Sugar Production: ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆ ಕುಂಠಿತ
ಕರ್ನಾಟಕದಲ್ಲಿ ಕಬ್ಬು ಬೆಳೆಯ ಕಡಿಮೆ ಉತ್ಪಾದನೆ ಸಕ್ಕರೆ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಈ ತಿಂಗಳಲ್ಲಿ ಪ್ರಾರಂಭವಾದ 2023-24 ರ ಸಕ್ಕರೆ ಋತುವಿನಲ್ಲಿ ರಾಜ್ಯದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ 42.30 ಪ್ರತಿಶತಕ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಇಡೀ ದೇಶದಲ್ಲಿ ಕರ್ನಾಟಕ ಅತಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ಮೂರನೇ ರಾಜ್ಯವಾಗಿದೆ. ಪೂರ್ತಿಯಾದ 2022-23 ಋತುವಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ರಾಜ್ಯದಲ್ಲಿ ಸಕ್ಕರೆ ಉತ್ಪಾದನೆಯು 59.81 ಲಕ್ಷ ಟನ್‌ಗಳಷ್ಟಿತ್ತು. ಈ ಬಾರಿ ಅದು 42.30 ಶೇಕಡಾ ಕಡಿಮೆಯಾಗಲಿದ್ದು 34.51 ಲಕ್ಷ ಟನ್‌ಗಳಿಗೆ ಕುಸಿಯುತ್ತದೆ ಎಂದು ಹೇಳಲಾಗಿದೆ.

ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿ ಕಬ್ಬು ಉತ್ಪಾದನೆಯು ಹಿಂದಿನ ಋತುವಿನಲ್ಲಿ 705 ಲಕ್ಷ ಟನ್‌ಗಳಿಗೆ ಹೋಲಿಸಿದರೆ 2023-24 ರಲ್ಲಿ 520 ಲಕ್ಷ ಟನ್‌ಗಳಿಗೆ ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ.
ಕಬ್ಬಿಬ ಲಭ್ಯತೆ ಈ ಅವಧಿಯಲ್ಲಿ 603.55 ಲಕ್ಷ ಟನ್ ಇದ್ದರೆ, 442 ಲಕ್ಷ ಟನ್‌ಗೆ ಲಭ್ಯತೆ ಕಡಿಮೆಯಾಗಿದೆ. ಪರಿಣಾಮವಾಗಿ, ರಾಜ್ಯದಲ್ಲಿ ಒಟ್ಟು ಸಕ್ಕರೆ ಉತ್ಪಾದನೆಯು 2023-24ರಲ್ಲಿ 34.51 ಲಕ್ಷ ಟನ್‌ಗಳಾಗಲಿದೆ ಎಂದು ಅಂದಾಜಿಸಲಾಗಿದೆ, ಹಿಂದಿನ ಋತುವಿನಲ್ಲಿ 59.81 ಲಕ್ಷ ಟನ್‌ಗಳಷ್ಟು ಉತ್ಪಾದನೆಯಾಗಿತ್ತು.
2022-23ರಲ್ಲಿ 9.91 ಪ್ರತಿಶತದಷ್ಟು ಸಕ್ಕರೆ ಚೇತರಿಕೆಯು ಈ ಋತುವಿನಲ್ಲಿ 8 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ. ಆದರೂ, ಕರ್ನಾಟಕದಲ್ಲಿ ಎಥೆನಾಲ್ ಉತ್ಪಾದನೆಯು 2023-24 ರಲ್ಲಿ 40 ಕೋಟಿ ಲೀಟರ್‌ಗೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ, ಹಿಂದಿನ ಋತುವಿನಲ್ಲಿ ಎಥೆನಾಲ್ ಉತ್ಪಾದನೆ 35 ಕೋಟಿ ಲೀಟರ್‌ಗಳಷ್ಟಿತ್ತು. ರಾಜ್ಯದಲ್ಲಿ ಸುಮಾರು 77 ಆಪರೇಟಿಂಗ್ ಮಿಲ್‌ಗಳಿದ್ದು, ಅವುಗಳಲ್ಲಿ 34 ಡಿಸ್ಟಿಲರಿಗಳನ್ನು ಜೋಡಿಸಿವೆ.
ಮಳೆ ಕೊರತೆ ಕಾರಣ?
ರಾಜ್ಯದಲ್ಲಿ ಮಳೆ ಕೊರತೆಯಾಗಿದ್ದು ಕೃಷಿಗೆ ನೀರಿನ ಕೊರತೆ ಉಂಟಾಗಿದೆ. ಮಂಡ್ಯ, ಚಾಮರಾಜನಗರ, ಮೈಸೂರು, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಬೀದರ್ ಜಿಲ್ಲೆಗಳಲ್ಲಿ ಪ್ರಮುಖವಾಗಿ ಕಬ್ಬು ಬೆಳೆಯಲಾಗುತ್ತದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವುದು ಮಂಡ್ಯ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಬ್ಬು ಬೆಳೆ ಮೇಲೆ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ಕಬ್ಬು ಇಳುವರಿ ಮತ್ತಷ್ಟು ಕಡಿಮೆಯಾಗುವ ಆತಂಕ ಎದುರಾಗಿದೆ.
ಬಾಗಲಕೋಟೆ, ಬಿಜಾಪುರ, ಬೀದರ್ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕೂಡ ಮಳೆ ಕಡಿಮೆಯಾಗಿದ್ದು ಕಬ್ಬು ಕೃಷಿ ಮೇಲೆ ಪರಿಣಾಮ ಬೀರಿದೆ.












Click it and Unblock the Notifications