ಮಹಿಳಾ ಉದ್ಯೋಗಿಗಳಿಗೆ 'ನೈಟ್ ಶಿಫ್ಟ್' ಗೆ ಅನುಮತಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 23: ಕಾರ್ಮಿಕ ಕಾಯ್ದೆಗೆ ಕರ್ನಾಟಕ ಸರ್ಕಾರ ಹಲವು ತಿದ್ದುಪಡಿ ತಂದಿದ್ದು, ಪ್ರಮುಖವಾಗಿ ಮಹಿಳಾ ಉದ್ಯೋಗಿಗಳಿಗೆ ರಾತ್ರಿಪಾಳಿಯಲ್ಲಿ ಕಾರ್ಯನಿರ್ವಹಿಸಲು ಇದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಹೀಗಾಗಿ ರಾತ್ರಿ 7 ಗಂಟೆ ನಂತರ ಎಲ್ಲಾ ಸ್ತರದ ಕಚೇರಿಗಳಲ್ಲಿ ಮಹಿಳೆಯರು ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ.

ಈ ನಿಯಮ ಮುಖ್ಯವಾಗಿ ಐಟಿ ಹಾಗೂ ಐಟಿಯೇತರ ಕ್ಷೇತ್ರಗಳಲ್ಲಿ ಈಗಾಗಲೇ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಹೆಣ್ಣು ಮಕ್ಕಳಿಗೆ ಅನುಮತಿ ಇದೆ. ಈಗ ಎಲ್ಲಾ ಕ್ಷೇತ್ರದ ಕಚೇರಿಗಳಿಗೆ ಈ ನಿಯಮ ವಿಸ್ತರಿಸಲಾಗಿದೆ.

ಆದರೆ, ಮಹಿಳಾ ಉದ್ಯೋಗಿಗಳಿಗೆ ಸೂಕ್ತ ಭದ್ರತೆ. ಸಾರಿಗೆ ವ್ಯವಸ್ಥೆ. ಉದ್ಯೋಗಿಗಳಿಂದ ಸಮ್ಮತಿ ಪತ್ರ ಸೇರಿದಂತೆ 15 ಷರತ್ತುಗಳನ್ನು ವಿಧಿಸಲಾಗಿದೆ. ಒಂದು ವೇಳೆ ಮಹಿಳಾ ಉದ್ಯೋಗಿಯ ಸಮ್ಮತಿ ಇಲ್ಲದೆ ನೈಟ್ ಶಿಫ್ಟ್ ಹೇರಿದರೆ ಅಂಥಾ ಸಂಸ್ಥೆಯ ಲೈಸನ್ಸ್ ರದ್ದು ಮಾಡಲಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.

Karnataka Government removes restriction on Night shift for Working women

ಕೇಂದ್ರ ಸರ್ಕಾರದ ಒಪ್ಪಂದ ಕಾರ್ಮಿಕರ (ನಿಯಂತ್ರಣ ಮತ್ತು ರದ್ದತಿ)ಕಾಯ್ದೆ-1970 ರ ಅನ್ವಯ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಈಗ ಹೊಸದಾಗಿ 'ಕರ್ನಾಟಕ ಒಪ್ಪಂದ ಕಾರ್ಮಿಕರ ನಿಯಂತ್ರಣ ಮತ್ತು ರದ್ದತಿ ತಿದ್ದುಪಡಿ ನಿಯಮಗಳು-2016' ರಚಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Karnataka government has removed restrictions on allowing women to work in night shifts in all sectors. Currently, women are allowed to be employed in night shifts only in IT and ITES sectors.
Please Wait while comments are loading...