SSLC - PUC Exam 2026: ಪಿಯು ವಿದ್ಯಾರ್ಥಿಗಳಿಗೂ ಸಿಹಿಸುದ್ದಿ ಕೊಟ್ಟ ಶಿಕ್ಷಣ ಮಂಡಳಿ
ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಗಳ ತಯಾರಿ, ವೇಳಾಪಟ್ಟಿ ಬಿಡುಗಡೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಮಧ್ಯೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ.
2025-26 ರಿಂದ ಸಿಬಿಎಸ್‌ಇ ಮಾರ್ಗಸೂಚಿಗಳ ಪ್ರಕಾರ ಪರೀಕ್ಷೆ ಎದುರಿಸುವ ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಗುಡ್ ನ್ಯೂಸ್ ಇದಾಗಿದೆ. ಪರೀಕ್ಷೆಗಳಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಿದ್ದ ಕಂಪ್ಯೂಟರ್ ಬಳಕೆಯ ವಿಶೇಷ ಸೌಲಭ್ಯವನ್ನು ದ್ವಿತೀಯ ಪಿಯುಸಿ ದೃಷ್ಟಿಹೀನ ವಿದ್ಯಾರ್ಥಿಗಳಿಗೂ ವಿಸ್ತರಣೆಗೆ ನಿರ್ಧರಿಸಲಾಗಿದೆ. ಇವರು ಸಹ ಪರೀಕ್ಷೆಗಳಲ್ಲಿ ಕಂಪ್ಯೂಟರ್‌ಗಳನ್ನು ಬಳಸಬಹುದಾಗಿದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ (2024-25) ಎಸ್‌ಎಸ್‌ಎಲ್‌ಸಿಯ ದೃಷ್ಟಿಹೀನ ಹೊಂದಿರುವ ವಿದ್ಯಾರ್ಥಿಗಳಿಗೆ ಬರಹಗಾರರ ಬದಲಿಗೆ ಲ್ಯಾಪ್‌ಟಾಪ್‌ಗಳನ್ನು ಬಳಸಲು ಅವಕಾಶ ನೀಡಲಾಗಿತ್ತು. ಆ ವರ್ಷ ಸುಮಾರು 25 ವಿದ್ಯಾರ್ಥಿಗಳು ಈ ಕಂಪ್ಯೂಟರ್ ಬಳಸಿ ಪರೀಕ್ಷೆ ಎದುರಿಸಿದ್ದರು. ಇದೀಗ ಆ ಸೌಲಭ್ಯವನ್ನು ದ್ವಿತೀಯ ಪಿಯು ಅರ್ಹ ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಈ ನಿರ್ಧಾರವನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ವಾಗತಿಸಿದ್ದಾರೆ.
ಹೇಗಿರುತ್ತೆ ಪರೀಕ್ಷೆಗಳಲ್ಲಿ ಲ್ಯಾಪ್‌ಟಾಪ್ ಬಳಕೆ
ಮಂಡಳಿ ತಿಳಿಸಿರುವ ಪ್ರಕಾರ, ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ತಮ್ಮದೇ ಆದ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ತರಬೇಕು. ಅದನ್ನು ಸರಿಯಾಗಿ ಫಾರ್ಮ್ಯಾಟ್ ಮಾಡಿಸಲಾಗುತ್ತದೆ. ಅದರಲ್ಲಿ ಇಂಟರ್ನೆಟ್ ಸಂಪರ್ಕ ಇರದಂತೆ ನೋಡಿಕೊಳ್ಳಲಾಗುತ್ತದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮತ್ತು ಕಂಪ್ಯೂಟರ್-ಸಾಕ್ಷರ ಉಪನ್ಯಾಸಕರು ಆ ಮಕ್ಕಳ ಕಂಪ್ಯೂಟರ್ ಪರಿಶೀಲಿಸುತ್ತಾರೆ.
ಈ ವಿಶೇಷ ವಿದ್ಯಾರ್ಥಿಗಳು ಪ್ರತ್ಯೇಕ ಪರೀಕ್ಷಾ ಕೊಠಡಿಗಳಲ್ಲಿ ಇಡಲಾಗುತ್ತದೆ. ಈಗಾಗಲೇ ರಾಷ್ಟ್ರೀಯ ಅಂಧರ ಸಂಘ (NAB) ಅನುಮೋದಿಸಿದ ತಂತ್ರಾಂಶದ ಸಹಾಯದಿಂದ ಉತ್ತರಗಳನ್ನು ಟೈಪ್ ಮಾಡುತ್ತಾರೆ. ಅವರಿರುವ ಕೊಠಡಿಯಲ್ಲಿ ಪ್ರಶ್ನೆಗಳನ್ನು ಗಟ್ಟಿಯಾಗಿ ಒಬ್ಬರು ಓದುತ್ತಾರೆ. ಪರೀಕ್ಷಾರ್ಥಿಯು ತಾನು ಕೇಳಿದ ಪ್ರಶ್ನೆಗಳಿಗೆ ಗೊತ್ತಿರುವ ಉತ್ತರಗಳನ್ನು ಕಂಪ್ಯೂಟರ್‌ನಲ್ಲಿ ಟೈಪ್ ಮಾಡುತ್ತಾನೆ. ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಅಂಧ ಮಕ್ಕಳಂತೆ ಈ ಭಾರಿ ಪಿಯು ಮಕ್ಕಳು ಉತ್ತರಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಲಿದ್ದಾರೆ.
ಅಧೀಕ್ಷಕರ ಸಹಿ ಮತ್ತು ಸೀಲ್ ಕಡ್ಡಾಯ
ಪರೀಕ್ಷೆ ಪೂರ್ಣಗೊಂಡ ಬಳಿಕ ವಿದ್ಯಾರ್ಥಿಗಳು ಉತ್ತರಗಳನ್ನು ಪುಟ ಸಂಖ್ಯೆಗಳೊಂದಿಗೆ ಸರಳ ಕಾಗದದ ಮೇಲೆ ಮುದ್ರಿಸಬೇಕಾಗುತ್ತದೆ. ಆ ಪುಟಗಳಲ್ಲಿ ಕೊನೆಯ ಪುಟದಲ್ಲಿ ಕೇಂದ್ರದ ಮುಖ್ಯ ಅಧೀಕ್ಷಕರ ಸಹಿ ಮತ್ತು ಸೀಲ್ ಹಾಕಿರುತ್ತಾರೆ.
ಕೊಠಡಿ ಮೇಲ್ವಿಚಾರಕರು ಉತ್ತರ ಪುಸ್ತಕದ ಹಿಂಭಾಗದಲ್ಲಿ ವಿದ್ಯಾರ್ಥಿ ದೃಷ್ಟಿಹೀನ ಎಂದು ಬರೆಯವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ಶಿಕ್ಷಣ ಮಂಡಳಿಯು ದ್ವಿತೀಯ ಪಿಯುಸಿ ದೃಷ್ಟಿಹೀನ ಮಕ್ಕಳಿಗೆ ಬೆಳಕಾಗಿದೆ.
ತಾಂತ್ರಿಕ ಸಮಸ್ಯೆ ಉಂಟಾದರೆ ಮುಂದೇನು?
ಇನ್ನೂ ಕಂಪ್ಯೂಟರ್‌ಗಳಲ್ಲಿ ಉತ್ತರಗಳನ್ನು ಬರೆಸಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲು ವೈದ್ಯಕೀಯ ಪ್ರಮಾಣಪತ್ರವನ್ನು ಒದಗಿಸಿ ಸಂಬಂಧಿಸಿ ಜಿಲ್ಲಾ ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪೂರ್ವ-ವಿಶ್ವವಿದ್ಯಾಲಯ) ಅವರಿಂದ ಅನುಮತಿ ಪಡೆಯಬೇಕು. ಪರೀಕ್ಷೆ ವೇಳೆ ತಾಂತ್ರಿಕ ಸಮಸ್ಯೆ ಉಂಟಾಗಿ ಕಂಪ್ಯೂಟರ್‌ನಲ್ಲಿ ಪರೀಕ್ಷೆ ಬರೆಯಲು ಆಗದೇ ಇದ್ದರೆ, ಲಾಗಿನ್ ಸಮಸ್ಯೆ ಆದರೆ, ಪರೀಕ್ಷಾರ್ಥಿ ನೀಡಿದ ಉತ್ತರಗಳನ್ನು ಬರಹಗಾರರು ಬರೆಯಲು ಸಹ ಅವಕಾಶ ನೀಡಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಈ ನಿರ್ಧಾರಕ್ಕೆ ಬರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಇಂತಹ ವಿದ್ಯಾರ್ಥಿಗಳು ತಾವು ಪರೀಕ್ಷೆ ಬರೆಯುವಾಗ ಸೂಕ್ತ ಬರಹಗಾರರನ್ನು ಹುಡುಕುವುದು ಸಮಸ್ಯೆ ಆಗುತಿತ್ತು. ಇದರಿಂದ ಒಂದಷ್ಟು ಮಂದಿಗೆ ಬರಹಗಾರರು ಸಿಗದೇ ಸಮಸ್ಯೆ ಆಗುತ್ತಿತ್ತು. ಈ ಎಲ್ಲ ಸಮಸ್ಯೆಗಳಿಗೆ ಮಂಡಳಿಯ ನಿರ್ಧಾರ ಪರಿಹಾರ ಒದಗಿಸಿದೆ.
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications