ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬಕ್ಕೆ ಭರ್ಜರಿ ಉಡುಗೊರೆ, ಡಿಎ ಶೇಕಡಾ 14.25ಕ್ಕೆ ಏರಿಕೆ! Dearness Allowance

ಸರ್ಕಾರಿ ನೌಕರರು ತಮ್ಮ ಬೇಡಿಕೆಯನ್ನ ಸರ್ಕಾರ ಈಡೇರಿಸುತ್ತಿಲ್ಲ ಅನ್ನೋ ಬೇಸರದಲ್ಲಿ ಇದ್ದರು, ಈ ಕಾರಣಕ್ಕೆ ಪದೇ ಪದೇ ಸರ್ಕಾರಿ ನೌಕರರು ಹೋರಾಟದ ಹಾದಿ ಹಿಡಿಯುವ ಅನಿವಾರ್ಯ ಪರಿಸ್ಥಿತಿಯು ನಿರ್ಮಾಣ ಆಗುತ್ತಿತ್ತು. ಸರ್ಕಾರಿ ಕೆಲಸ ಮಾಡುವವರಿಗೆ ಕೆಲಸಕ್ಕೆ ತಕ್ಕನಾಗಿ ವೇತನ ಅಂದ್ರೆ ಸಂಬಳ ಮತ್ತಿತರ ಸೌಲಭ್ಯ ಸಿಗುತ್ತಿಲ್ಲ ಎಂಬ ಚರ್ಚೆ ಪದೇ ಪದೇ ನಡೆಯುತ್ತಾ ಬಂದಿತ್ತು. ಅದರಲ್ಲೂ ಈ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ಒತ್ತಡ ಕೂಡ ಹಾಕುತ್ತಿದ್ದರು. ಇಂತಹ ಸಮಯದಲ್ಲೇ ದಿಢೀರ್ ಡಿಎ ಶೇಕಡಾ 14.25ಕ್ಕೆ ಏರಿಕೆ ಮಾಡಲಾಗಿದೆ...

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 2023 ವಿಧಾನಸಭೆ ಚುನಾವಣೆ ಗೆದ್ದು ಸರ್ಕಾರ ರಚಿಸುವಲ್ಲಿ ಸರ್ಕಾರಿ ನೌಕರರ ಬೆಂಬಲ ಕೂಡ ದೊಡ್ಡದಾಗಿತ್ತು. ಯಾಕಂದ್ರೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಭಾರಿ ದೊಡ್ಡ ಡಿಮ್ಯಾಂಡ್ ಇಟ್ಟು ಸರ್ಕಾರಿ ನೌಕರರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿದ್ದರು. ಹೀಗಿದ್ದಾಗ 7ನೇ ವೇತನ ಆಯೋಗದ ಬೇಡಿಕೆ ಈಡೇರಿಸಿದ್ದ ರಾಜ್ಯ ಸರ್ಕಾರ, ಇದೀಗ ದೀಪಾವಳಿ ಹಬ್ಬಕ್ಕೆ ಮೊದಲೇ ಭರ್ಜರಿ ಗಿಫ್ಟ್ ಒಂದನ್ನ ಕೊಟ್ಟಿದೆ. ಇದು ಸರ್ಕಾರಿ ನೌಕರರಿಗೆ ಸಖತ್ ಖುಷಿ ಕೊಟ್ಟಿದೆ.

Karnataka Government Employees Got 12 25 to 14 25 Percentage Of Hike In Dearness Allowance

ಡಿಎ ಶೇಕಡಾ 14.25ಕ್ಕೆ ದಿಢೀರ್ ಏರಿಕೆ!

ಹೌದು, ಕರ್ನಾಟಕ ಸರ್ಕಾರ ತುಟ್ಟಿಭತ್ಯೆ (ಡಿಎ) ಶೇಕಡಾ 12.25 ರಿಂದ ಶೇಕಡಾ 14.25ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಇದೀಗ ಜಾರಿಗೆ ಬಂದಿರುವ ಆದೇಶದಿಂದ ಕರ್ನಾಟಕ ರಾಜ್ಯದ ಸರ್ಕಾರಿ ನೌಕರರು ಸೇರಿದಂತೆ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೆ ಸೌಲಭ್ಯ ಸಿಗಲಿದೆ. ಹಾಗೇ ಇವರ ಜೊತೆ ಕರ್ನಾಟಕ ಸರ್ಕಾರದಿಂದ ಸಹಾಯಧನ ಪಡೆಯುವ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೂ ಈ ಆದೇಶವು ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+