ಕರ್ನಾಟಕದಲ್ಲಿ 'ರೈಸ್ ಎಟಿಎಂ' ಅಳವಡಿಕೆಗೆ ಚಿಂತನೆ, ಕೆಲಸ ಹೇಗೆ?

ಬೆಂಗಳೂರು, ಸೆಪ್ಟೆಂಬರ್ 1: ಪಡಿತರ ಚೀಟಿ ಹೊಂದಿರುವವರಿಗೆ ಅನುಕೂಲವಾಗುವಂತೆ ನೀರಿನ ಎಟಿಎಂ ಮಾದರಿಯಲ್ಲಿಯೇ ರೈಸ್ ಎಟಿಎಂ ಅಳವಡಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಚಿಂತನೆ ನಡೆಸಿದೆ.

Recommended Video

      1000 ಚದರ ಕಿಲೋಮೀಟರ್ Indiaದ ಗಡಿಯನ್ನು ಆಕ್ರಮಿಸಿಕೊಂಡ China | Oneindia Kannada

      ಕೊರೊನಾ ಲಾಕ್‌ಡೌನ್ ನಡುವೆಯೂ ಜನಸಾಮಾನ್ಯರಿಗೆ ಆಹಾರಕ್ಕೆ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ವಿಯೆಟ್ನಾಂ ಹಾಗೂ ಮಲೇಷ್ಯಾದಲ್ಲಿ ರೈಸ್ ಎಟಿಎಂ ಅಳವಡಿಸುವ ಮೂಲಕ ಅಕ್ಕಿ ವಿತರಣೆ ಮಾಡಲಾಗಿತ್ತು.

      ಯಂತ್ರದಲ್ಲಿ ದುಡ್ಡು ಹಾಕಿದರೆ ಅಕ್ಕಿ ಬರುತ್ತದೆ. ಅದೇ ಮಾದರಿಯಲ್ಲಿ ರಾಜ್ಯದ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವ ಬದಲು ಸುಲಭವಾಗಿ ಅಕ್ಕಿ ಪಡೆಯಲು ಅನುಕೂಲವಾಗುವಂತೆ ರೈಸ್ ಎಟಿಎಂ ಅಳವಡಿಸುವ ಚಿಂತನೆ ಆಹಾರ ಇಲಾಖೆ ಮಾಡಿದೆ.

      Karnataka Government Plans To Start Rice ATMs To Help Public

      ಆದರೆ ಆ ಯಂತ್ರವು ಯಾವ ರೀತಿ ಕೆಲಸ ಮಾಡುತ್ತದೆ. ಇದರಲ್ಲಿ ಪಡಿತರ ಆಹಾರ ಧಾನ್ಯದ ಸೋರಿಕೆ ತಡೆಯಲು ಸಾಧ್ಯವೇ ಎಂಬ ಇತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಬೇಕಿದೆ.

      ರೈಸ್ ಎಟಿಎಂ ಹೇಗೆ ಕೆಲಸ ಮಾಡುತ್ತೆ?:
      -ವಿಯೆಟ್ನಾಂನಲ್ಲಿ ಕೊವಿಡ್‌ನಿಂದ ಕೆಲಸ ಕಳೆದುಕೊಂಡಿರುವ ಬಡವರಿಗೆ ನಿತ್ಯ 2 ರಿಂದ 3 ಕೆಜಿ ಅಕ್ಕಿ ವಿತರಿಸಲು ಎಟಿಎಂ ಬಳಕೆ
      -ಜನರು ಸ್ವಿಚ್ ಪ್ರೆಸ್ ಮಾಡಿದಾಗ ಎಟಿಎಂ ನಿರ್ವಾಹಕರ ಮೊಬೈಲ್‌ಗೆ ಮೆಸೇಜ್ ಹೋಗುತ್ತದೆ.
      -ಆಮೇಲೆ ದೊಡ್ಡ ಡ್ರಂಗಳಲ್ಲಿತುಂಬಿರುವ ಅಕ್ಕಿ ಕೊಳವೆ ಮೂಲಕ ಹೊರಬರುತ್ತದೆ.
      -ಜನರು ಬ್ಯಾಗ್‌ಗಳಲ್ಲಿ ಈ ಅಕ್ಕಿಯನ್ನು ಹಿಡಿದುಕೊಳ್ಳಬೇಕು
      -ದಿನಕ್ಕೆ ಒಬ್ಬರಿಗೆ ಇಷ್ಟೇ ಪ್ರಮಾಣದ ಅಕ್ಕಿ ನೀಡಬೇಕೆಂದು ಮೊದಲೇ ಯಂತ್ರಕ್ಕೆ ನಿಗದಿಪಡಿಸಲಾಗಿರುತ್ತದೆ.
      -ಒಂದು ವೇಳೆ ವ್ಯಕ್ತಿ 2 ಬಾರಿ ಅಕ್ಕಿಗೆ ಬಂದರೆ ಯಂತ್ರದ ಬಳಿ ಇರುವ ಕ್ಯಾಮರಾಗಳು ಆತನ ಚಹರೆಯನ್ನು ಪತ್ತೆಹಚ್ಚುತ್ತವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+