karnataka Government: ಕರ್ನಾಟಕದ ಶಾಸಕರಿಗೆ ಭರ್ಜರಿ ಗಿಫ್ಟ್ 299 ಕೋಟಿ ಅನುದಾನ ಬಿಡುಗಡೆ: ನಿಮ್ಮ ಕ್ಷೇತ್ರಕ್ಕೆಷ್ಟು.?
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ'ಯಡಿ (KMLAD) ಬರೋಬ್ಬರಿ 299 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಕುರಿತಂತೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿಯವು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಧೀನದಲ್ಲಿ ಬರುವ ವಿವಿಧ ಇಲಾಖೆ/ಸಂಸ್ಥೆ/ಮಂಡಳಿ/ಪ್ರಾಧಿಕಾರಗಳಿಗೆ ಸಂಬಂಧಿಸಿದಂತೆ ಯೋಜನಾ ಕಾರ್ಯಕ್ರಮಗಳನ್ನು 2025-26ನೇ ಸಾಲಿಗೆ ಮುಂದುವರೆಸಲಾಗಿದೆ ಹಾಗೂ ಪುಸಕ್ತ ಸಾಲಿನ ಆಯವ್ಯಯದಲ್ಲಿ ಕರ್ನಾಟಕ ಶಾಸಕರ ಸ್ಥಳೀಯ ಪುದೇಶಾಭಿವೃದ್ಧಿ ಯೋಜನೆಯಡಿ ಒಟ್ಟು ರೂ.60225.17 ಲಕ್ಷಗಳನ್ನು ಈ ಕೆಳಕಂಡಂತೆ ಒದಗಿಸಲಾಗಿದೆ.

ಕರ್ನಾಟಕ ಶಾಸಕರ ಸ್ಥಳೀಯ ಪುದೇಶಾಭಿವೃದ್ಧಿ ಯೋಜನೆಯ ಮಾರ್ಗಸೂಚಿ ಕಂಡಿಕೆ 4.7 ರನ್ವಯ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಲೆಕ್ಕ ಶೀರ್ಷಿಕೆ 2575-60-265-0-02- 034 (ಗುತ್ತಿಗೆ/ಹೊರಗುತ್ತಿಗೆ) ರಡಿ 2025-26ನೇ ಸಾಲಿನಲ್ಲಿ ಒದಗಿಸಿರುವ ಅನುದಾನದ ಪೈಕಿ ರೂ.6.71 ಲಕ್ಷಗಳನ್ನು, 2024-25ನೇ ಸಾಲಿನಲ್ಲಿ ಕಾರ್ಯನಿರತ ಸಿಬ್ಬಂದಿಗಳ ವೇತನಕ್ಕೆ ಕೊರತೆಯಾಗಿದ್ದ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ, ಪಧಾನ ಲೆಕ್ಕಶೀರ್ಷಿಕೆ 4575 ರಡಿ ಮೊದಲನೇ ಕಂತಿನ ಅನುದಾನವಾಗಿ 224 ವಿಧಾನ ಸಭಾ ಕ್ಷೇತ್ರಗಳಿಗೆ ಹಾಗೂ 71 ಮಾನ್ಯ ವಿಧಾನ ಪರಿಷತ್ತಿನ ಸದಸ್ಯರು-ಇವರುಗಳಿಗೆ (ಪದಾವಧಿಯನ್ನಾಧರಿಸಿ) ತಲಾ ರೂ.50.00 ಲಕ್ಷಗಳಂತೆ ಒಟಾರೆ ರೂ.147.50 ಕೋಟಿಗಳನ್ನು ಬಿಡುಗಡೆ ಮಾಡಲಾಗಿರುತ್ತದೆ.
ಸರ್ಕಾರಿ ಆದೇಶದಲ್ಲಿ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ, ಪಧಾನ ಲೆಕ್ಕಶೀರ್ಷಿಕೆ 2575 ರಡಿ ಕಂಡಿಕೆ 4.7 ರನ್ವಯ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಲೆಕ್ಕ ಶೀರ್ಷಿಕೆ 2575-60-265-0-02-034 (ಗುತ್ತಿಗೆ/ಹೊರಗುತ್ತಿಗೆ) ರಡಿ 2025-26ನೇ ಸಾಲಿನಲ್ಲಿ ಒದಗಿಸಿರುವ ಅನುದಾನದ ಪೈಕಿ ರೂ.112.26547 ಲಕ್ಷಗಳನ್ನು, ಬಿಡುಗಡೆ ಮಾಡಲಾಗಿರುತ್ತದೆ.
ಕರ್ನಾಟಕ ಶಾಸಕರ ಸ್ಥಳೀಯ ಪುದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ, ಪ್ರಧಾನ ಲೆಕ್ಕಶೀರ್ಷಿಕೆ 4575 ರಡಿ ಎರಡನೇ ಕಂತಿನ ಅನುದಾನವಾಗಿ 224 ವಿಧಾನ ಸಭಾ ಕ್ಷೇತ್ರಗಳಿಗೆ ಹಾಗೂ 71 ಮಾನ್ಯ ವಿಧಾನ ಪರಿಷತ್ತಿನ ಸದಸ್ಯರು-ಇವರುಗಳಿಗೆ (ಪದಾವಧಿಯನ್ನಾಧರಿಸಿ) ತಲಾ ರೂ.50.00 ಲಕ್ಷಗಳಂತೆ ಒಟ್ಟಾರೆ ರೂ.147.50 ಕೋಟಿಗಳನ್ನು ಬಿಡುಗಡೆ ಮಾಡಲಾಗಿರುತ್ತದೆ.
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ, ಪಧಾನ ಲೆಕ್ಕಶೀರ್ಷಿಕೆ 2575 ರಡಿ ಕಂಡಿಕೆ 4.7 ರನ್ವಯ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಲೆಕ್ಕ ಶೀರ್ಷಿಕೆ 2575-60-265-0-02-034 (ಗುತ್ತಿಗೆ/ಹೊರಗುತ್ತಿಗೆ) ರಡಿ 2025-26ನೇ ಸಾಲಿನಲ್ಲಿ ಒದಗಿಸಿರುವ ಅನುದಾನದ ಪೈಕಿ ರೂ. 112.26547 ಲಕ್ಷಗಳನ್ನು, ಬಿಡುಗಡೆ ಮಾಡಲಾಗಿರುತ್ತದೆ.
ಸರ್ಕಾರಿ ಆದೇಶಗಳಲ್ಲಿ, ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ, ಪ್ರಧಾನ ಲೆಕ್ಕಶೀರ್ಷಿಕೆ 4575 ರಡಿ ಎರಡನೇ ಕಂತಿನ ಅನುದಾನವಾಗಿ 224 ವಿಧಾನ ಸಭಾ ಕ್ಷೇತ್ರಗಳಿಗೆ ಹಾಗೂ 71 ಮಾನ್ಯ ವಿಧಾನ ಪರಿಷತ್ತಿನ ಸದಸ್ಯರು-ಇವರುಗಳಿಗೆ (ಪದಾವಧಿಯನ್ನಾಧರಿಸಿ) ತಲಾ ರೂ.50.00 ಲಕ್ಷಗಳಂತೆ ಒಟ್ಟಾರೆ ರೂ.147.50 ಕೋಟಿಗಳನ್ನು ಬಿಡುಗಡೆ ಮಾಡಲಾಗಿರುತ್ತದೆ. ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ, ಪ್ರಧಾನ ಲೆಕ್ಕಶೀರ್ಷಿಕೆ 2575 ರಡಿ ಕಂಡಿಕೆ 4.7 ರನ್ವಯ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಲೆಕ್ಕ ಶೀರ್ಷಿಕೆ 2575-60-265-0-02-034 (ಗುತ್ತಿಗೆ/ಹೊರಗುತ್ತಿಗೆ) ರಡಿ 2025-26ನೇ ಸಾಲಿನಲ್ಲಿ ಒದಗಿಸಿರುವ ಅನುದಾನದ ಪೈಕಿ ರೂ.56.13287 ಲಕ್ಷಗಳನ್ನು ಬಿಡುಗಡೆ ಮಾಡಲಾಗಿರುತ್ತದೆ
ಸರ್ಕಾರಿ ಆದೇಶಗಳಲ್ಲಿ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025- 26 ನೇ ಸಾಲಿನಲ್ಲಿ, ಪ್ರಧಾನ ಲೆಕ್ಕಶೀರ್ಷಿಕೆ 4575 ರಡಿ ಮೂರು ಮತ್ತು ನಾಲ್ಕನೇ ಕಂತಿನ ಅನುದಾನವಾಗಿ 224 ವಿಧಾನ ಸಭಾ ಕ್ಷೇತ್ರಗಳಿಗೆ ಹಾಗೂ 75 ಮಾನ್ಯ ವಿಧಾನ ಪರಿಷತ್ತಿನ ಸದಸ್ಯರು-ಇವರುಗಳಿಗೆ (ಪದಾವಧಿಯನ್ನಾಧರಿಸಿ) ತಲಾ ರೂ.100.00 ಲಕ್ಷಗಳನ್ನು ಬಿಡುಗಡೆ ಮಾಡಲು ಸರ್ಕಾರವು ಉದ್ದೇಶಿಸಿದೆ. ಅದರಂತೆ ಈ ಕೆಳಕಂಡಂತೆ ಆದೇಶಿಸಿರುವುದಾಗಿ ಹೇಳಿದ್ದಾರೆ.
ಪುಸ್ತಾವನೆಯಲ್ಲಿ ವಿವರಿಸಿರುವಂತೆ, ಕರ್ನಾಟಕ ಶಾಸಕರ ಸ್ಥಳೀಯ ಪುದೇಶಾಭಿವೃದ್ಧಿ ಯೋಜನೆಯಡಿ 2025-26ನೇ ಸಾಲಿನ ಪ್ರಧಾನ ಲೆಕ್ಕಶೀರ್ಷಿಕೆ 4575 ರಡಿ ಮೂರು ಮತ್ತು ನಾಲ್ಕನೇ ಕಂತಾಗಿ ತಲಾ ರೂ.1.00 ಕೋಟಿಗಳನ್ನು ಅನುಬಂಧ-1ರಲ್ಲಿರುವ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ಕೆಳಕಂಡ ಲೆಕ್ಕ ಶೀರ್ಷಿಕೆಗಳಡಿ ಒಟ್ಟು ರೂ.299.00/- ಕೋಟಿಗಳನ್ನು (ಎರಡು ನೂರ ತ್ತೊಂಬತ್ತೊಂಬತ್ತು ಕೋಟಿ ರೂಪಾಯಿಗಳು ಮಾತ್ರ ಬಿಡುಗಡೆ ಮಾಡಿದೆ. ಅನುಬಂಧ-2ರಲ್ಲಿ 224 ವಿಧಾನ ಸಭಾ ಕ್ಷೇತ್ರಗಳು ಮತ್ತು ಅನುಬಂಧ-3 ರಲ್ಲಿ 75 ಮಾನ್ಯ ವಿಧಾನ ಪರಿಷತ್ತಿನ ಸದಸ್ಯರ ವಿವರಗಳನ್ನು ಲಗತ್ತಿಸಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications