ್ಯ!
ಬೆಂಗಳೂರು, ಜುಲೈ 23: ಸರ್ಕಾರಿ ಶಾಲಾ ಕಾಲೇಜಿಗಳಿಗೆ ಹೊಸ ಕೊಠಡಿಯ ಭಾಗ್ಯ ಒದಗಿಬರಲಿದೆ. ಸ್ಯಾಟ್ಸ್( ವಿದ್ಯಾರ್ಥಿಗಳ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ) ಮತ್ತು ಯು ಡೈಸ್ ಪ್ಲಸ್ ನಲ್ಲಿ ಸಿಕ್ಕಿರುವ ಮಾಹಿತಯನ್ನು ಅನುಸರಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಹೊಸ ಕೊಠಡಿ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆಯನ್ನು ನೀಡಿದೆ.
ಶೈಕ್ಷಣಿಕ ವರುಷ 2022- 23ನೇ ಸಾಲಿನಲ್ಲಿ ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯನ್ನು ಕಂಡಿದೆ. ಇದರಿಂದ 6601 ಕೊಠಡಿಗಳ ಕೊರತೆ ಎದುರಾಗುತ್ತಿದೆ. ಈ ಕೊರತೆಯನ್ನು ನೀಗಲು ಸರ್ಕಾರ 6601 ಕೊಠಡಿಗಳನ್ನು ನಿರ್ಮಿಸಲು ಸರ್ಕಾರ ಒಪ್ಪಿಗೆಯನ್ನು ನೀಡಿದೆ.
ಸರ್ಕಾರ ತೆಗೆದುಕೊಂಡಿರುವ ಅಂಕಿ ಅಂಶಗಳ ಪ್ರಕಾರ 6601 ಕೊಠಡಿಗಳ ಅವಶ್ಯಕತೆಯಿದ್ದು 3616 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಅವಶ್ಯಕತೆಯಿದೆ. ಇನ್ನು ಪ್ರೌಢಶಾಲೆಗಳಿಗೆ 2985 ಕೊಠಡಿಗಳ ಅವಶ್ಯಕತೆಯಿ ಎನ್ನಲಾಗುತ್ತಿದೆ. ಇದಕ್ಕಾಗಿ ಸರಕಾರ ಸ್ಟೂಡೆಂಡ್ ಅಚೀವ್ಮೆಂಟ್ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿನ ಮಾಹಿತಿಯನ್ನು ಕ್ರೋಢಿಕರಿಸಿಕೊಳ್ಳಲಾಗಿದೆ.

ಪ್ರಾಥಮಿಕ ಶಾಲಾ ಕೊಠಡಿಗೆ ವೆಚ್ಚವೆಷ್ಟು?
ಪ್ರಾಥಮಿಕ ಶಾಲಾ ಕೊಠಡಿಗಳ ನಿರ್ಮಿಸಲು ಒಂದು ಕೊಠಡಿಗೆ 13.90 ಲಕ್ಷ ಮತ್ತು ಪ್ರೌಢಶಾಲೆಯ ಕೊಠಡಿಗಳ ನಿರ್ಮಾಣಕ್ಕೆ 16.40 ಲಕ್ಷ ಹಣ ಬೇಕಾಗುತ್ತದೆ. ಇದಕ್ಕಾಗಿ 992.16ಕೋಟಿ ಹಣ ಅನುದಾನವನ್ನು ನೀಡುವಂತೆ ಸರ್ಕಾರ ಮನವಿಯನ್ನು ಮಾಡಲಾಗಿತ್ತು. ಸರ್ಕಾರವು ಈ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲನೆಯನ್ನು ನಡೆಸಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕವಾದ ಅನುಮೋದನೆಯನ್ನು ನೀಡಿದೆ.
ಹಣ ಹೊಂದಾಣಿಕೆ ಹೇಗೆ?
ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಠಡಿಗಳಿಗೆ ತಗಲುವ ವೆಚ್ಚವನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ರಾಜ್ಯ ಬಂಡವಾಳದ ವೆಚ್ಚ, ವಿಶೇಷ ಅಭಿವೃದ್ಧಿ ಯೋಜನೆ( ಎಸ್‌ಡಿಪಿ), ಕಲ್ಯಾಣ ಕರ್ನಾಟಕ ಪ್ರದೇಶಭಿವೃದ್ಧಿ ಮಂಡಳಿ (KKRDB),ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮ, ಜಿಲ್ಲಾ ಖನಿಜ ನಿಧಿಗಳಡಿ ಭರಿಸಲು ಅನುಮತಿಯನ್ನು ನೀಡಲಾಗಿದೆ.
ಶಾಲೆಗಳಿಗೆ ಅವಶ್ಯಕತೆ ಇರುವ ಕೊಠಡಿಯನ್ನು ಕಟ್ಟುವ ವೇಳೆಯಲ್ಲಿ ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳು ನಿಗಾವನ್ನು ಇಡಬೇಕಾಗಿದೆ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡುವ ಮೂಲಕ ಮಕ್ಕಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಕ್ರಮವನ್ನು ವಹಿಸಬೇಕಾಗುತ್ತದೆ. ಕಾಮಗಾರಿಯ ವಿವರವನ್ನು SATSನಲ್ಲಿ ಸಹ ಅಪ್ ಡೇಟ್ ಮಾಡಲು ಶಾಲೆಗಳಿಗೆ ಸೂಚನೆಯನ್ನು ನೀಡಲಾಗಿದೆ. ಶಾಲೆಗಳಿಗೆ ಅವಶ್ಯಕತೆ ಇರುವ ಕೊಠಡಿಗಳನ್ನು ನಿರ್ಮಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಸಾಮಾನ್ಯವಾಗಿ 18*20 ಅಳತೆಯ ವಿಸ್ತೀರ್ಣದ ಕೊಠಡಿಗಳ ನಿರ್ಮಾಣವನ್ನು ಮಾಡಲಾಗುತ್ತದೆ. ಇದಕ್ಕಾಗಿ ಸರಕಾರ ನಿಗದಿ ಮಾಡಿರುವ ಹಣ ಹೆಚ್ಚಾಗಿದ್ದರು ಅದನ್ನು ಸರಿಯಾಗಿ ನಿಭಾಯಿಸಿ ಉತ್ತಮ ಗುಣಮಟ್ಟಡ ಕಟ್ಟಡವನ್ನು ಕಟ್ಟಬೇಕಿದೆ.












Click it and Unblock the Notifications