• search

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಆಗಸ್ಟ್ 17: ಕರ್ನಾಟಕದಲ್ಲಿ ಸತತವಾಗಿ ಭಾರಿ ಮಳೆ ಸುರಿಯುತ್ತಿದ್ದು, ಜಲಪ್ರವಾಹದ ಭೀತಿಗೊಳಗಾಗಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡದ ಕೆಲ ಭಾಗಗಳಲ್ಲಿ ನಿರಂತರವಾಗಿ ಮಳೆ ಬೀಳುತ್ತಿದ್ದು, ಭೂ ಕುಸಿತ ಉಂಟಾಗಿ, ಪ್ರಮುಖ ಹೆದ್ದಾರಿಗಳ ಸಂಪರ್ಕ ಕಳೆದು ಹೋಗಿದೆ. ಜಲ ಪ್ರಳಯದ ಸ್ಥಿತಿಯಲ್ಲಿ ಸಿಲುಕಿ ತತ್ತರಿಸುತ್ತಿರುವ ಜನತೆಯನ್ನು ಕೈ ಎತ್ತಿ ಹಿಡಿಯಲು ನೆರವಾಗಬೇಕಿದೆ.

  ಕೊಡಗಿನಲ್ಲಿ ಮಡಿಕೇರಿ, ಕುಶಾಲನಗರ, ನಾಪೋಕ್ಲು, ವಿರಾಜಪೇಟೆ, ಸೋಮವಾರಪೇಟೆ, ಶನಿವಾರ ಸಂತೆ, ಮಾಂದಲ್ ಪಟ್ಟಿ ಸೇರಿದಂತೆ ವಿವಿಧೆಡೆ ನಿರಂತರ ಮಳೆಗೆ ಜನತೆ ತತ್ತರಿಸಿದ್ದಾರೆ.

  ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವಾಣಿ ಆರಂಭ

  ಕನ್ನಡದ ಕೆಚ್ಚೆದೆ ವೀರರ ನಾಡು ಕೊಡಗಿನ ಪರಿಸ್ಥಿತಿ ಸುಧಾರಿಸಲು ನೆರವಾಗಿ ಎಂದು ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ದರ್ಶನ್ ತೂಗುದೀಪ ಹಾಗೂ ಕಿಚ್ಚ ಸುದೀಪ ಅವರು ಮನವಿ ಮಾಡಿಕೊಂಡಿದ್ದಾರೆ.

  https://kannada.oneindia.com/news/karnataka/karnataka-floods-how-to-contribute-cm-s-distress-relief-fund-147946.html

  ಪ್ರವಾಹಪೀಡಿತ ಜನರಿಗೆ ಅಕ್ಕಿ, ಗೋಧಿ, ರೆಡಿ ಟು ಈಟ್ ಫುಡ್, ಟೂತ್​ ಪೇಸ್ಟ್​, ಸೋಪು, ಟಾರ್ಚ್​, ಮ್ಯಾಚ್​ ಬಾಕ್ಸ್​, ಕ್ಯಾಂಡಲ್, ಸ್ಯಾನಿಟರಿ ಪ್ಯಾಡ್, ಬ್ಲಾಂಕೇಟ್​​ ಹೀಗೆ ಅಗತ್ಯ ವಸ್ತುಗಳನ್ನು ನೀಡಬಹುದು.

  ಕೊಡಗಿನಲ್ಲಿ ಜಲಪ್ರಳಯ, ಕಣ್ಣೆದುರೇ ಕುಸಿಯುತ್ತಿವೆ ಮನೆ, ಕಾಫಿತೋಟ

  ಸಿಎಂ ಪರಿಹಾರ ನಿಧಿ: ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆಗಿರುವ ಹಾನಿಯನ್ನು ಸರಿಪಡಿಸಲು ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು 200 ಕೋಟಿ ರು ಪರಿಹಾರ ನೀಡಿದ್ದಾರೆ.

  Karnataka Floods : How to contribute to CM’s Distress Relief Fund

  ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ ಗೆ ದೇಣಿಗೆ ನೀಡಲು ಬಯಸುವವರು ನೇರವಾಗಿ ಸಿಎಂ ಕಚೇರಿಗೆ ಭೇಟಿ ನೀಡಬಹುದು ಅಥವಾ ಅಂಚೆ ಮೂಲಕ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತಲುಪಿಸಬಹುದು.

  Karnataka Chief Minister's Relief Fund-Calamity ಹೆಸರಿನಲ್ಲಿ ಚೆಕ್ ಅಥವಾ ಡಿಡಿ ನೀಡಬಹುದು.
  ವಿಳಾಸ:
  ಮುಖ್ಯಮಂತ್ರಿಗಳ ಪರಿಹಾರ ನಿಧಿ
  ಮುಖ್ಯಮಂತ್ರಿಗಳ ಕಚೇರಿ
  ಕರ್ನಾಟಕ ಸರ್ಕಾರ
  ವಿಧಾನಸೌಧ
  ಬೆಂಗಳೂರು-560 001.


  ರಾಷ್ಟ್ರ ರಕ್ಷಣೆಗೆ ಪ್ರತಿ ಮನೆಯಿಂದಲೂ ವೀರರನ್ನ ಕಳುಹುವ, ಅತಿಥಿ ಸತ್ಕಾರಕ್ಕೆ ಹೆಸರಾದ ಮಡಿಕೇರಿಯ ಜನ ಇಂದು ಪ್ರವಾಹ, ಭೂಕುಸಿತಗಳಿಂದಾಗಿ ತತ್ತರಿಸಿದ್ದಾರೆ. ಕಾವೇರಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೆ ಮಳೆಯೂ ಹಗಲಿರುಳೆನ್ನದೇ ನಿರಂತರವಾಗಿ ಸುರಿಯುತ್ತಲೇ ಇದೆ. ಈಗಾಗಲೇ ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿ, ಪ್ರಾಣಹಾನಿಯಾಗಿದೆ. ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗುತ್ತಿದ್ದರೂ ಇನ್ನೂ ಬಹಳ ಮಂದಿ ಅಪಾಯದಲ್ಲಿದ್ದಾರೆ.

  ಮಡಿಕೇರಿ ಮಳೆಯಲ್ಲಿ ಸಿಲುಕಿದವರ ಕರುಣಾಜನಕ ಕಥೆ

  ಸಂತ್ರಸ್ತರಿಗೆ ಆಹಾರ, ಬಟ್ಟೆ, ಔಷಧಿ ಇತ್ಯಾದಿ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಕೆಲವಾರು ಸಂಘಟನೆಗಳು, ಸ್ವಯಂಸೇವಕರು ಕಾರ್ಯನಿರತರಾಗಿದ್ದಾರೆ.

  ರಜೆ ಬಂದರೆ ತಟ್ಟನೆ ಕೊಡಗಿನ ರಮ್ಯ ತಾಣಗಳಿಗೆ ಪ್ರವಾಸ ಹೊರಡುವ ನಾವು ಈಗ ಅಷ್ಟೇ ಸಕ್ರಿಯರಾಗಿ ಪರಿಹಾರ ಕಾರ್ಯದಲ್ಲಿ ಕೈಜೋಡಿಸೋಣ ಬನ್ನಿ! ನಿಮಗೆ ಸಾಧ್ಯವಾಗುವ ಯಾವುದೇ ರೀತಿಯಲ್ಲಿ ಸಹಕರಿಸಲು ಅವಕಾಶವಿದೆ.

  ಧನ‌ಸಹಾಯ ಮಾಡಲು ಇಚ್ಛಿಸುವವರು ಕೆಳಗಿನ ಖಾತೆಗಳಿಗೆ ಜಮಾ ಮಾಡಬಹುದಾಗಿದೆ👍

  ರಾಷ್ಟ್ರೀಯ ಸ್ವಯಂಸೇವಕ ಸಂಘ (ಸೇವಾಭಾರತಿ), ಮಡಿಕೇರಿ

  "Rashtriya Swayamsewak Sangh"

  Union Bank of India
  SB A/C No. 348602010009876
  IFSCode: UBIN0534862

  "ROTARY MISTY HILLS"
  Vijaya Bank
  A/c No.142601011001886
  G.
  T.Road, Madikeri Branch,
  Karnataka 571201

  IFSC : VIJB0001426

  ಬೆಂಗಳೂರಿನಿಂದ ಪ್ರವಾಹ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನು ಕಳುಹಿಸಲಿಚ್ಛಿಸುವವರು ಅವುಗಳನ್ನು ಈ ವಿಳಾಸಕ್ಕೆ ತಲುಪಿಸಬಹುದು.

  ಕೊಡಗಿಗೆ ನೆರವಾಗಿ ಎಂದು ದರ್ಶನ್, ಕಿಚ್ಚ ಸುದೀಪ ಮನವಿ

  ಸಂದೀಪ್ ಕುಮಾರ್ ಶೆಟ್ಟಿ,
  ಅಕ್ಷಯ ನಿಲಯ, ಫರ್ಸ್ಟ್ ಕ್ರಾಸ್, ಕುವೆಂಪು ನಗರ (Land Mark ಮಿನಿ ತಾಜ್ ಮಹಲ್)
  ರಾಮಮೂರ್ತಿ ನಗರ, ಬೆಂಗಳೂರು - 16

  Ph: 8147953299


  ಕೊಡಗು ಪರಿಹಾರ ಕಾರ್ಯಾಚರಣೆ: ಮುಖ್ಯ ಕಾರ್ಯದರ್ಶಿಗಳೊಂದಿಗೆ ಮುಖ್ಯಮಂತ್ರಿ ಚರ್ಚೆ- ನಾಳೆ ಉನ್ನತ ಮಟ್ಟದ ಸಭೆ ---- ಕೊಡಗಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನಾಪಡೆ,ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ಕಾರ್ಯನಿರ್ವಹಿಸುತ್ತಿವೆ. #KarnatakaRains

  ದರ್ಶನ್ ತೂಗುದೀಪ ಅವರಿಂದ ಟ್ವೀಟ್, ಕೊಡವ ಸಮಾಜಕ್ಕೆ ಭೇಟಿ ನೀಡಿ ನೆರವು ಕೊಡಿ.

  ರೋಟರಿ ಮೈಸೂರ್ ನಿಂದ ನೆರವಿಗೆ ಮನವಿ

  ಪುನೀತ್ ರಾಜ್ ಕುಮಾರ್ ಫ್ಯಾನ್ ಕ್ಲಬ್ ನಿಂದ ಟ್ವೀಟ್: ಡಾ. ರಾಜ್ ಕುಮಾರ್ ಅಕಾಡೆಮಿ ಫಾರ್ ಸಿವಿಎಲ್ ಸರ್ವೀಸಸ್ ವತಿಯಿಂದ ಮನವಿ

  ಜೆಡಿಎಸ್ ಐಟಿ ವಿಂಗ್

  ಮಲ್ಲೇಶ್ವರಂನ ಶಾಸಕ ಡಾ. ಅಶ್ವಥನಾರಾಯಣ ಅವರಿಂದ ಟ್ವೀಟ್

  ಜಯನಗರ ಶಾಸಕಿ ಸೌಮ್ಯರೆಡ್ಡಿ ಅವರಿಂದ ಮನವಿ

  ಸೇವಾಭಾರತಿಯಿಂದ ನೆರವಿಗೆ ಮನವಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Kanrataka CM Relief Fund Donation: Chief Minister HD Kumarasway has called for help to rebuild the lives of people in the state.Kodagu, Shivamogga, Chikkamagaluru, parts of Hassan and Dakshina Kannada district are worst affected due to heavy rain.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more