ಅರ್ಚರಿಂದ ತಸ್ತಿಕ್ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ: ಏನೆಲ್ಲ ದಾಖಲೆಗಳು ಬೇಕು?
ಬೆಂಗಳೂರು, ಜನವರಿ 08: ಕರ್ನಾಟಕ ರಾಜ್ಯ ಸರ್ಕಾರವು ತನ್ನ ಬಜೆಟ್‌ನಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ ಅರ್ಚಕರ ತಸ್ತಿಕ್ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹೋಗುವಂತೆ ಜಮೆ ಮಾಡುವ ವ್ಯವಸ್ಥೆ ಘೋಷಿಸಿತ್ತು. ಇದೀಗ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ವತಿಯಿಂದ ತಸ್ತಕ್ ಗಾಗಿ ಅರ್ಹ ಅರ್ಚಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯಡಿ ಸೇವೆ ಸಲ್ಲಿಸುತ್ತಿರುವ ಯಾರೆಲ್ಲ ಅರ್ಹ ಅರ್ಚಕರು ಇದ್ದಾರೋ ಅವರೆಲ್ಲರೂ ಸರ್ಕಾರ ಕೊಡಮಾಡುವ ತಸ್ತಿಕ್ ಮೊತ್ತ ಪಡೆಯಬಹುದು. ಅದಕ್ಕಾಗಿ ನೀವು ಆನ್‌ಲೈನ್ ಮೂಲಕ ಇಲ್ಲವೇ ಹತ್ತಿರ ಗ್ರಾಮ ಒನ್ ಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕು. ಕೂಡಲೇ ಅರ್ಜಿ ಸಲ್ಲಿಸಬೇಕು.

ಅರ್ಜಿ ಆಹ್ವಾನದ ಪೂರ್ಣ ವಿವರ
ಅರ್ಜಿ ಆಹ್ವಾನ: ಹಿಂದೂ ಧಾರ್ಮಿಕ ದತ್ತಿ ಸಂಸ್ಥೆ & ಧರ್ಮಾದಾಯ ದತ್ತಿ ಇಲಾಖೆ
ಯಾರಿಂದ: ಅರ್ಚಕರಿಂದ
ಧನಸಹಾಯ ಎಷ್ಟು: 30000 ರೂಪಾಯಿ
ಅವಧಿ: ಆರು ತಿಂಗಳು
ಬೇಕಾಗುವ ದಾಖಲೆಗಳು ಏನು?
ಧಾರ್ಮಿಕ ದತ್ತಿ ಇಲಾಖೆಯಡಿ ವಿವಿಧ ದೇವಸ್ಥಾನಗಳಲ್ಲಿ ಅರ್ಚಕ ವೃತ್ತಿಯಲ್ಲಿ ನಿರತಾದ ಅರ್ಚಕರು ಕೂಡಲೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಈ ಎಲ್ಲ ಅಗತ್ಯ ದಾಖಲುಗಳು ಕಡ್ಡಾಯವಾಗಿ ಬೇಕು ಎಂದು ಇಲಾಖೆ ತಿಳಿಸಿದೆ.
* ದೇವಸ್ಥಾನ ಮುಂದೆ ನಿಂತು ತೆಗೆಸಿದ ಇತ್ತೀಚಿನ ಫೋಟೋ
* ಪಾನ್ ಕಾರ್ಡ್
* ಸರ್ಕಾರದಿಂದ ಮಾನ್ಯತೆ ಪಡೆದ ಪ್ರಮಾಣ ಪತ್ರ
* ಬ್ಯಾಂಕ್ ಖಾತೆ ಸಂಖ್ಯೆ
ಸರ್ಕಾರವು ಅರ್ಚಕರಿಗೆ ಕೊಟ್ಟ ಭರವಸೆಗಳು..
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ 2024-25ನೇ ಸಾಲಿನ ಬಜೆಟ್ ಮಂಡನೆ ವೇಳೆ ಸಿ. ವರ್ಗದ ದೇವಾಲಯಗಳ ಅರ್ಚಕರ ತಸ್ತಿಕ್ ಮೊತ್ತವನ್ನು ನೇರವಾಗಿ ಬ್ಯಾಂಕ್‌ಗೆ ಜಮೆ ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದರು.
ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಇಲಾಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಅರ್ಚಕರು ಮತ್ತು ನೌಕರರ ಮಕ್ಕಳಿಗೆ 2024ರ ಜೂನ್ ನಂತರ ವಿದ್ಯಾರ್ಥಿ ವೇತನ ನೀಡಲಾಗುವುದು. ಈ ವರ್ಷದಿಂದಲೇ ಇದು ಜಾರಿಗೆ ಬರಲಿದೆ. ತಸ್ತಿಕ್ ಹಣ ಬ್ಯಾಂಕ್ ಖಾತೆಗೆ ಜಮೆಗೆ ಸಂಬಂಧಿಸಿದಂತೆ ಮೊಬೈಲ್ ಆಪ್‌ವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಸಿ ವರ್ಗದ ಅರ್ಚಕರಿಗೆ ಮತ್ತವರ ಕುಟುಂಬದವರಿಗೆ ದಕ್ಷಿಣ ಭಾರತ್ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸದನಲ್ಲಿ ಬಿಜೆಪಿ ನಾಯಕರು ಪ್ರಶ್ನೆಗೆ ಸಚಿವರು ಉತ್ತರಿಸಿದ್ದರು.












Click it and Unblock the Notifications