• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕಕ್ಕೆ ಅನ್ಯಾಯ! ನೆರೆ ಸಂತ್ರಸ್ತರ ಕಣ್ಣೀರು ಒರೆಸದ ಮೋದಿ-ಅಮಿತ್ ಶಾ ಜೋಡಿ

By ಒನ್ಇಂಡಿಯಾ ಕನ್ನಡ ಡೆಸ್ಕ್
|
   Karnataka Flood : ಪ್ರವಾಹ ಸಂತ್ರಸ್ತರಿಗೆ ನಿರಾಸೆ ಹುಟ್ಟಿಸಿದ ಅಮಿತ್ ಶಾ ಹಾಗು ನರೇಂದ್ರ ಮೋದಿ ಜೋಡಿ

   ಕರ್ನಾಟಕ ರಾಜ್ಯದಲ್ಲಿ ಕಂಡು ಕೇಳಿರಿಯದಂಥ ಮಳೆ, ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸುಮಾರು 20ಕ್ಕೂ ಅಧಿಕ ಜಿಲ್ಲೆಗಳ 80ಕ್ಕೂ ಅಧಿಕ ತಾಲೂಕುಗಳು ತತ್ತರಿಸಿವೆ. ಮುಖ್ಯವಾಗಿ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

   ಆದರೆ, ಕೇಂದ್ರ ಸರ್ಕಾರ ಮಾತ್ರ ಪರಿಹಾರ ಘೋಷಣೆ ಮಾಡುವಲ್ಲಿ ವಿಳಂಬವೋ, ನಿರ್ಲಕ್ಷ್ಯವೋ ಎಂಥದ್ದೋ ಧೋರಣೆ ಅರ್ಥವೇ ಆಗುತ್ತಿಲ್ಲ. ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬಹುದು ಎಂಬ ಆಸೆ ಕಮರಿದ್ದು, ಮೋದಿ- ಶಾ ಜೋಡಿಯಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ ಎನ್ನುವುದಕ್ಕಿಂತ ನಮ್ಮ ಸಂಸದರು ತಮ್ಮ ರಾಜ್ಯದ ಪಾಲಿನ ಹಕ್ಕನ್ನು ಗಟ್ಟಿದನಿಯಲ್ಲಿ ಕೇಳುವ ಸ್ಥೈರ್ಯ ಉಳಿಸಿಕೊಂಡಿಲ್ಲ ಎನ್ನಬಹುದು.

   "ಕರ್ನಾಟಕದಲ್ಲಿ ಪ್ರವಾಹ: ಮೋದಿ 1000 ಕೋಟಿ ರೂ ಬಿಡುಗಡೆ ಮಾಡಲಿ"

   ಸಾವು ನೋವಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಸಂತ್ರಸ್ತರಿಗೆ ಪರಿಹಾರ ಹಣದ ರೂಪದಲ್ಲಿ ಕೊಟ್ಟು ನೀಗಿಸಲು ಸಾಧ್ಯವಿಲ್ಲ. ಆದರೆ, ರಾಜ್ಯ, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡರೂ ಅದು ಕಡಿಮೆಯೇ, ಈ ಸಂದರ್ಭದಲ್ಲಿ ಸರ್ಕಾರವನ್ನು ದೂಷಿಸುವುದು ನಮ್ಮ ಉದ್ದೇಶವಲ್ಲ, ಸಮಸ್ಯೆಗೆ ಸೂಕ್ತ ಸಂದರ್ಭದಲ್ಲಿ ಸ್ಪಂದಿಸುವುದು ಅಗತ್ಯ, ಬೆಂಕಿ ಬಿದ್ದಾಗ ಬಾವಿ ತೋಡುವ ನಮ್ಮ ಜನ, ಬಾಯಾರಿದಾಗ ನೀರುಣಿಸುವುದು ಮುಖ್ಯವಲ್ಲವೇ..

   ಮೋದಿ ಭೇಟಿಯಾದ ಯಡಿಯೂರಪ್ಪ: ನೆರವಿಗಾಗಿ ಮತ್ತೆ ಮನವಿ

   ಬಿಎಸ್ವೈ ಹಾಗೂ ಮೋದಿ ಭೇಟಿ: ಶುಕ್ರವಾರದಂದು ದೆಹಲಿಯಲ್ಲಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆಗಸ್ಟ್ 16ರಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಕರ್ನಾಟಕದ ಪ್ರವಾಹ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ನೆರೆ ಸಂತ್ರಸ್ತರಿಗೆ ನೆರವಾಗುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

   ತಕ್ಷಣಕ್ಕೆ 2000 ಕೋಟಿ ರು ನೀಡಿ : ಯಡಿಯೂರಪ್ಪ

   ತಕ್ಷಣಕ್ಕೆ 2000 ಕೋಟಿ ರು ನೀಡಿ : ಯಡಿಯೂರಪ್ಪ

   ಮೋದಿ ಅವರ ಮುಂದೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಭವಿಸಿರುವ ಅಂದಾಜು ನಷ್ಟದ ಲೆಕ್ಕಾಚಾರವನ್ನು ಹೇಳಿರುವ ಯಡಿಯೂರಪ್ಪ, ಸುಮಾರು 40 ಸಾವಿರ ಕೋಟಿ ನಷ್ಟ ತೋರಿಸಿದ್ದಾರೆ. ಈ ಪೈಕಿ ಕೇಂದ್ರ ಸರ್ಕಾರದಿಂದ 10 ಸಾವಿರ ಕೋಟಿ ರು ನಿರೀಕ್ಷೆಯಿದ್ದು, ತುರ್ತಾಗಿ 2000 ಕೋಟಿ ರು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಮುಂದೆ ಕರ್ನಾಟಕದ ಪ್ರವಾಹ ಸ್ಥಿತಿಯನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸುವಂತೆ ಸಿಎಂ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್ ಅಶೋಕ, ಗೋವಿಂದ ಕಾರಜೋಳ ಅವರಿದ್ದ ತಂಡ ಮನವಿ ಸಲ್ಲಿಸಿಲ್ಲ, ಈ ಬಗ್ಗೆ ಕೇಂದ್ರ ಸರ್ಕಾರವು ಯಾವುದೇ ಭರವಸೆಯನ್ನು ನೀಡಿಲ್ಲ.

   ಅರ್ಧ ರಾಜ್ಯ ಮುಳುಗಿದರೂ ವಿಪತ್ತಿಗೆ ಪರಿಹಾರವಿಲ್ಲ

   ಅರ್ಧ ರಾಜ್ಯ ಮುಳುಗಿದರೂ ವಿಪತ್ತಿಗೆ ಪರಿಹಾರವಿಲ್ಲ

   ಜಲ ಪ್ರವಾಹದಿಂದ ರಾಜ್ಯದ ಬಹುತೇಕ ಭಾಗ ಹಾನಿಗೀಡಾಗಿದೆ, 62ಕ್ಕೂ ಅಧಿಕ ಮಂದಿ ಮೃತರಾಗಿದ್ದರೆ, ಮನೆ, ಕೃಷಿ ಭೂಮಿ, ಹೆದ್ದಾರಿ, ಸಾಕು ಪ್ರಾಣಿಗಳು, ಜಾನುವಾರುಗಳ ಸಾವಿನ ಸಂಖ್ಯೆ ಲೆಕ್ಕ ಸಿಕ್ಕಿಲ್ಲ. ಆದರೆ, ಕೇಂದ್ರ ಸರ್ಕಾರದಿಂದ ಬಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಅವರು ಪ್ರವಾಹ ಪರಿಸ್ಥಿತಿ ವೀಕ್ಷಿಸಿ, ತೆರಳಿದರೂ ಯಾವುದೇ ಪರಿಹಾರ ಬಗ್ಗೆ ಘೋಷಣೆಯಾಗಿಲ್ಲ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಬಳಿಕ ಕರ್ನಾಟಕಕ್ಕೆ ಪರಿಹಾರ ಘೋಷಣೆ ಮಾಡುವ ನಿರೀಕ್ಷೆಯೂ ಹುಸಿಯಾಗಿದೆ.

   ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹರಿದು ಬಂದ ಹಣವೆಷ್ಟು?

   ಐದು ದಶಕಗಳ ನಂತರ ಭಾರಿ ಪ್ರಾಕೃತಿಕ ವಿಕೋಪ

   ಐದು ದಶಕಗಳ ನಂತರ ಭಾರಿ ಪ್ರಾಕೃತಿಕ ವಿಕೋಪ

   ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಸೇರಿದಂತೆ, ರಾಜ್ಯದ ಬಹುಭಾಗ ಮಳೆ ಮತ್ತು ನೆರೆಗೆ ಸಿಲುಕಿ ಅಂದಾಜಿಸಲಾಗದಷ್ಟು ನಷ್ಟವುಂಟಾಗಿದೆ. ಲಕ್ಷಾಂತರ ಮಂದಿ ಸೂರು ಕಳೆದುಕೊಂಡಿದ್ದಾರೆ. ನಾಲ್ಕು ಲಕ್ಷ ಹೆಕ್ಟೇರ್ ಗಳಿಗೂ ಅಧಿಕ ಹೆಚ್ಚು ಕೃಷಿ ಬೆಳೆ ನಾಶವಾಗಿದೆ ಇದೆಲ್ಲವೂ ಸರ್ಕಾರಿ ಲೆಕ್ಕಾಚಾರ, ಅಧಿಕೃತವಾಗಿ ಕೇಂದ್ರ ಸರ್ಕಾರಕ್ಕೆ ತಲುಪಿರುವ ಮಾಹಿತಿ, ಆದರೆ, ಪರಿಹಾರ ಕಾರ್ಯವನ್ನು ಕೇವಲ ಆರ್ಥಿಕ ನಷ್ಟ ಎಂದು ಪರಿಗಣಿಸದೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಎಲ್ಲಾ ಕ್ಷೇತ್ರದ ನಷ್ಟವನ್ನು ಭರಿಸುವ ಸಮಗ್ರ ಪುನರ್ ವಸತಿ, ಪರಿಹಾರ ಯೋಜನೆ ರೂಪಿಸಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

   ವಿಶೇಷ: ಜಲತಜ್ಞ ಡಾ. ದೇವರಾಜ್ ರೆಡ್ಡಿರಿಂದ ಪ್ರವಾಹದ ನೈಜ ಕಾರಣ ಬಹಿರಂಗ

   2008ರಲ್ಲಿ ಕೊಡಗು ಪ್ರವಾಹ

   2008ರಲ್ಲಿ ಕೊಡಗು ಪ್ರವಾಹ

   ಕರ್ನಾಟಕದಲ್ಲಿ ಪ್ರವಾಹ ಪೀಡಿತರ ಬದುಕನ್ನು ಪುನರ್ ರೂಪಿಸಲು ಸರ್ಕಾರ ಮಾತ್ರವಲ್ಲದೆ, ಹಲವು ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿವೆ. ಆದರೆ, ಅನೇಕ ಬಾರಿ ಸಂವಹನ ಕೊರತೆ ಸಮಸ್ಯೆ ಎದುರಾಗಿವೆ. ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ದೇಣಿಗೆ ನೀಡುವುದು ಹೇಗೆ ಎಂದು ಕೇಳುವವರ ಸಂಖ್ಯೆ ಹೆಚ್ಚಿದೆ. ಆದರೆ, ಕೇರಳ, ಒಡಿಶಾ ರಾಜ್ಯದವರು ಹೊಂದಿದಂತೆ ಗೂಗಲ್ ಪೇ ಅಕೌಂಟ್ ಸೌಲಭ್ಯವನ್ನು ಕರ್ನಾಟಕ ರಾಜ್ಯ ಹೊಂದಿಲ್ಲ. ಡಿಜಿಟಲ್ ಇಂಡಿಯಾ, ಡಿಜಿಟಲ್ ಪೇಮೆಂಟ್ ಎಂದು ಮೋದಿ ಹೇಳಿದ್ದು, ರಾಜ್ಯದಲ್ಲಿ ಅನುಷ್ಠಾನವಾಗಿಲ್ಲ, 2008ರ ಕೊಡಗು ಪ್ರವಾಹ ಪರಿಸ್ಥಿತಿ ಅವಲೋಕಿಸಿದ ನಂತರ ಅಂದಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೂರಾರು ಕೋಟಿ ರು ಪರಿಹಾರ ಘೋಷಿಸಿದ್ದರು. ಆದರೆ, ಈ ಬಾರಿ ಯಾವುದೇ ಘೋಷಣೆ ಬಂದಿಲ್ಲ.

   English summary
   Karnataka Floods : Modi Government disappoints, Union government not announced it as National disaster even after the death of more than 200 people across Southern India.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X