ರಾಜ್ಯ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಕೊಟ್ಟ ಬೊಮ್ಮಾಯಿ ಸರ್ಕಾರ

ಬೆಂಗಳೂರು, ಅ.7: ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಇದೇ ಅಕ್ಟೋಬರ್ ತಿಂಗಳಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲು ಸರ್ಕಾರ ಮುಂದಾಗಿರುವ ಸುದ್ದಿ ಓದಿರಬಹುದು. ಇಂದು ಸರ್ಕಾರಿ ನೌಕರರಿಗೆ ಬಸವರಾಜ ಬೊಮ್ಮಾಯಿ ಸರ್ಕಾರ ಶುಭ ಸುದ್ದಿ ಕೊಟ್ಟಿದೆ. ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 3.75ರಷ್ಟು ಹೆಚ್ಚಳ ಮಾಡಿ ಆದೇಶ(ಆದೇಶ ಸಂಖ್ಯೆ: ಆಇ 40 ಎಸ್‌ಆರ್‌ಪಿ 2022) ಹೊರಡಿಸಲಾಗಿದೆ.

''2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ 1ನೇ ಜುಲೈ 2022 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 27.25 ರಿಂದ ಶೇಕಡ 31ಕ್ಕೆ ಪರಿಷ್ಕರಿಸಿ ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ'' ಎಂದು ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ಡಿಎ ಹೆಚ್ಚಳದಿಂದ 6 ಲಕ್ಷ ಸರ್ಕಾರಿ ನೌಕರರು, 4.5 ಲಕ್ಷ ಪಿಂಚಣಿದಾರರು ಮತ್ತು ವಿವಿಧ ನಿಗಮ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ 3 ಲಕ್ಷ ಉದ್ಯೋಗಿಗಳಿಗೂ ಅಧಿಕ ಮಂದಿಗೆ ಅನುಕೂಲವಾಗಲಿದೆ.

ಯಾರಿಗೆ ಅನ್ವಯ?:

ಯಾರಿಗೆ ಅನ್ವಯ?:

ಸರ್ಕಾರಿ ನೌಕರರಲ್ಲದೆ, ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೂ ಈ ಆದೇಶ ಅನ್ವಯವಾಗಲಿದೆ.

ಯುಜಿಸಿ/ಎಐಸಿಟಿಇ/ಐಸಿಎಆರ್‌ ವೇತನ ಶ್ರೇಣಿಗಳ ನಿವೃತ್ತ ನೌಕರರಿಗೂ ಸಹ ಈ ಆದೇಶಗಳು ಅನ್ವಯಿಸುತ್ತವೆ. ಸರ್ಕಾರದ ಮತ್ತು ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್‌ಚಾರ್ಜ್ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರುಗಳಿಗೆ ಈ ಆದೇಶ ಅನ್ವಯಿಸುತ್ತದೆ.

ಯುಜಿಸಿ/ಎಐಸಿಟಿಇ/ಐಸಿಎಆರ್/ಎನ್‌ಜೆಪಿಸಿ ವೇತನ ಶ್ರೇಣಿಗಳಲ್ಲಿ ಹಾಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್‌ಜೆಪಿಸಿ ಪಿಂಚಣಿದಾರರಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಈ ಆದೇಶದ ಮೇರೆಗೆ ಲಭ್ಯವಿರುವ ತುಟ್ಟಿಭತ್ಯೆಯನ್ನು ನಗದಾಗಿ ಪಾವತಿ ಮಾಡುವುದು ಎಂದಿದೆ.

ತುಟ್ಟಿ ಭತ್ಯೆ(dearness allowance)

ತುಟ್ಟಿ ಭತ್ಯೆ(dearness allowance)

ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ.

ಕೇಂದ್ರ ಸರ್ಕಾರಿ ನೌಕರಿಗೆ ಡಿಎ ಹೆಚ್ಚಳ

ಕೇಂದ್ರ ಸರ್ಕಾರಿ ನೌಕರಿಗೆ ಡಿಎ ಹೆಚ್ಚಳ

ನವರಾತ್ರಿ, ದಸರಾ ಹಬ್ಬದ ಸಂಭ್ರಮದಲ್ಲಿರುವ ನೌಕರರಿಗೆ ಕೇಂದ್ರ ಸರ್ಕಾರ ನಿರೀಕ್ಷಿತ ಗಿಫ್ಟ್ ಕೊಟ್ಟಿದೆ. ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಪ್ರಕಾರ, ದೇಶದಲ್ಲಿ ಒಟ್ಟು 48 ಲಕ್ಷ ಕೇಂದ್ರ ನೌಕರರು ಮತ್ತು ಸುಮಾರು 68.62 ಲಕ್ಷ ಪಿಂಚಣಿದಾರರಿದ್ದಾರೆ. 2022 ರ ಜನವರಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಶೇಕಡ 3ರಷ್ಟು ತುಟ್ಟಿಭತ್ಯೆ ಹೆಚ್ಚಳ ಪಡೆದಿದ್ದರು. ಈಗ ಅದು ಶೇಕಡ 4ಕ್ಕೆ ಹೆಚ್ಚಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

Karnataka hikes DA : ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ: ಬೊಮ್ಮಾಯಿ ಘೋಷಣೆ

ಕೊವಿಡ್-19 ಪಿಡುಗಿನ ಅವಧಿಯಲ್ಲಿ ಸರ್ಕಾರವು ತುಟ್ಟಿಭತ್ಯೆ ಮತ್ತು ಬೆಲೆ ಏರಿಕೆ ಪರಿಹಾರವನ್ನು ತಡೆಹಿಡಿದಿತ್ತು. ಜನವರಿ 1, 2020, ಜುಲೈ 1, 2020 ಮತ್ತು ಜನವರಿ 1, 2021ರ ತುಟ್ಟಿಭತ್ಯೆಗಳನ್ನು ಸರ್ಕಾರ ನೌಕರರಿಗೆ ನೀಡಿರಲಿಲ್ಲ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಡಿಎ ಮತ್ತು ಡಿಆರ್‌ನ ಮೂರು ಹೆಚ್ಚುವರಿ ಕಂತುಗಳನ್ನು ಸ್ಥಗಿತಗೊಳಿಸಿತು. ಕೊವಿಡ್-19 ಪಿಡುಗಿನ ಅವಧಿಯಲ್ಲಿ ಸರ್ಕಾರವು ತುಟ್ಟಿಭತ್ಯೆ ಮತ್ತು ಬೆಲೆ ಏರಿಕೆ ಪರಿಹಾರವನ್ನು ತಡೆಹಿಡಿದಿತ್ತು.

ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳ ಲೆಕ್ಕಾಚಾರ

ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳ ಲೆಕ್ಕಾಚಾರ

ಸರ್ಕಾರಿ ನೌಕರರ ಡಿಎ ಪರ್ಸಂಟೇಜ್:
ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕಳೆದ 12 ತಿಂಗಳಿಗೆ 115.76/115.76‍‍X100.
ಸಾರ್ವಜನಿಕ ವಲಯದ ಸಿಬ್ಬಂದಿ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕೊನೆ 3 ತಿಂಗಳಿಗೆ 126.33/126.33‍‍X100.

ಬೇಸಿಕ್ ಸಂಬಳ 18,000 ರು

* ಹೊಸ ಡಿಎ (34%) 6120 ರು/ಪ್ರತಿ ತಿಂಗಳು
* ಹಾಲಿ ಡಿಎ (31%) 5580 ರು/ಪ್ರತಿ ತಿಂಗಳು

* ತುಟ್ಟಿಭತ್ಯೆ ಏರಿಕೆ ಎಷ್ಟು: 6120- 5580= 540 ರು/ ಪ್ರತಿ ತಿಂಗಳು * ವಾರ್ಷಿಕ ಲೆಕ್ಕಾಚಾರದಂತೆ 540 ರು X 12= 6,480 ರು.

ಗರಿಷ್ಠ ಬೇಸಿಕ್ ಸಂಬಳ 56,900 ರು
* ಹೊಸ ಡಿಎ (34%) 19,346 ರು/ಪ್ರತಿ ತಿಂಗಳು * ಹಾಲಿ ಡಿಎ(31%) 17,639 ರು/ಪ್ರತಿ ತಿಂಗಳು

* ತುಟ್ಟಿಭತ್ಯೆ ಏರಿಕೆ ಎಷ್ಟು: 19346-17639= 1,707 ರು/ ಪ್ರತಿ ತಿಂಗಳು
* ವಾರ್ಷಿಕ ಲೆಕ್ಕಾಚಾರದಂತೆ 1,707 ರು X 12= 20,484 ರು.

ಸೂಚನೆ: ಇದೆ ಮಾದರಿ ಬಳಸಿ ಕರ್ನಾಟಕ ಹಾಲಿ ಡಿಎ 27.25% ಹಾಗೂ ಹೆಚ್ಚಳವಾದ ಡಿಎ ಶೇ 31 ನಮೂದಿಸಿ ಲೆಕ್ಕ ಹಾಕಬಹುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+