ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುತ್ತಿಗೆ ನೌಕರರಿಗೆ 180 ದಿನ ವೇತನ ಸಹಿತ ಹೆರಿಗೆ ರಜೆ ಮಂಜೂರು ಮಾಡಿ ಆದೇಶ

|
Google Oneindia Kannada News

ಬೆಂಗಳೂರು, ಜೂ. 23: ಸರ್ಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಸರ್ಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮಹಿಳೆಯರಿಗೆ 180 ದಿನಗಳ ವೇತನ ಸಹಿತ ಹೆರಿಗೆ ರಜೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ.

ಈ ಕುರಿತು ಆರ್ಥಿಕ ಇಲಾಖೆ ಮಹತ್ವದ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಹಾಗೂ ಅಂಗ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ 180 ದಿನ ಹೆರಿಗೆ ರಜೆಯನ್ನು ವೇತನ ಸಹಿತ ಮಂಜೂರು ಮಾಡುವಂತೆ ಸೂಚಿಸಲಾಗಿದೆ.

 ಬೆಂಗಳೂರು; ಒಂದು ವಾರದಲ್ಲಿ 10 ವಾರ್ಡ್‌ಗಳಲ್ಲಿ ಕೋವಿಡ್ ಸಂಖ್ಯೆ ಏರಿಕೆ ಬೆಂಗಳೂರು; ಒಂದು ವಾರದಲ್ಲಿ 10 ವಾರ್ಡ್‌ಗಳಲ್ಲಿ ಕೋವಿಡ್ ಸಂಖ್ಯೆ ಏರಿಕೆ

ಕೇವಲ ಸರ್ಕಾರಿ ನೌಕರರಿಗೆ ಮಾತ್ರ 180 ದಿನ ಹೆರಿಗೆ ರಜೆ ಸಿಗುತ್ತಿತ್ತು. ಇದೀಗ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೂ ಈ ಸೌಲಭ್ಯ ವಿಸ್ತರಣೆ ಮಾಡಲಾಗಿದೆ. ಇದರಿಂದ ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಸಂಸ್ಥೆಗಳ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರಲ್ಲಿ ಸಂತಸ ಮನೆಮಾಡಿದೆ.

ಹೆರಿಗೆ ರಜೆ ಪಡೆಯಲು ಏನು ಮಾಡಬೇಕು?

ಹೆರಿಗೆ ರಜೆ ಪಡೆಯಲು ಏನು ಮಾಡಬೇಕು?

ಗುತ್ತಿಗೆ ರಜೆ ಸೌಲಭ್ಯ ಪಡೆಯಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಅದರ ಪ್ರಕಾರ ಮಾತೃತ್ವ ರಜೆ ಪ್ರಾರಂಭದಿಂದ 180 ದಿನಗಳ ವರೆಗೆ ಗುತ್ತಿಗೆ ನೌಕರರಿಗೂ ಹೆರಿಗೆ ರಜೆ ಮಂಜೂರು ಮಾಡಬಹುದು. ಗರ್ಭಸಾವ್ರ ಅಥವಾ ಗರ್ಭಪಾತ ಸಂದರ್ಭದಲ್ಲಿ ಆರು ವಾರಗಳ ರಜೆ ಮೀರಬಾರದು. ಹೆರಿಗೆ ರಜೆ ಪಡೆಯುವ ಮುನ್ನ ಅರ್ಹ ಮಹಿಳೆಯರು ನೊಂದಾಯಿತ ವೈದ್ಯರಿಂದ ಪ್ರಮಾಣ ಪತ್ರ ಪಡೆದು ಸಲ್ಲಿಸಿರಬೇಕು. ಹೆರಿಗೆ ರಜೆ ಮೇಳೆ ತೆರಳುವ ನೌಕರರು ನಿಕಟ ಪೂರ್ವದಲ್ಲಿ ಪಡೆಯುತ್ತಿದ್ದ ವೇತನಕ್ಕೆ ಸಮನಾದ ವೇತನ ಪಡೆಯಲು ಅರ್ಹರು.

ಏಪ್ರಿಲ್ 1, 2022 ರಿಂದಲೇ ಹೆರಿಗೆ ರಜೆ ಅನ್ವಯ:

ಏಪ್ರಿಲ್ 1, 2022 ರಿಂದಲೇ ಹೆರಿಗೆ ರಜೆ ಅನ್ವಯ:

ಇನ್ನು ಎರಡು ಮಕ್ಕಳು ಅಥವಾ ಹೆಚ್ಚು ಮಕ್ಕಳನ್ನು ಹೊಂದಿರುವ ಗುತ್ತಿಗೆ ನೌಕರರು ಈ ಹೆರಿಗೆ ರಜೆ ಸೌಲಭ್ಯ ಪಡೆಯಲು ಅರ್ಹರಲ್ಲ. ಅರ್ಹ ಮಹಿಳೆಯರು ಮಾತೃತ್ವ ರಜೆ ಮಂಜೂರು ಮಾಡುವ ಅಧಿಕಾರಿಗೆ ಸ್ವಯಂ ಘೋಷಣೆ ಸಲ್ಲಿಸಬೇಕು. ಗುತ್ತಿಗೆ ಅವಧಿ ಪೂರ್ಣಗೊಂಡ ಬಳಿಕ ಹೆರಿಗೆ ರಜೆ ಮುಂದುವರೆದಿದ್ದಲ್ಲಿ, ಗುತ್ತಿಗೆ ಕರಾರು ರದ್ದಾದರೆ, ಗರಿಷ್ಠ ರಜೆ ಅವಧಿಯನ್ನು ಮಂಜೂರು ಮಾಡಬೇಕು. ಈ ಸೌಲಭ್ಯ ಏಪ್ರಿಲ್ 1, 2022 ಪೂರ್ವಾನ್ವಯ ಆಗುವಂತೆ ಆದೇಶಿಸಲಾಗಿದೆ. ಅದೇಶದ ಪ್ರತಿಯನ್ನು ರಾಜ್ಯದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ರವಾನಿಸಲಾಗಿದೆ.

ಹೈಕೋರ್ಟ್ ನೀಡಿದ್ದ ಮಹತ್ವದ ತೀರ್ಪು:

ಹೈಕೋರ್ಟ್ ನೀಡಿದ್ದ ಮಹತ್ವದ ತೀರ್ಪು:

ಸರ್ಕಾರಿ ನೌಕರರಿಗೆ ಸಿಗುತ್ತಿರುವ ಹೆರಿಗೆ ರಜೆ ಸೌಲಭ್ಯವನ್ನು ಗುತ್ತಿಗೆ ನೌಕರರಿಗೆ ವಿಸ್ತರಣೆ ಮಾಡುವಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಈ ಕುರಿತು ನಿರ್ದೇಶನ ನೀಡಿತ್ತು. ಸರ್ಕಾರಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಎಸ್. ರಾಜೇಶ್ವರಿ ಎಂಬುವರು ಹೆರಿಗೆ ರಜೆ ಪಡೆದಿದ್ದರು. 2009 ರಿಂದಲೂ ಕಾರ್ಯ ನಿರ್ವಹಿಸುತ್ತಿದ್ದ ರಾಜೇಶ್ವರಿ ಹೆರಿಗೆ ರಜೆ ಮೇಲೆ ತೆರಳಿದ್ದರು. ಆದರೆ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರಿ ಇಲಾಖೆ ನೋಟಿಸ್ ನೀಡಿತ್ತು. ಕರ್ತವ್ಯಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ರಾಜೇಶ್ವರಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಕೆಲಸಕ್ಕೆ ವರದಿ ಮಾಡಿಕೊಳ್ಳಲು ಸರ್ಕಾರಿ ಇಲಾಖೆ ಅವಕಾಶ ಕೊಟ್ಟಿರಲಿಲ್ಲ. ಈ ಬಗ್ಗೆ ನ್ಯಾಯ ಕೋರಿ ರಾಜೇಶ್ವರಿ ಹೈಕೋರ್ಟ್ ಮೊರೆ ಹೋಗಿದ್ದರು.

ಗುತ್ತಿಗೆ ಕೆಲಸ ಮಾಡುವರು ಹೆರಿಗೆ ರಜೆಗೆ ಅರ್ಹರು:

ಗುತ್ತಿಗೆ ಕೆಲಸ ಮಾಡುವರು ಹೆರಿಗೆ ರಜೆಗೆ ಅರ್ಹರು:

ಮೆಟಿರ್ನಿಟಿ ಹಕ್ಕಿನ ತಿದ್ದುಪಡಿ ಕಾಯ್ದೆ ಪ್ರಕಾರ ಮಹಿಳೆಯರಿಗೆ 180 ದಿನ ಹೆರಿಗೆ ರಜೆಯನ್ನು ವೇತನ ಸಹಿತ ಮಂಜೂರು ಮಾಡಲು ಅವಕಾಶ ಕಲ್ಪಿಸಿದೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದರೂ ಅವರಿಗೂ ಈ ಕಾಯ್ದೆಯ ಸೌಲಭ್ಯ ಅನ್ವಯ ಆಗುತ್ತದೆ. ಈ ಮಹಿಳೆಗೆ ಹೆರಿಗೆ ರಜೆ ನೀಡುವ ಜತೆಗೆ ವೇತನ ನೀಡಬೇಕು. ಎರಡು ವಾರದಲ್ಲಿ ಕೆಲಸಕ್ಕೆ ವರದಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿತ್ತು. ಹೈಕೋರ್ಟ್ ಆದೇಶದ ಬೆನ್ನಲ್ಲೇ ಸರ್ಕಾರ ಇದೀಗ ಗುತ್ತಿಗೆ ಮಹಿಳಾ ನೌಕರರಿಗೆ ಅನ್ವಯ ಆಗುವಂತೆ ಹೆರಿಗೆ ರಜೆ ಸೌಲಭ್ಯವನ್ನು ವಿಸ್ತರಣೆ ಮಾಡಿ ಸರ್ಕಾರ ಮಹತ್ವದ ಆದೇಶ ನೀಡಿದೆ.

English summary
Good news for govt contract workers: Karnataka finance department ordered to 180 days Maternity leave for govt departments contract workers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X